ಹೊಸದಿಲ್ಲಿ : ಮೇ 12 ರಂದು 6 ನೇ ಹಂತದ ಲೋಕಸಭಾ ಚುನಾವಣಾ ಮತದಾನ ನಡೆಯಲಿದ್ದು, ಕಾಂಗ್ರೆಸ್ ಅಭ್ಯರ್ಥಿ ಜ್ಯೋತಿರಾಧಿತ್ಯ ಸಿಂಧಿಯಾ ಮತ್ತು ಬಿಜೆಪಿ ಅಭ್ಯರ್ಥಿ, ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಕಣದಲ್ಲಿರುವ ಸಿರಿವಂತ ಅಭ್ಯರ್ಥಿಗಳು ಎಂದು ನ್ಯಾಷನಲ್ ಎಲೆಕ್ಷನ್ ವಾಚ್ ಮತ್ತು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ವರದಿಯಲ್ಲಿ ಹೇಳಿದೆ.
374 ಕೋಟಿ ರೂಪಾಯಿ ಮೌಲ್ಯದ ಸಂಪತ್ತಿನೊಂದಿಗೆ ಸಿಂಧಿಯಾ ಮೊದಲ ಸ್ಥಾನದಲ್ಲಿದ್ದಾರೆ. ಸಿಂಧಿಯಾ ಅವರು ಪಶ್ಚಿಮ ಉತ್ತರ ಪ್ರದೇಶದಕಾಂಗ್ರೆಸ್ ಚುನಾವಣಾ ಉಸ್ತುವಾರಿಯಾಗಿದ್ದಾರೆ.
45,58,00,245 ರೂಪಾಯಿ ಮೌಲ್ಯದ ಚರಾಸ್ತಿ ಮತ್ತು3,28,98,18,500 ರೂ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಸಿಂಧಿಯಾ ಗುನಾ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ.
ಗಂಭೀರ್ ಅವರು 147 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಘೋಷಿಸಿದ್ದು, 1,19,15,87,789 ಚರಾಸ್ತಿ ಮತ್ತು 28,00,00,000 ರೂ ಮೌಲ್ಯದ ಸ್ಥಿರಾಸ್ತಿ ಹೊಂದಿರುವುದಾಗಿ ದಾಖಲೆ ಸಲ್ಲಿಸಿದ್ದಾರೆ. 2017 -18 ರಲ್ಲಿ 12 ಕೋಟಿ ರೂಪಾಯಿ ಆದಾಯ ತೆರಿಗೆ ಕಟ್ಟಿರುವುದಾಗಿ ಗಂಭೀರ್ ತಿಳಿಸಿದ್ದಾರೆ.
102 ಕೋಟಿ ರೂಪಾಯಿ ಮೌಲ್ಯದ ಆಸ್ತಿಯೊಂದಿಗೆ ಭಾರತೀಯ ಲೋಕದಳದ ವಿರೇಂದರ್ ರಾಣಾ ಮೂರನೇ ಸ್ಥಾನದಲ್ಲಿದ್ದಾರೆ.
6 ನೇ ಹಂತದಲ್ಲಿ ಕಣದಲ್ಲಿರುವ ಒಟ್ಟು 979 ಅಭ್ಯರ್ಥಿಗಳ ಪೈಕಿ 967 ಮಂದಿಯ ಸ್ವಯಂಘೋಷಿತ ಅಫಿದವಿತ್‌ಗಳನ್ನು ಎಡಿಆರ್ ವಿಶ್ಲೇಷಿಸಿದೆ.
6 ನೇ ಹಂತದಕಣದಲ್ಲಿರುವ ಅಭ್ಯರ್ಥಿಗಳ ಸರಾಸರಿ ಆಸ್ತಿ 3.41 ಕೋಟಿ ರೂಪಾಯಿ ಆಗಿದೆ.
ಕಣದಲ್ಲಿರುವ ಬಿಜೆಪಿಯ 54 ಅಭ್ಯರ್ಥಿಗಳ ಪೈಕಿ 46 ಅಭ್ಯರ್ಥಿಗಳು, ಕಾಂಗ್ರೆಸ್ನಿಂದ 46 ಅಭ್ಯರ್ಥಿಗಳ ಪೈಕಿ 37 ಮಂದಿ , ಬಿಎಸ್ಪಿಯ 49 ಅಭ್ಯರ್ಥಿಗಳಲ್ಲಿ 31, ಆಪ್‌ನ 12 ಅಭ್ಯರ್ಥಿಗಳಲ್ಲಿ 6 ಮಂದಿ 307 ಸ್ವತಂತ್ರ ಅಭ್ಯರ್ಥಿಗಳ ಪೈಕಿ 71 ಅಭ್ಯರ್ಥಿಗಳು ಕೋಟಿ ಮೀರಿದ ಆಸ್ತಿ ಹೊಂದಿರುವುದಾಗಿ ಘೋಷಿಸಿದ್ದಾರೆ.