ಹೊಸದಿಲ್ಲಿ: ಜ್ಯೋತಿ ಯರ್ರಾಜಿ ವನಿತೆಯರ 100 ಮೀ. ಹರ್ಡಲ್ಸ್‌ನಲ್ಲಿ ಎರಡು ವಾರಗಳ ಅಂತರದಲ್ಲಿ ಮತ್ತೆ ರಾಷ್ಟ್ರೀಯ ದಾಖಲೆಯನ್ನು ಉತ್ತಮಪಡಿಸಿಕೊಂಡ ಸಾಧನೆ ಮಾಡಿದ್ದಾರೆ.
ಇಂಗ್ಲೆಂಡಿನ ಲಾಗ್‌ಬರೋ ಇಂಟರ್‌ನ್ಯಾಶನಲ್ ಆ್ಯತ್ಲೆಟಿಕ್ ಕೂಟದಲ್ಲಿ 22ರ ಹರೆಯದ ಆಂಧ್ರಪ್ರದೇಶ ಮೂಲದ ಜ್ಯೋತಿ 13.11 ಸೆ.ಗಳಲ್ಲಿ ಗುರಿ ತಲುಪಿ ತನ್ನದೇ ರಾಷ್ಟ್ರೀಯ ದಾಖಲೆಯನ್ನು ಉತ್ತಮಪಡಿಸಿಕೊಂಡರು.
ಜ್ಯೋತಿ ಮೇ 10ರಂದು ಲಿಮಾಸೊಲ್‌ನಲ್ಲಿ ನಡೆದ ಸೈಪ್ರಸ್ ಇಂಟರ್‌ನ್ಯಾಶನಲ್ ಕೂಟದಲ್ಲಿ 13.23 ಸೆ.ಗಳಲ್ಲಿ ಗುರಿ ತಲುಪಿ ದಾಖಲೆ ಸ್ಥಾಪಿಸಿದ್ದರು.
ಭುವನೇಶ್ವರದಲ್ಲಿರುವ ರಿಲೆಯನ್ಸ್ ಫೌಂಡೇಶನ್ ಒಡಿಶಾ ಆ್ಯತ್ಲೆಟಿಕ್ಸ್ ಹೈ ಪರ್‌ಫಾರ್‌ವೆುನ್ಸ್ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿರುವ ಜ್ಯೋತಿ ಈ ಮೂಲಕ 2002ರಲ್ಲಿ ಅನುರಾಧಾ ಬಿಸ್ವಾಲ್ ಅವರು ಸ್ಥಾಪಿಸಿದ ರಾಷ್ಟ್ರೀಯ ದಾಖಲೆ (13.38 ಸೆ.) ಯನ್ನು ಅಳಿಸಿ ಹಾಕಿದ್ದರು.