Advertisement
ಜು. 30ರಂದು ಸಯಾನ್‌ನ ಶ್ರೀ ನಿತ್ಯಾನಂದ ಸಭಾಗೃಹದಲ್ಲಿ ಜ್ಯೋತಿ ಕೋ. ಆಪರೇಟಿವ್ ಕ್ರೆಡಿಟ್ ಸೊಸೈಟಿಯ 36ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶೇರುದಾರರು ತಮ್ಮ ಅನಿಸಿಕೆಗಳನ್ನು ತಿಳಿಸಿದರೆ, ಈ ಸೊಸೈಟಿಯ ಏಳ್ಗೆಯಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಸೊಸೈಟಿಯ ಲಾಭದೊಂದಿಗೆ ಷೇರುದಾರರ ಸಂತೋಷವೇ ನಮ್ಮ ಧ್ಯೇಯೋದ್ದೇಶವಾಗಿದೆ. ಕುಲಾಲ ಸಂಘ ಮತ್ತು ಸೊಸೈಟಿಯು ಅನ್ಯೋನ್ಯತೆಯಿಂದ ಸಮಾಜದ ಏಳ್ಗೆಗಾಗಿ ಕಾರ್ಯ ನಿರ್ವಹಿಸುತ್ತಿದೆ. ಈ ಸಂಸ್ಥೆಗಳ ಸೇವೆ ಮಾಡುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಸೊಸೈಟಿಯೊಂದಿಗೆ ಶೇರುದಾರರು ಉತ್ತಮ ರೀತಿಯಲ್ಲಿ ಸ್ಪಂದಿಸಿದಾಗ ಸಾಧನೆಯ ಶಿಖರವೇಲು ಸಾಧ್ಯವಾಗು ತ್ತದೆ. ಸೊಸೈಟಿಯ ಅಭಿವೃದ್ದಿಗೆ ಎಲ್ಲರ ಸಹಕಾರ, ಪ್ರೋತ್ಸಾಹ ಸದಾಯಿರಲಿ ಎಂದರು.
ಸೊಸೈಟಿಯ ಉಪ ಕಾರ್ಯಾಧ್ಯಕ್ಷ ಶೇಖರ್ ಮೂಲ್ಯ ಪಿ. ಅವರು ಮಾತನಾಡಿ, ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿರುವ ಸದಸ್ಯ ಬಾಂಧವರನ್ನು ಕಂಡಾಗ ಸಂತೋಷವಾಗುತ್ತಿದೆ. ಯುವಪೀಳಿಗೆಯನ್ನು ಸೊಸೈಟಿಯ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಇದರಿಂದ ಸೊಸೈಟಿಯ ಬೆಳವಣಿಗೆ ಸಾಧ್ಯ. ತುರ್ತು ಸಾಲ ಮತ್ತು ಇನ್ನಿತರ ಸಾಲ ಯೋಜನೆಗಳ ಪ್ರಯೋಜನವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದರು. ನಿರ್ದೇಶಕಿ ನ್ಯಾಯವಾದಿ ಸವಿನಾ ಎಸ್. ಕುಲಾಲ್ ಅವರು ಮಾತನಾಡಿ, ಶೇರುದಾರರ ಅಭಿನಂದನ ನುಡಿಗಳನ್ನು ಕೇಳಿ ಸಂತೋಷವಾಗುತ್ತಿದೆ. ಜ್ಯೋತಿ ಕ್ರೆಡಿಟ್ ಸೊಸೈಟಿಯ ಪ್ರಕಾಶ ಎಲ್ಲಾ ಕಡೆಗಳಲ್ಲಿ ಹಬ್ಬುತ್ತಿದೆ. ಇದು ಉತ್ತಮ ಬೆಳವಣಿಗೆ ಯಾಗಿದೆ. ಎನ್‌ಪಿಎಯನ್ನು ಶೂನ್ಯದತ್ತ ಕೊಂಡೊಯ್ಯಲು ಸಾಲದಲ್ಲಿ ಸಾಕ್ಷಿದಾರ ರಾಗಿರುವ ಶೇರುದಾರು ಸಹಕರಿಸಬೇಕು. ಸಾಲಗಾರರಿಗೆ ಸಮಯದಲ್ಲಿ ಸಾಲ ಭರಿಸುವಲ್ಲಿ ಅವರು ತಿಳಿಹೇಳಬೇಕು ಎಂದು ನುಡಿದರು.
Related Articles
ಜ್ಯೋತಿಯ ಪ್ರಬಂಧಕ ಗಣೇಶ್ ಸುವರ್ಣ ಅವರು ಮಾತನಾಡಿದರು. ಇದೇ ಸಂದರ್ಭದಲ್ಲಿ 12ನೇ ತರಗತಿ ಮತ್ತು ಉನ್ನತ ವ್ಯಾಸಂಗ ಪಡೆದ ಸೊಸೈಟಿಯ ಸದಸ್ಯರ ಮಕ್ಕಳನ್ನು ಗೌರವಿಸಲಾಯಿತು. ವರ್ಷದ ಅತೀ ಹೆಚ್ಚು ನಿತ್ಯ ಠೇವಣಿ ಸಂಗ್ರಹ ಮಾಡಿದ 23 ಏಜೆಂಟರಲ್ಲಿ ಪ್ರಥಮವಾಗಿ ಬೊರಿವಲಿ ಶಾಖೆಯ ಲಿಂಗಪ್ಪ ಬಂಗೇರ ಮತ್ತು ಕೇಂದ್ರ ಕಚೇರಿಯ ಚಂದ್ರಕಾಂತ್ ಎಲ್. ಬಂಗೇರ ಅವರನ್ನು ಗೌರವಿಸಲಾಯಿತು. ಕಾರ್ಯದರ್ಶಿ ಪಿ. ದೇವದಾಸ್ ಎಲ್. ಕುಲಾಲ್ ಕಾರ್ಯಕ್ರಮ ನಿರ್ವಹಿಸಿದರು. ಗಿರೀಶ್ ಕರ್ಕೇರ ವಂದಿಸಿದರು. ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.
Advertisement