Advertisement

ಮಹಿಳೆಯ ಮೇಲೆ ಅತ್ಯಾಚಾರ ನಡೆಸಿ ಕತ್ತು ಸೀಳಿ ಕೊಂದ ಬಾಲಕ ಅರೆಸ್ಟ್‌

11:49 AM Dec 26, 2018 | udayavani editorial |

ಪುದುಚೇರಿ  : 25 ವರ್ಷ ಪ್ರಾಯದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿ ಆಕೆಯ ಕತ್ತು ಸೀಳಿ ಕೊಂದ ಆರೋಪದ ಮೇಲೆ ಅಪ್ರಾಪ್ತ ವಯಸ್ಸಿನ, 17 ವರ್ಷ ಪ್ರಾಯದ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ಕುಯವರಪಾಳ್ಯ ಎಂಬಲ್ಲಿನ ಮನೆಯಲ್ಲಿ  ತನ್ನ ಮಗಳು ಕತ್ತು ಸೀಳಲ್ಪಟ್ಟ ಸ್ಥಿತಿಯಲ್ಲಿ ಸತ್ತು ಬಿದ್ದಿರುವುದು ಡಿ.18ರಂದು ಪತ್ತೆಯಾಗಿತ್ತು  ಎಂದು ಮೃತ ಮಹಿಳೆಯ ತಾಯಿ ಪೊಲೀಸರಿಗೆ ದೂರು ನೀಡಿದ್ದಳು ಎಂದು ಹಿರಿಯ ಪೊಲೀಸ್‌ ಸುಪರಿಂಟೆಂಡೆಂಟ್‌ ರಹೂಲ್‌ ಅಳವಾಲ್‌ ತಿಳಿಸಿದ್ದಾರೆ. 

ಪೋಸ್ಟ್‌ ಮಾರ್ಟಮ್‌ ವರದಿಯಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿ ಆಕೆಯನ್ನು ಕೊಲ್ಲಲಾಗಿತ್ತೆಂಬ ಎಂಬ ಅಂಶ ಬೆಳಕಿಗೆ ಬಂದಿತ್ತು.

ಕೇಸು ದಾಖಲಿಸಿಕೊಂಡು ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ಮೃತ ಮಹಿಳೆಯ ಮನೆ ಸಮೀಪದಲ್ಲೇ ವಾಸಿಸುತ್ತಿದ್ದ 17ರ ಹರೆಯದ ಬಾಲಕನ ಮೇಲೆ ಸಂಶಯ ಬಂದು ಆತನನ್ನು ವಶಕ್ಕೆ ತೆಗೆದುಕೊಂಡು ತೀವ್ರವಾಗಿ ಪ್ರಶ್ನಿಸಿದಾಗ ಆತ ತಾನು ನಡೆಸಿದ್ದ ಅತ್ಯಾಚಾರ ಮತ್ತು ಕೊಲೆ ಕೃತ್ಯವನ್ನು ಒಪ್ಪಿಕೊಂಡ.

ಪಾರಿವಾಳ ಸಾಕಣೆ ಮಾಡಿಕೊಂಡಿದ್ದ ಆರೋಪಿ ಬಾಲಕನು ತನ್ನ ಪಾರಿವಾಳಗಳು ಮಹಿಳೆಯ ಮನೆಯ ಟೆರೇಸಿಗೆ ಬಂದಿವೆಯೇ ಎಂಬುದನ್ನು ಹುಡುಕಾಡುವ ಸಲುವಾಗಿ ಆಗೀಗ ಎಂಬಂತೆ ಬರುತ್ತಿದ್ದ. ಇದಕ್ಕೆ ಮಹಿಳೆಯು ತೀವ್ರವಾಗಿ ವಿರೋಧಿಸಿದ್ದಳು. 

Advertisement

ಡಿ.18ರಂದು ಆತ ಈ ರೀತಿ ಆಕೆಯ ಮನೆಗೆ ಬಂದಿದ್ದಾಗ ಮನೆಯಲ್ಲಿ ಮಹಿಳೆ ಒಬ್ಬಳೇ ಇದ್ದಳು. ಇದನ್ನು ಗಮನಿಸಿದ ಆತ ಆಕೆಯ ಮೇಲೆ ಅತ್ಯಾಚಾರ ನಡೆಸಿ ಆಕೆಯ ಕತ್ತು ಸೀಳಿ ಕೊಂದಿದ್ದ. ಆಕೆಯ ಮುಖವನ್ನು ಇಟ್ಟಿಗೆಯಿಂದ ಜಜ್ಜಿ ಆಕೆಯಿಂದ ಅತ್ಯಾಚಾರಕ್ಕೆ ಪ್ರತಿರೋಧಿಸದಂತೆ ಮಾಡಿದ್ದ. ರೇಪ್‌ ಬಳಿಕ ಆತ ಮಹಿಳೆಯ ಕತ್ತು ಸೀಳಿ ಆಕೆಯನ್ನು ಕೊಂದಿದ್ದ. 

ಪೊಲೀಸರು ಕೊಲೆ, ಅತ್ಯಾಚಾರಿ ಆರೋಪಿ ಬಾಲಕನನನ್ನು ವಶಕ್ಕೆ ತೆಗೆದುಕೊಂಡು ಆತನನ್ನು ಬಾಲಾಪರಾಧ ಗೃಹಕ್ಕೆ ಕಳುಹಿಸಿದ್ದಾರೆ. ತನಿಖೆ ಮುಂದುವರಿದಿದೆ. 

Advertisement

Udayavani is now on Telegram. Click here to join our channel and stay updated with the latest news.

Next