ಮೆಲ್ಬೋರ್ನ್: ಕ್ರಿಕೆಟ್ ಆಸ್ಟ್ರೇಲಿಯಾ ಕಂಡ ಯಶಸ್ವಿ ಕೋಚ್ ಗಳಲ್ಲಿ ಒಬ್ಬರಾದ ಜಸ್ಟಿನ್ ಲ್ಯಾಂಗರ್ ಅವರು ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಜಸ್ಟಿನ್ ಲ್ಯಾಂಗರ್ ಭವಿಷ್ಯದ ಬಗ್ಗೆ ಕ್ರಿಕೆಟ್ ಆಸ್ಟ್ರೇಲಿಯಾ ಬೋರ್ಡ್ ಸದಸ್ಯರು ಚರ್ಚೆ ನಡೆಸಿದ ಒಂದು ದಿನದ ಬಳಿಕ ಲ್ಯಾಂಗರ್ ಈ ನಿರ್ಧಾರ ಮಾಡಿದ್ದಾರೆ.
ಮೂರು ವರ್ಷಗಳಿಗೂ ಹೆಚ್ಚು ಕಾಲ ಕೋಚ್ ಹುದ್ದೆ ನಿಭಾಯಿಸಿದ್ದ ಲ್ಯಾಂಗರ್ ಕಾಲದಲ್ಲಿ ಆಸೀಸ್ ತಂಡ ಟಿ20 ವಿಶ್ವಕಪ್ ಗೆದ್ದಿತ್ತು. ಲ್ಯಾಂಗರ್ ಅವರ ಅಧಿಕಾರವಧಿ ಅಂತ್ಯಕ್ಕೆ ಇನ್ನು ಐದು ತಿಂಗಳು ಬಾಕಿಯಿತ್ತು.
ಇದನ್ನೂ ಓದಿ:ಆಧುನಿಕ ಸೂಫಿಸಂತ, ಪದ್ಮಶ್ರೀ ಇಬ್ರಾಹಿಂ ಸುತಾರ್ ಇನ್ನಿಲ್ಲ!
ಫೆಬ್ರವರಿ 11 ರಿಂದ ಶ್ರೀಲಂಕಾ ವಿರುದ್ಧ ಐದು ಪಂದ್ಯಗಳ ಟಿ20 ಸರಣಿ ಆಡಲಿದೆ. ಆದರೆ ಲ್ಯಾಂಗರ್ ಅವರು ಮೊದಲೇ ಈ ಸರಣಿಯಿಂದ ವಿಶ್ರಾಂತಿ ಪಡೆದಿದ್ದರು. ಮಾರ್ಚ್‌ನಲ್ಲಿ ಪಾಕಿಸ್ತಾನ ಪ್ರವಾಸಕ್ಕೆ ತಂಡವನ್ನು ಸೇರಿಕೊಳ್ಳುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆಂಡ್ರ್ಯೂ ಮೆಕ್‌ಡೊನಾಲ್ಡ್ ಶ್ರೀಲಂಕಾ ವಿರುದ್ಧದ ತಂಡದ ಉಸ್ತುವಾರಿ ವಹಿಸಲಿದ್ದಾರೆ.
ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ ಬಾಲ್ ಟ್ಯಾಂಪರಿಂಗ್ ವಿವಾದದ ಬಳಿಕ ಜಸ್ಟಿನ್ ಲ್ಯಾಂಗರ್ ತಂಡದ ಕೋಚ್ ಹುದ್ದೆ ಅಲಂಕರಿಸಿದ್ದರು.