Advertisement

ಅನಂತ್‌ – ರಾಧಿಕಾ ಸಂಗೀತ್‌ಗೆ ಜಸ್ಟಿನ್ ಬೀಬರ್‌: ಕಾರ್ಯಕ್ರಮ ನೀಡಲು 83 ಕೋಟಿ ರೂ. ಸಂಭಾವನೆ.!

02:47 PM Jul 04, 2024 | Team Udayavani |

ಮುಂಬಯಿ: ಉದ್ಯಮಿ ಮುಕೇಶ್‌ – ನೀತಾ ಅಂಬಾನಿ ಅವರ ಪುತ್ರ ಅನಂತ್‌ ಅಂಬಾನಿ ಮದುವೆ ಕಾರ್ಯಕ್ರಮಕ್ಕಾಗಿ ಖ್ಯಾತ ಪಾಪ್‌ ಗಾಯಕ ಜಸ್ಟಿನ್ ಬೀಬರ್‌ (Justin Bieber) ಮುಂಬಯಿಗೆ ಆಗಮಿಸಿದ್ದಾರೆ.

Advertisement

ಅನಂತ್ ಅಂಬಾನಿ (Anant Ambani)  ಮತ್ತು ರಾಧಿಕಾ ಮರ್ಚೆಂಟ್ (Radhika Merchant) ಅವರ ಸಂಗೀತ್‌ ಕಾರ್ಯಕ್ರಮದಲ್ಲಿ ಪಾಪ್‌ ಗಾಯಕ ಜಸ್ಟಿನ್‌ ಬೀಬರ್‌ ಮ್ಯೂಸಿಕ್‌ ಪ್ರೋಗ್ರಾಂ ನೀಡಲಿದ್ದಾರೆ. ಇದಕ್ಕಾಗಿ ಅವರು ಗುರುವಾರ (ಜು.4 ರಂದು) ಮುಂಬಯಿಗೆ ಬಂದಿದ್ದಾರೆ. ಶುಕ್ರವಾರ(ಜು.5 ರಂದು) ಸಂಗೀತ್‌ ಕಾರ್ಯಕ್ರಮ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಖ್ಯಾತ ಉದ್ಯಮಿಗಳು, ಸೆಲೆಬ್ರಿಟಿಗಳು ಸೇರಿದಂತೆ ಖ್ಯಾತನಾಮರು ಭಾಗಿಯಾಗಲಿದ್ದಾರೆ.

ಜಸ್ಟಿನ್‌ 7 ವರ್ಷದ ಬಳಿಕ ಭಾರತಕ್ಕೆ ಬಂದಿದ್ದಾರೆ. 2022ರಲ್ಲಿ ಭಾರತದಲ್ಲಿ ಮ್ಯೂಸಿಕ್‌ ಕಾನ್ಸಾರ್ಟ್‌ ಅನೌನ್ಸ್‌ ಮಾಡಿದ್ದರು. ಆದರೆ ಅನಾರೋಗ್ಯದ ಕಾರಣದಿಂದ  ಆ ಕಾರ್ಯಕ್ರಮ ರದ್ದಾಗಿತ್ತು.

ಕೋಟಿ ಕುಳ ಅಂಬಾನಿ ಪುತ್ರನ ಸಂಗೀತ್‌ನಲ್ಲಿ ಕಾರ್ಯಕ್ರಮ ನೀಡಲು ಜಸ್ಟಿನ್‌ ಬರೋಬ್ಬರಿ 83ಕೋಟಿ ರೂ ಸಂಭಾವನೆ ಪಡೆದಿದ್ದಾರೆ ಎಂದು ವರದಿಯಾಗಿದೆ.  ಆ ಮೂಲಕ ಪಾಪ್‌ ಗಾಯಕಿ ರಿಹಾನ್ನಾ ಅವರನ್ನೂ ಜಸ್ಟಿನ್‌ ಮೀರಿಸಿದ್ದಾರೆ.

Advertisement

ಗುಜರಾತ್‌ ನ ಜಾಮ್‌ ನಗರದಲ್ಲಿ ನಡೆದ ಅನಂತ್‌ – ರಾಧಿಕಾ ಅವರ ಮೊದಲ ಪ್ರೀ ವೆಡ್ಡಿಂಗ್‌ ನಲ್ಲಿ ಕಾರ್ಯಕ್ರಮ ನೀಡಿದ್ದ ರಿಹಾನ್ನಾ ಅವರು ಕಾರ್ಯಕ್ರಮಕ್ಕಾಗಿ 74 ಕೋಟಿ ರೂ. ಸಂಭಾವನೆ ಪಡೆದಿದ್ದರು ಎಂದು ವರದಿಯಾಗಿತ್ತು.

ಗಾಯಕ ಎಕಾನ್ ಸುಮಾರು 2 ರಿಂದ 4 ಕೋಟಿ ರೂ. ಪಡೆದಿದ್ದರು. ಗಾಯಕಿ ಶಕೀರಾ 10 ರಿಂದ 15 ಕೋಟಿ ರೂಪಾಯಿಗಳನ್ನು ಪಡೆದಿದ್ದರು. ಕ್ರೂಸ್ ಬ್ಯಾಷ್‌ನಲ್ಲಿನ ಪ್ರೀ ವೆಡ್ಡಿಂಗ್‌ ಕೇಟಿ ಪೆರ್ರಿ 45 ಕೋಟಿ ರೂಪಾಯಿಗಳನ್ನು ಪಡೆದಿದ್ದರು ಎಂದು ವರದಿಯಾಗಿತ್ತು.

ಅನಂತ್ ಮತ್ತು ರಾಧಿಕಾ ಅವರ ಸಂಗೀತ ಸಮಾರಂಭ ಜುಲೈ 5 ರಂದು ಮುಂಬೈಯ ಅವರ ನಿವಾಸ ಆಂಟಿಲಿಯಾದಲ್ಲಿ ನಡೆಯಲಿದೆ. ಜು.12 ರಂದು ಸಾಂಪ್ರದಾಯಿಕವಾಗಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next