ಸಿಜೆಐ ಎನ್.ವಿ. ರಮಣ ನೇತೃತ್ವದ ಕೊಲೀಜಿಯಂ ಗುರುವಾರ ಮತ್ತು ಶುಕ್ರವಾರ ಸಭೆ ನಡೆಸಿ ಈ ನೇಮಕಗಳನ್ನು ಅಂತಿಮಗೊಳಿಸಿ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿದೆ. ಜತೆಗೆ ಐದು ಹೈಕೋರ್ಟ್ ಗಳ ಮುಖ್ಯ ನ್ಯಾಯಮೂರ್ತಿಗಳನ್ನು ವರ್ಗಾವಣೆ ಮಾಡಲಾಗಿದೆ.
Advertisement
ಕರ್ನಾಟಕ ಹೈಕೋರ್ಟ್‌ಗೆ ಮುಖ್ಯ ನ್ಯಾಯಮೂರ್ತಿಯಾಗಿ ಅಲಹಾಬಾದ್ ಹೈಕೋರ್ಟ್‌ನ ಹಿರಿಯ ನ್ಯಾಯಮೂರ್ತಿ ರಿತು ರಾಜ್ ಅವಸ್ಥಿ ಅವರನ್ನು ನೇಮಿಸಲಾಗಿದೆ. ಈ ಮೂಲಕ ದೇಶದ ಹೈಕೋರ್ಟ್‌ಗಳಲ್ಲಿ ತೆರವಾಗಿದ್ದ ನ್ಯಾಯಮೂರ್ತಿಗಳ ಹುದ್ದೆ ತುಂಬಲು ಕೊಲೀಜಿಯಂ ಕ್ರಮ ಕೈಗೊಂಡಿದೆ.
ನ್ಯಾ| ರವಿ ವಿಜಯ ಕುಮಾರ್ ಮಳೀಮಠ 2010ರಲ್ಲಿ ಕರ್ನಾಟಕ ಹೈಕೋರ್ಟ್‌ನ ಶಾಶ್ವತ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು. 2019 ರಲ್ಲಿ ಹಿಮಾಚಲ ಹೈಕೋರ್ಟ್, ಇದೇ ಜುಲೈಯಲ್ಲಿ ಉತ್ತರಾಖಂಡ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿದ್ದರು. ನ್ಯಾ| ಅರವಿಂದ್ ಕುಮಾರ್
ನ್ಯಾ| ಅರವಿಂದ ಕುಮಾರ್ ಸಿಬಿಐ ವಿಶೇಷ ವಕೀಲರಾಗಿದ್ದವರು. 2009ರಲ್ಲಿ ಹೆಚ್ಚುವರಿ ನ್ಯಾಯಮೂರ್ತಿಯಾಗಿ, 2012ರಲ್ಲಿ ಖಾಯಂ ನ್ಯಾಯಮೂರ್ತಿಯಾದರು.