ಇತ್ತೀಚೆಗೆ, ಸಿಎಸ್‌ಎಟಿ ಅಧ್ಯಕ್ಷ ಸ್ಥಾನಕ್ಕೆ ಅವರನ್ನು ನೇಮಿಸುವ ಪ್ರಸ್ತಾವನೆಯನ್ನು ಕೇಂದ್ರ ಸರಕಾರವು ನ್ಯಾ. ಸಿಕ್ರಿ ಅವರ ಮುಂದಿಟ್ಟಿದ್ದು, ಇದಕ್ಕೆ ನ್ಯಾ| ಸಿಕ್ರಿ ಅವರೂ ಒಪ್ಪಿಗೆ ಸೂಚಿಸಿದ್ದರು. ಆದರೆ, ಇದು ಭಾರೀ ಟೀಕೆಗೆ ಕಾರಣವಾಗಿತ್ತು.
Advertisement
ಇತ್ತೀಚೆಗೆ, ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರನ್ನು ಆ ಸ್ಥಾನದಿಂದ ವಜಾಗೊಳಿಸುವ ನಿರ್ಧಾರ ಕೈಗೊಂಡಿದ್ದ ಸಮಿತಿಯ ಸಭೆಯಲ್ಲಿ ನ್ಯಾ| ಸಿಕ್ರಿ ಅವರೂ ಪಾಲ್ಗೊಂಡು ವರ್ಮಾರನ್ನು ವಜಾಗೊಳಿಸುವ ಕೇಂದ್ರ ಸರಕಾರದ ಇರಾದೆ ಪರವಾಗಿ ಮತ ಚಲಾಯಿಸಿದ್ದರು. ಹಾಗಾಗಿ, ನ್ಯಾ| ಸಿಕ್ರಿ ಅವರಿಗೆ ಕೇಂದ್ರ ಸಿಎಸ್‌ಎಟಿ ಅಧ್ಯಕ್ಷ ಸ್ಥಾನ ನೀಡುತ್ತಿದೆ ಎಂದು ಕೆಲವರು ಆರೋಪಿಸಿದ್ದರು.