Advertisement

ನ್ಯಾ|ಶಾಂತನಗೌಡರಿಗೆ ಇಂದು ಅಭಿನಂದನೆ

02:29 PM Mar 15, 2017 | |

ಧಾರವಾಡ: ಶತಮಾನದ ಇತಿಹಾಸ ಹೊಂದಿರುವ ಧಾರವಾಡ ಜಿಲ್ಲಾ ವಕೀಲರ ಸಂಘ, ನ್ಯಾಯಾಂಗ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ.

Advertisement

ಈ ಸಂಘದಲ್ಲಿ ವಕೀಲರ ವೃತ್ತಿ ಆರಂಭಿಸಿ, ಇತ್ತೀಚೆಗೆ ದೇಶದ ಸರ್ವೋತ್ಛ ನ್ಯಾಯಾಲಯದ ನ್ಯಾಯಮೂರ್ತಿಯಾಗಿ ನಿಯುಕ್ತಿಗೊಂಡಿರುವ ಮೋಹನ ಶಾಂತನಗೌಡರ ಅವರ ಸೇರ್ಪಡೆ ಸಂಘದ ಹಿರಿಮೆಗೊಂದು ಹೊಸ ಗರಿ ಎಂದು ವಕೀಲರ ಸಂಘದ ಅಧ್ಯಕ್ಷ ವಿ.ಡಿ. ಕಾಮರಡ್ಡಿ ಹೇಳಿದರು. 

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಂತೋಷವನ್ನು ಹಂಚಿಕೊಳ್ಳಲು ಮತ್ತು ಸಂಭ್ರಮಿಸಲು ಮಾ.15ರಂದು ಮಧ್ಯಾಹ್ನ 2:00ಗಂಟೆಗೆ ವಕೀಲರ ಸಂಘದ ಆವರಣದಲ್ಲಿ ನ್ಯಾಯಮೂರ್ತಿ ಮೋಹನ ಶಾಂತನಗೌಡರ ಅವರಿಗೆ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿದೆ.

ಕಾರ್ಯಕ್ರಮದ ಸಾನ್ನಿಧ್ಯವನ್ನು ವಿಜಯಪುರದ ಜ್ಞಾನ ಯೋಗಾಶ್ರಮದ ಜ್ಞಾನಯೋಗಿ ಸಿದ್ಧೇಶ್ವರ ಸ್ವಾಮೀಜಿ ವಹಿಸಲಿದ್ದಾರೆ ಎಂದು ಹೇಳಿದರು. ಕಾರ್ಯದರ್ಶಿ ಸಿ.ಎಸ್‌. ಪೊಲೀಸ್‌ಪಾಟೀಲ, ಉಪಾಧ್ಯಕ್ಷ ಅಶೋಕ ದೇಸಾಯಿ, ಎನ್‌.ಆರ್‌. ಮಟ್ಟಿ, ಆರ್‌.ಎಸ್‌. ಹಿರೇಮಠ, ಎನ್‌.ಬಿ. ಜೋಡಳ್ಳಿ, ಎಸ್‌.ಎಫ್‌. ಅಂಗಡಿ, ಎಫ್‌.ಎಸ್‌. ರಾಮಣ್ಣವರ, ಆರ್‌.ಜೆ. ರಜಪೂತ್‌, ಎಂ.ಎ. ತೌಂಶಿ, ಎನ್‌.ಎಂ. ಬಿರಾದಾರ, ಸಾವಿತ್ರಿ ಹೂಗಾರ ಪತ್ರಿಕಾಗೋಷ್ಠಿಯಲ್ಲಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next