Advertisement

Supreme court ನೂತನ ಸಿಜೆಐ ಆಗಿ ಪ್ರಮಾಣವಚನ ಸ್ವೀಕರಿಸಿದ ನ್ಯಾ.ಸಂಜೀವ ಖನ್ನಾ

11:27 AM Nov 11, 2024 | Team Udayavani |

ನವದೆಹಲಿ: ಸುಪ್ರೀಂಕೋರ್ಟ್‌ ನ 51ನೇ ಮುಖ್ಯ ನ್ಯಾಯಮೂರ್ತಿ(Chief Justice Of india)ಯಾಗಿ ಜಸ್ಟೀಸ್‌ ಸಂಜೀವ್‌ ಖನ್ನಾ ಸೋಮವಾರ (ನ.11) ಬೆಳಗ್ಗೆ ರಾಷ್ಟ್ರಪತಿ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.

Advertisement

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಿದ  ಖನ್ನಾ ಅವರಿಗೆ  ಪ್ರತಿಜ್ಞಾವಿಧಿ ಬೋಧಿಸಿದರು. ನವೆಂಬರ್‌ 10ರಂದು ಸಿಜೆಐ ಡಿ.ವೈ.ಚಂದ್ರಚೂಡ್‌ ಅವರು ನಿವೃತ್ತಿಯಾಗಿದ್ದು, ಈ ಸ್ಥಾನಕ್ಕೆ ಜಸ್ಟೀಸ್‌ ಸಂಜೀವ್‌ ಖನ್ನಾ ಅವರನ್ನು ಸಿಜೆಐ ಆಗಿ ಶಿಫಾರಸು ಮಾಡಲಾಗಿತ್ತು.

ಡಿ.ವೈ.ಚಂದ್ರಚೂಡ್‌ ಅವರ ಶಿಫಾರಸಿನ ಮೇರೆಗೆ ಕೇಂದ್ರ ಸರ್ಕಾರ ಅಕ್ಟೋಬರ್‌ 24ರಂದು ಜಸ್ಟೀಸ್‌ ಸಂಜೀವ್‌ ಖನ್ನಾ ಅವರು ಮುಂದಿನ ಸಿಜೆಐ ಎಂದು ಘೋಷಿಸಿತ್ತು. 2019ರಿಂದ ಸಂಜೀವ್‌ ಖನ್ನಾ ಅವರು ಸುಪ್ರೀಂಕೋರ್ಟ್‌ ಜಡ್ಜ್‌ ಆಗಿ ಸೇವೆ ಸಲ್ಲಿಸುತ್ತಿದ್ದರು.

ಎಲೆಕ್ಟ್ರೊರಲ್‌ ಬಾಂಡ್‌ ಸ್ಕೀಮ್ಸ್‌, ಆರ್ಟಿಕಲ್‌ 370 ರದ್ದು ಸೇರಿದಂತೆ ಹಲವು ಮಹತ್ವದ ತೀರ್ಪು ನೀಡುವ ಪೀಠದಲ್ಲಿ ಜಸ್ಟೀಸ್‌ ಸಂಜೀವ್‌ ಖನ್ನಾ ಅವರು ಕರ್ತವ್ಯ ನಿರ್ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next