Advertisement

44ನೇ ವರಿಷ್ಠ ನ್ಯಾಯಮೂರ್ತಿಯಾಗಿ ಜ|ಜೆ ಎಸ್‌ ಖೇಹರ್‌ ಪ್ರಮಾಣ ವಚನ

10:49 AM Jan 04, 2017 | Team Udayavani |

ಹೊಸದಿಲ್ಲಿ : ಭಾರತದ ಮುಂದಿನ ವರಿಷ್ಠ ನ್ಯಾಯಮೂರ್ತಿಯಾಗಿ ಜಸ್ಟಿಸ್‌ ಜಗದೀಶ್‌ ಸಿಂಗ್‌ ಖೇಹರ್‌ ಅವರು ಇಂದು ಬುಧವಾರ ಪ್ರಮಾಣ ವಚನ ಸ್ವೀಕರಿಸಿದರು. 

Advertisement

ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರು ಜಸ್ಟಿಸ್‌ ಜೆ ಎಸ್‌ ಖೇಹರ್‌ ಅವರಿಗೆ ರಾಷ್ಟ್ರಪತಿ ಭವನದಲ್ಲಿ ದೇಶದ 44ನೇ ವರಿಷ್ಠ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಬೋಧಿಸಿದರು. 

64ರ ಹರೆಯದ ಜಸ್ಟಿಸ್‌ ಖೇಹರ್‌ ಅವರು ಸಿಕ್ಖ ಸಮುದಾಯದಿಂದ ಬಂದಿರುವ ದೇಶದ ಮೊದಲ ವರಿಷ್ಠ ನ್ಯಾಯಮೂರ್ತಿಯಾಗಿದ್ದಾರೆ. 2017ರ ಆಗಸ್ಟ್‌ 27ರ ವರೆಗಿನ ಏಳು ತಿಂಗಳ ಅವಧಿಗೆ ಇವರು ಈ ಹುದ್ದೆಯನ್ನು ಅಲಂಕರಿಸಲಿದ್ದಾರೆ. 

ಅನೇಕ ಮಹತ್ತರ ತೀರ್ಪುಗಳನ್ನು ನೀಡಿರುವ ಸುಪ್ರೀಂ ಕೋರ್ಟಿನ ನ್ಯಾಯ ಪೀಠದಲ್ಲಿದ್ದ ಜಸ್ಟಿಸ್‌ ಖೇಹರ್‌ ಅವರು ಸಹಾರಾ ಕಂಪೆನಿಯ ಮುಖ್ಯಸ್ಥ ಸುಬ್ರತಾ ರಾಯ್‌ ಅವರನ್ನು ತಿಹಾರ್‌ ಜೈಲಿಗೆ ಕಳುಹಿಸಿದ ಸುಪ್ರೀಂ ಪೀಠದಲ್ಲೂ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next