ಹೊಸದಿಲ್ಲಿ : ಜಸ್ಟಿಸ್ ದೀಪಕ್ ಮಿಶ್ರಾ ಅವರಿಂದು ದೇಶದ 45ನೇ ವರಿಷ್ಠ ನ್ಯಾಯಮೂರ್ತಿಯಾಗಿ (CJI) ಪ್ರಮಾಣ ವಚನ ಸ್ವೀಕರಿಸಿದರು. ಮಿಶ್ರಾ ಅವರು ಜಸ್ಟಿಸ್ ಜಗದೀಶ್ ಸಿಂಗ್ ಖೇಹರ್ ಅವರ ಉತ್ತರಾಧಿಕಾರಿಯಾಗಿದ್ದಾರೆ.
64ರ ಹರೆಯದ ಮಿಶ್ರಾ ಅವರು ಒಡಿಶಾ ಹೈಕೋರ್ಟ್ ಮತ್ತು ಸೇವಾ ನ್ಯಾಯಮಂಡಳಿಯಲ್ಲಿ ಸಾಂವಿಧಾನಿಕ, ಸಿವಿಲ್, ಕ್ರಿಮಿನಲ್, ರೆವೆನ್ಯೂ, ಸೇವೆಗಳು ಮತ್ತು ಸೇಲ್ಸ್ ಟ್ಯಾಕ್ಸ್ ವಿಷಯಗಳಲ್ಲಿ ನ್ಯಾಯವಾದಿಯಾಗಿ ದುಡಿದವರಾಗಿದ್ದಾರೆ. ಇವರಿಗೆ ದೇಶದ ವರಿಷ್ಠ ನ್ಯಾಯಮೂರ್ತಿಯಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪ್ರಮಾಣ ವಚನ ಬೋಧಿಸಿದರು.
ಕಳೆದ ತಿಂಗಳಲ್ಲಿ ವರಿಷ್ಠ ನ್ಯಾಯಮೂರ್ತಿ ಖೇಹರ್ ಅವರು ಜಸ್ಟಿಸ್ ದೀಪಕ್ ಮಿಶ್ರಾ ಅವರನ್ನು ಸಿಜೆಐ ಹುದ್ದೆಗೆ ನಾಮಕರಣ ಮಾಡಿದ್ದರು.
ಜಸ್ಟಿಸ್ ಮಿಶ್ರಾ ಅವರು ಮುಂಬಯಿ ಬ್ಲಾಸ್ಟ್ ಕೇಸಿನ ಅಪರಾಧಿ ಯಾಕೂಬ್ ಮೆಮನ್, ದಿಲ್ಲಿ ರೇಪ್ ಕೇಸ್ ನಿರ್ಭಯಾ ಪ್ರಕರಣದ ನಾಲ್ವರು ಅಪರಾಧಿಗಳಿಗೆ ನೇಣು ಶಿಕ್ಷೆ ಪ್ರಕಟಿಸಿದವರಾಗಿದ್ದಾರೆ.
ಸಿಜೆಐ ದೀಪಕ್ ಮಿಶ್ರಾ ಅವರಿಗೆ 13 ತಿಂಗಳ ಅಧಿಕಾರಾವಧಿ ಇದೆ. ದೀಪಕ್ ಮಿಶ್ರಾ ಅವರ ಕೈಯಲ್ಲೀಗ ರಾಮ ಮಂದಿರ ಮತ್ತು ಬಾಬರಿ ಮಸೀದಿ ಕುರಿತ ವಿವಾದದ ಪ್ರಕರಣ ಇದೆ.