Advertisement
ಇದು ಸೇಡಂ ತಾಲೂಕಿನ ಮುಧೋಳದಲ್ಲಿ ಕ್ಷೇತ್ರದ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ಅವರು ನಡೆಸಿದ ಜನಸ್ಪಂದನದಲ್ಲಿ ಎರಡ್ಮೂರು ದಶಕಗಳಿಂದ ತಮ್ಮ ಹೆಸರಿಗೆ ಆಗದಿರುವ ಜಮೀನು ಜಮೀನು ತಮ್ಮ ಹೆಸರಿಗಾಗುತ್ತಿರುವುದಕ್ಕೆ 44 ರೈತ ಕುಟುಂಬಗಳು ವ್ಯಕ್ತಪಡಿಸಿದ ಸಂತಸವಿದು.
ನೆರವೇರಿಸಲಾಯಿತು. ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ, ಜನಸ್ಪಂದನ ಒಂದು ದಿನಕ್ಕೆ ಮಾತ್ರ ಸಿಮೀತವಲ್ಲ. ವಾರ ಮುಂಚೆ ಹಾಗೂ ಜನಸ್ಪಂದನ ನಂತರ ನೋಡಲ್ ಅ ಧಿಕಾರಿಯೊಬ್ಬರು ಎರಡು ವಾರ ಜನಸ್ಪಂದನಾ ಕೇಂದ್ರದಲ್ಲೇ ಇದ್ದು, ಕಾರ್ಯ ಎಲ್ಲ ದೂರುಗಳಿಗೆ ಪರಿಹಾರ ಕಲ್ಪಿಸಿ ಪ್ರಮಾಣ ಪತ್ರಗಳನ್ನು ಮನೆ ಬಾಗಿಲಿಗೆ ತಂದು ಮುಟ್ಟಿಸಲಿದ್ದಾರೆ ಎಂದರು.
Related Articles
ಅಧಿಕಾರಿಗಳು, ಜೆಸ್ಕಾಂ, ಕಂದಾಯ ಇಲಾಖೆ ಸೇರಿ ಇತರ ಅಧಿಕಾರಿಗಳು ಕೆಳ ಮಟ್ಟದಲ್ಲಿ ಜನ ಸಾಮಾನ್ಯರ ಕೆಲಸಗಳಿಗೆ ಸ್ಪಂದಿಸದಿದ್ದರೆ ಮುಲಾಜಿಲ್ಲದೇ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಇದಕ್ಕೆ ಅವಕಾಶ ನೀಡಬೇಡಿ ಎಂದು ಕಿವಿಮಾತು ಹೇಳಿದರು.
Advertisement
ತಹಶೀಲ್ದಾರ್ ಬಸವರಾಜ ಬೆಣ್ಣೆಶಿರೂರ ಮಾತನಾಡಿ, ಕಂದಾಯ ಇಲಾಖೆಯಿಂದ 110 ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸಲಾಗಿದೆ. ಬಹು ಮುಖ್ಯವಾಗಿ ಜಮೀನು ಹಕ್ಕು ವರ್ಗಾವಣೆ, ಪಹಣಿ ತಿದ್ದುಪಡಿ ಇನ್ಮುಂದೆ ಸರಳವಾಗಿ ನೆರವೇರಿಸಲಾಗುವುದು ಎಂದು ಹೇಳಿದರು. ತಾಪಂ ಇಒ ಗುರುನಾ ಶೆಟಕಾರ, ಕೃಷಿ ಸಹಾಯಕ ನಿರ್ದೇಶಕ ಎ.ವೈ. ಹಂಪಣ್ಣ, ಆರೋಗ್ಯಾಧಿಕಾರಿ ಡಾ.ವೀರೇಂದ್ರ ಪಾಟೀಲ್, ಬಿಇಒ ಸತ್ಯಕುಮಾರ ಭಾಗೋಡಿ, ಸಿಪಿಐಗಳಾದ ರಾಜಶೇಖರ ಹಳಿಗೋಧಿ, ಆನಂದರಾವ್, ಬಿಜೆಪಿ ಅಧ್ಯಕ್ಷ ಪರ್ವತರೆಡ್ಡಿ ಪಾಟೀಲ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾಣಿಕಮ್ಮ ಕಲಾಲ, ತಾಪಂ ಸದಸ್ಯರಾದ ವೆಂಕಟರಾವ ಮಿಸ್ಕಿನ್, ನಾಗರೆಡ್ಡಿ ದೇಶಮುಖ, ಗ್ರಾಪಂ ಉಪಾಧ್ಯಕ್ಷ ಶ್ರೀನಿವಾಸರೆಡ್ಡಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.
ಸಿಎಂ ಒಪ್ಪಿಗೆ ಪಡೆದು ಜನ ಸಾಮಾನ್ಯರಿಗೆ ಸ್ಪಂದಿಸುವ ಜನಸ್ಪಂದನ ನಡೆಸಲಾಗಿದೆ. ಸೇಡಂ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಬದ್ಧತೆ ಹೊಂದಿ ಮುನ್ನಡೆಯಲಾಗುತ್ತಿದೆ. 47 ಹಳ್ಳಿಗಳಿಗೆ ಕುಡಿಯುವ ನೀರು ಹಾಗೂ ಕೃಷಿಗೆ ಸಹಾಯಕವಾಗುವ 639 ಕೋಟಿ ರೂ. ವೆಚ್ಚದ ಏತ ನೀರಾವರಿ ಯೋಜನೆಗೆ ಅನುಮೋದನೆ ದೊರೆತಿದೆ. ಅದೇ ರೀತಿ ಮುಧೋಳ ವಲಯದಲ್ಲಿ 59 ಕೆರೆಗಳಿಗೆ ಸನ್ನತಿ ಬ್ಯಾರೇಜ್‌ದಿಂದ ನೀರು ತುಂಬಿಸುವ ನಿಟ್ಟಿನಸರ್ವೇ ಕಾರ್ಯ ನಡೆದಿದೆ. ರಾಜಕುಮಾರ ಪಾಟೀಲ್ ತೇಲ್ಕೂರ, ಶಾಸಕರು ಸೇಡಂ