Advertisement
ಈ ಕೋವಿಡ್ ಕಾಟ ಇಲ್ಲದೇ ಹೋಗಿದ್ರೆ, ಇಷ್ಟು ಹೊತ್ತಿಗೆ “”ಮದಕರಿ ನಾಯಕ” ಸಿನೆಮಾದ ಶೂಟಿಂಗ್ ನಲ್ಲಿ ಇರ್ತಿದ್ದೆ. ಆದ್ರೆ ಕೊರೊನಾ ಬಂದದ್ದೇ, ಎಲ್ಲಾ ಲೆಕ್ಕಾಚಾರಗಳೂ ಉಲ್ಟಾ ಆಗಿಬಿಟ್ಟವು. ಕಳೆದ 45 ದಿನಗಳಿಂದ ಮನೆಯಲ್ಲೇ ಇದ್ದೇನೆ. ಮನೆಯಲ್ಲೇ ಕುಟುಂಬದವರೆಲ್ಲಾ ಇರ್ತೇವೆ ಅಂದರೆ, ಟೈಮ್ ಪಾಸ್‌ಗೆ ಅಂತ ಎಲ್ಲರೂ ಸೀರಿಯಲ್ ಮೊರೆ ಹೋಗುವುದುಸಾಮಾನ್ಯ ತಾನೇ? ಆದ್ರೆ, ಈಗ ಸೀರಿಯಲ್ ಶೂಟಿಂಗ್ ಕೂಡ ನಿಂತುಹೋಗಿದ್ದರಿಂದ, ಅದನ್ನೂ ನೋಡುತ್ತಿಲ್ಲ. ಬದಲಾಗಿ, ಕ್ಲಾಸಿಕ್ ಅನ್ನಿಸಿದ ಸಿನಿಮಾ ನೋಡ್ತಾ ಇದ್ದೇನೆ. ನೆಟ್ ಫಿಕ್ಸ್, ಅಮೆಜಾನ್ ನಲ್ಲೆಲ್ಲ ಒಳ್ಳೊಳ್ಳೆಯ ಸಿನಿಮಾ ನೋಡಬಹುದು. ಕುಟುಂಬದ ಎಲ್ಲರ ಜೊತೆ ಕೂತು ಸಿನಿಮಾದ ಬಗ್ಗೆ ಚರ್ಚೆ ಮಾಡುವುದು, ಸಮಯ ಸಿಕ್ಕಾಗೆಲ್ಲಾ ಓದುವುದು- ಹೊಸ ಐಡಿಯಾ ಹೊಳೆದರೆ ಅದನ್ನು ಬರೆದು ಇಡುವುದು-ಇಂಥ ಕೆಲಸಗಳ ಮಧ್ಯೆಯೇ ದಿನಗಳು ಕಳೆಯುತ್ತಿವೆ. ನಿಜ ಹೇಳಬೇಕು ಅಂದರೆ, ಕೋವಿಡ್ ನೆಪದಲ್ಲಿ ಬಂದಿದೆಯಲ್ಲ… ಆ ಥರದ
ಅವ್ಯವಸ್ಥೆ ಯಾವತ್ತೂ ಆಗಿರಲಿಲ್ಲ. ಹಾಗಂತ ನಾವು ಏನೂ ಮಾಡುವ ಸ್ಥಿತಿಯಲ್ಲಿ ಇಲ್ಲ. ಬಂದಿದ್ದನ್ನು ಸ್ವೀಕರಿಸಬೇಕು ಅಷ್ಟೇ…