Advertisement

ಒಂದು ಸೆಕೆಂಡಿನ ಅಪ್ಪುಗೆಯಷ್ಟೇ! ನವಜೋತ್‌ ಸಿಧು ಹೇಳಿಕೆ

10:06 AM Nov 28, 2018 | Team Udayavani |

ಹೊಸದಿಲ್ಲಿ: ಪಂಜಾಬ್‌ ಸಚಿವ ನವ್‌ಜೋತ್‌ ಸಿಂಗ್‌ ಸಿಧು ಕರ್ತಾರ್ಪುರ ಕಾರಿಡಾರ್‌ ಅಡಿಗಲ್ಲು ಸಮಾರಂಭಕ್ಕಾಗಿ ಪಾಕಿಸ್ಥಾನಕ್ಕೆ ತೆರಳಿದ್ದಾರೆ. ಇಮ್ರಾನ್‌ ಖಾನ್‌ ಪ್ರಮಾಣ ವಚನ ಸಮಾರಂಭಕ್ಕಾಗಿ ಹಿಂದಿನ ಬಾರಿ ತೆರಳಿದ್ದಾಗ ಸೇನಾ ಮುಖ್ಯಸ್ಥ ಜನರಲ್‌ ಬಾಜ್ವಾರನ್ನು ಅಪ್ಪಿಕೊಂಡಿದ್ದು ತೀವ್ರ ವಿವಾದ ಸೃಷ್ಟಿಸಿದ್ದರ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಧು, ಅದು ಒಂದು ನಿಮಿಷದ ಅಪ್ಪುಗೆಯಷ್ಟೇ. ರಫೇಲ್‌ ಡೀಲ್‌ ಏನೂ ಆಗಿರಲಿಲ್ಲ. ಇಬ್ಬರು ಪಂಜಾಬಿಗಳು ಭೇಟಿ ಮಾಡಿದಾಗ ಅಪ್ಪಿಕೊಳ್ಳುವುದು ಸಾಮಾನ್ಯ ಸಂಗತಿ ಎಂದಿದ್ದಾರೆ. ಬುಧವಾರ ಕರ್ತಾರ್ಪುರ ಕಾರಿ ಡಾರ್‌ ನಿರ್ಮಾಣಕ್ಕೆ ಅಡಿಗಲ್ಲು ಸಮಾರಂಭ ನಡೆಯಲಿದೆ.  

Advertisement

ಈ ಕಾರಿಡಾರ್‌ ಉಭಯ ದೇಶಗಳ ಮಧ್ಯದ ಶತ್ರುತ್ವವನ್ನು ತೊಡೆದುಹಾಕಲಿದೆ. ಮೂರು ತಿಂಗಳ ಹಿಂದೆ ಈ ಬೀಜವನ್ನು ಇಮ್ರಾನ್‌ ಖಾನ್‌ ಬಿತ್ತಿದ್ದರು. ಇದು ಸಿಕ್ಖ್ ಸಮುದಾಯಕ್ಕೆ ಖುಷಿಯ ಸಂಗತಿ ಎಂದು ಸಿಧು ಹೇಳಿದ್ದಾರೆ. ಪಂಜಾಬ್‌ನಲ್ಲಿ ಉಗ್ರರ ದಾಳಿ ಹಾಗೂ ಗಡಿಯಲ್ಲಿ ಯೋಧರ ಹತ್ಯೆ ಘಟನೆಗಳನ್ನು ಖಂಡಿಸಿ ಪಂಜಾಬ್‌ ಸಿಎಂ ಅಮರೀಂದರ್‌ ಪಾಕ್‌ ಆಹ್ವಾನ ತಿರಸ್ಕರಿ ಸಿದ್ದರು. ಆದರೆ, ನವಜೋತ್‌ ಮಾತ್ರ ತಾವು ಹೋಗುವುದು ಖಚಿತ ಎಂದಿದ್ದರು.

ಕರ್ತಾರ್ಪುರದಲ್ಲಿ ರೈಲ್ವೇ ನಿಲ್ದಾಣ: ಕರ್ತಾರ್ಪುರದಲ್ಲಿ ಸಿಕ್ಖ್ ಸಮುದಾಯಕ್ಕೆ ಹೋಟೆಲ್‌ ಹಾಗೂ ವಸತಿ ಗೃಹ ನಿರ್ಮಾ ಣಕ್ಕೆ ಭೂಮಿ ನೀಡಲಾಗುತ್ತದೆ ಹಾಗೂ ಇಲ್ಲಿ ರೈಲ್ವೆ ನಿಲ್ದಾಣವನ್ನೂ ನಿರ್ಮಿಸಲಾಗುತ್ತದೆ ಎಂದು ಪಾಕಿಸ್ಥಾನ ಸರಕಾರ ಹೇಳಿದೆ. ಈಗಾಗಲೇ ನನ್‌ಕಾನಾ ಸಾಹಿಬ್‌ವರೆಗೆ ರೈಲ್ವೆ ವ್ಯವಸ್ಥೆಯಿದ್ದು, ಅಲ್ಲಿಂದ ಕರ್ತಾ ರ್ಪುರಕ್ಕೆ ರೈಲ್ವೇ ಸೌಲಭ್ಯ ಕಲ್ಪಿಸಲಾಗುವುದು ಎಂದು ಕೇಂದ್ರ ಸಚಿವ ಶೇಖ್‌ ರಶೀದ್‌ ಅಹಮದ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next