Advertisement

ಆರ್‌ಸಿಬಿಗೆ ಜೂನಿಯರ್‌ ಡಾಲ?

06:35 AM Feb 27, 2018 | |

ಬೆಂಗಳೂರು: ಭಾರತ ವಿರುದ್ಧ ಇತ್ತೀಚೆಗಷ್ಟೇ ಮುಗಿದ ಟಿ20 ಸರಣಿಯನ್ನು ದಕ್ಷಿಣ ಆಫ್ರಿಕಾ ಕಳೆದುಕೊಂಡಿರಬಹುದು, ಆದರೆ ತಂಡದ ಬೌಲರ್‌ ಓರ್ವ  ತನ್ನ ಪ್ರಥಮ ಅವಕಾಶದಲ್ಲೇ ಪರಿಣಾಮಕಾರಿ ಬೌಲಿಂಗ್‌ ಮೂಲಕ ಪ್ರಭಾವ ಬೀರುವಲ್ಲಿ ಯಶಸ್ವಿಯಾಗಿದ್ದನ್ನು ಮರೆಯುವಂತಿಲ್ಲ. ಅವರೇ ಜೂನಿಯರ್‌ ಡಾಲ!

Advertisement

ಈ ಡಾಲ ಮುಂಬರುವ ಐಪಿಎಲ್‌ನಲ್ಲಿ ರಾಯಲ್‌ ಚಾಲೆಂಜರ್ ಬೆಂಗಳೂರು ತಂಡವನ್ನು ಸೇರಿಕೊಳ್ಳಲಿದ್ದಾರೆಯೇ? ಇಂಥದೊಂದು ಕುತೂಹಲವೀಗ ಗರಿಗೆದರಿದೆ. ಇದಕ್ಕೆ ಟೀಮ್‌ ಇಂಡಿಯಾ ನಾಯಕ ಮತ್ತು ಜೂನಿಯರ್‌ ಡಾಲ ನಡುವೆ ನಡೆದ ಸುದೀರ್ಘ‌ ಸಂಭಾಷಣೆಯೇ ಕಾರಣ.

ನಡೆದದ್ದೇನೆಂದರೆ…
ಶನಿವಾರದ ಅಂತಿಮ ಟಿ20 ಪಂದ್ಯವನ್ನು ಗೆದ್ದು ಭಾರತ ಸರಣಿ ವಶಪಡಿಸಿಕೊಂಡ ಬಳಿಕ ಎರಡೂ ತಂಡಗಳ ಆಟಗಾರರು ಪರಸ್ಪರ ಹಸ್ತಲಾಘವ ಮಾಡಿಕೊಳ್ಳುತ್ತಿದ್ದರು. ಆಗ ಕೊಹ್ಲಿ ಮತ್ತು ಡಾಲ ಮುಖಾಮುಖೀಯಾದಾಗ ಸುದೀರ್ಘ‌ ಮಾತುಕತೆ ನಡೆಸುತ್ತ ನಿಂತಿದ್ದರು. ಆರ್‌ಸಿಬಿ ನಾಯಕನೂ ಆಗಿರುವ ವಿರಾಟ್‌ ಕೊಹ್ಲಿ ದಕ್ಷಿಣ ಆಫ್ರಿಕಾದ ಈ ಯುವ ವೇಗಿಯನ್ನು ತಮ್ಮ ತಂಡಕ್ಕೆ ಸೇರಿಕೊಳ್ಳುವಂತೆ ಆಹ್ವಾನವೇನಾದರೂ ನೀಡಿರಬಹುದೇ ಎಂಬ ಕುತೂಹಲ ಕ್ರಿಕೆಟ್‌ ಅಭಿಮಾನಿಗಳಲ್ಲಿ ಮೂಡಿದೆ. ಅಕಸ್ಮಾತ್‌ ಇಂಥದೊಂದು ಅವಕಾಶ ಲಭಿಸಿದರೆ ಡಾಲ ಕೂಡ “ಕ್ಯಾಶ್‌ ರಿಚ್‌’ ಐಪಿಎಲ್‌ ಆಡುವುದು ಖಚಿತ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next