Advertisement

‘Jungle-raj’ ಲಕ್ಷಾಂತರ ಬಿಹಾರಿಗಳ ಸಂಪತ್ತು ಕಸಿದುಕೊಂಡಿತು: ಕಿಡಿ ಕಾರಿದ ಮೋದಿ

05:11 PM Mar 06, 2024 | Team Udayavani |

ಬೆಟ್ಟಯ್ಯ(ಬಿಹಾರ) :”ಸ್ವಾತಂತ್ರ್ಯದ ನಂತರದ ದಶಕಗಳಲ್ಲಿ, ಬಿಹಾರ ಎದುರಿಸುತ್ತಿರುವ ದೊಡ್ಡ ಸಮಸ್ಯೆ ಯುವಜನರ ವಲಸೆಯಾಗಿದೆ. ಜಂಗಲ್-ರಾಜ್’ ಬಂದಾಗ ಈ ವಲಸೆ ಹೆಚ್ಚಾಯಿತು” ಎಂದು ಪ್ರಧಾನಿ ಮೋದಿ ಬುಧವಾರ ಕಿಡಿ ಕಾರಿದ್ದಾರೆ.

Advertisement

ಸಾರ್ವಜನಿಕ ರ‍್ಯಾಲಿಯಲ್ಲಿ ಮಾತನಾಡಿ, ‘ಜಂಗಲ್-ರಾಜ್’ ನಡೆಸುತ್ತಿರುವ ಕುಟುಂಬಗಳು ತಮ್ಮ ಕುಟುಂಬದ ಬಗ್ಗೆ ಮಾತ್ರ ಚಿಂತಿಸುತ್ತಿದ್ದರು. ಯುವಕರು ಉದ್ಯೋಗಕ್ಕಾಗಿ ಬೇರೆ ರಾಜ್ಯಗಳಿಗೆ ಹೋಗಬೇಕಾಗಿತ್ತು. ಇಲ್ಲಿ ಒಂದು ಕುಟುಂಬ ಮಾತ್ರ ಅಭಿವೃದ್ಧಿ ಹೊಂದುತ್ತಿತ್ತು. ಪ್ರತಿ ಉದ್ಯೋಗಕ್ಕೆ ಪ್ರತಿಯಾಗಿ ಭೂಮಿಯನ್ನು ವಶಪಡಿಸಿಕೊಳ್ಳಲಾಯಿತು. ಅವರನ್ನು ಕ್ಷಮಿಸಬಹುದೇ? ‘ಜಂಗಲ್-ರಾಜ್’ ತಂದದ್ದು ಕುಟುಂಬದ ದೊಡ್ಡ ಅಪರಾಧವಾಗಿದೆ. ಆ ಕುಟುಂಬವು ಲಕ್ಷಾಂತರ ಬಿಹಾರಿಗಳ ಸಂಪತ್ತನ್ನು ಕಸಿದುಕೊಂಡಿತು, ಎನ್‌ಡಿಎ ಸರ್ಕಾರವು ಬಿಹಾರವನ್ನು ಜಂಗಲ್ ರಾಜ್‌ನಿಂದ ಹೊರತಂದು ಇಲ್ಲಿ ಅಭಿವೃದ್ಧಿಯನ್ನು ಮಾಡುತ್ತಿದೆ” ಎಂದರು.

”ಇಂದು ಜಗತ್ತು ಡಿಜಿಟಲ್ ಇಂಡಿಯಾದ ಬಗ್ಗೆ ಚರ್ಚಿಸುತ್ತಿದ್ದು, ಬಹಳಷ್ಟು ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಬೆಟ್ಟಿಯಾ ಹೊಂದಿರುವ ಡಿಜಿಟಲ್ ಮೂಲಸೌಕರ್ಯಗಳಿಲ್ಲ,ದೇಶಿ ನಾಯಕರು ನನ್ನನ್ನು ಭೇಟಿಯಾದಾಗ, ನೀವು ಇಷ್ಟು ವೇಗವಾಗಿ ಇದೆಲ್ಲವನ್ನು ಹೇಗೆ ಮಾಡಿದ್ದೀರಿ ಎಂದು ಕೇಳುತ್ತಾರೆ. ನಾನು ಅವರಿಗೆ ಹೇಳುತ್ತೇನೆ, ಇದನ್ನು ಮಾಡಲಿಲ್ಲ, ಭಾರತದ ಯುವ ಜನರು ಮಾಡುತ್ತಿದ್ದಾರೆ, ಪ್ರತಿಯೊಬ್ಬ ಯುವಕರನ್ನು ಬೆಂಬಲಿಸುವ ಭರವಸೆಯನ್ನು ಮಾತ್ರ ನಾನು ನೀಡಿದ್ದೇನೆ ಎಂದು ಹೇಳಿದೆ. ಮೋದಿ ಗ್ಯಾರಂಟಿ ಎಂದರೆ ಈಡೇರಿಸುವ ಭರವಸೆಯ ಗ್ಯಾರಂಟಿ” ಎಂದರು.

“ವಿಕಸಿತ್ ಭಾರತಕ್ಕಾಗಿ, ಬಿಹಾರವನ್ನು ಅಭಿವೃದ್ಧಿಪಡಿಸುವುದು ಅತ್ಯಗತ್ಯ. ಬಿಹಾರದಲ್ಲಿ ಡಬಲ್ ಇಂಜಿನ್ ಅಭಿವೃದ್ಧಿಯ ನಂತರ ಅಭಿವೃದ್ಧಿ ಹೊಂದಿದ ಬಿಹಾರಕ್ಕೆ ಸಂಬಂಧಿಸಿದ ಸುಮಾರು 13,000 ಕೋಟಿ ರೂಪಾಯಿಗಳ ಕೊಡುಗೆಯಿಂದ ಕೆಲಸಗಳಲ್ಲಿ ವೇಗ ಇಂದು ಬಿಹಾರಕ್ಕೆ ಸಿಕ್ಕಿದೆ” ಎಂದರು.

ಇಡೀ ಬಿಹಾರದ ಜನರು ಭಗವಾನ್ ಶ್ರೀರಾಮ ಮತ್ತು ರಾಮಮಂದಿರದ ವಿರುದ್ಧ INDI ಮೈತ್ರಿಕೂಟದ ಜನರು ಮಾತನಾಡುತ್ತಿರುವ ರೀತಿಯನ್ನು ನೋಡುತ್ತಿದ್ದಾರೆ. ಭಗವಾನ್ ಶ್ರೀರಾಮನನ್ನು ಅವಮಾನಿಸುವವರನ್ನು ಯಾರು ಬೆಂಬಲಿಸುತ್ತಿದ್ದಾರೆಂದು ಬಿಹಾರದ ಜನರು ನೋಡುತ್ತಿದ್ದಾರೆ.
ರಾಮಲಲ್ಲಾನನ್ನು ದಶಕಗಳ ಕಾಲ ಗುಡಾರದಲ್ಲಿಟ್ಟವರು ಇದೇ ಕುಟುಂಬದವರು, ರಾಮಮಂದಿರ ನಿರ್ಮಾಣವಾಗದಂತೆ ನೋಡಿಕೊಳ್ಳಲು ತಮ್ಮ ಕೈಲಾದ ಪ್ರಯತ್ನ ಮಾಡಿದವರು ಇದೇ ಕುಟುಂಬದವರು” ಎಂದು ಲಾಲು ಪ್ರಸಾದ್ ಯಾದವ್ ಕುಟುಂಬದ ವಿರುದ್ಧ ಕಿಡಿ ಕಾರಿದರು.

Advertisement

ಕ್ಷಮೆಯಾಚನೆ
ತಡವಾದ ನನ್ನ ಆಗಮನಕ್ಕಾಗಿ ನಿಮ್ಮ ಕ್ಷಮೆಯಾಚಿಸಲು ಬಯಸುತ್ತೇನೆ. ನಾನು ಬಂಗಾಳದಲ್ಲಿದ್ದೆ, ಈ ದಿನಗಳಲ್ಲಿ, ಬಂಗಾಳದ ಉತ್ಸಾಹವು ವಿಭಿನ್ನವಾಗಿದ್ದು, 12 ಕಿ.ಮೀ ಉದ್ದದ ರೋಡ್‌ಶೋ ಇತ್ತು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next