Advertisement

ಜೂ. 1-3: ಕಸಾಪ ಪುಸ್ತಕ ಮೇಳ, ಸಾಹಿತ್ಯ ಉತ್ಸವ

09:53 PM May 27, 2019 | Team Udayavani |

ಪುತ್ತೂರು: ಕ.ಸಾ.ಪ. ಪುತ್ತೂರು ತಾಲೂಕು ಘಟಕದ ವತಿಯಿಂದ ಜೂ. 1ರಿಂದ 3ರ ತನಕ ಶ್ರೀ ಮಹಾಲಿಂಗೇಶ್ವರ ಸಭಾಭವನದಲ್ಲಿ ಪುಸ್ತಕ ಮೇಳ, ಸಾಹಿತ್ಯ ಉತ್ಸವ, ಮಕ್ಕಳಿಗೆ ಅಭಿನಂದನೆ ಹಾಗೂ ಕೃತಿಗಳ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ ಎಂದು ಅಧ್ಯಕ್ಷ ಐತಪ್ಪ ನಾಯ್ಕ ತಿಳಿಸಿದ್ದಾರೆ.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂ. 1ರಂದು ಅಪರಾಹ್ನ ಶಾಸಕ ಸಂಜೀವ ಮಠಂದೂರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಶ್ರೀ ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎನ್‌. ಸುಧಾಕರ ಶೆಟ್ಟಿ ಪುಸ್ತಕ ಮೇಳವನ್ನು ಉದ್ಘಾಟಿಸಲಿದ್ದಾರೆ. ಕ.ಸಾ.ಪ. ಜಿಲ್ಲಾಧ್ಯಕ್ಷ ಎಸ್‌. ಪ್ರದೀಪ್‌ ಕಲ್ಕೂರ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ಸಮ್ಮಾನ
2018 -19ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆಯ ಕನ್ನಡ ಪ್ರಥಮ ಭಾಷೆಯಲ್ಲಿ ಶೇ. 100 ಅಂಕ ಪಡೆದ, ತಾಲೂಕಿಗೆ ಪ್ರಥಮ ಮೂರು ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಶೇ. 100 ಫಲಿತಾಂಶ ಪಡೆದ ಶಾಲೆಗಳಿಗೆ ಮತ್ತು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ವಿವೇಕಾನಂದ ಆಂ.ಮಾ. ಪ್ರೌಢ ಶಾಲೆಯ ಸಿಂಚನಲಕ್ಷ್ಮಿ ಅವರನ್ನು ದ.ಕ. ಜಿಲ್ಲಾ ವಿದ್ಯಾಂಗ ಉಪನಿರ್ದೇಶಕ ವೈ. ಶಿವರಾಮಯ್ಯ ಸಮ್ಮಾನಿಸಲಿದ್ದಾರೆ.

ಕೃತಿ ಬಿಡುಗಡೆ
ಎ.ಪಿ. ಉಮಾಶಂಕರಿ ಮರಿಕೆ ಅವರ “ಭಾವಾಂತರಂಗ’ ಹಾಗೂ ರಾಮಕುಂಜ ಪದವಿ ಕಾಲೇಜಿನ ವಿದ್ಯಾರ್ಥಿ ಸಹೋದರಿಯರಾದ ಜ್ಯೋತಿ ರಾವ್‌ ಎಚ್‌. ಮತ್ತು ಜ್ಯೋತ್ಸಾ$° ರಾವ್‌ ಎಚ್‌. ಅವರ “ಬಾಳಿನಾಗಸದಿಂದ’ ಕವನ ಸಂಕಲನಗಳನ್ನು ಮಂಗಳೂರು ಆಕಾಶವಾಣಿ ನಿರ್ದೇಶಕಿ ಉಷಾಲತಾ ಸರಪಾಡಿ ಲೋಕಾರ್ಪಣೆಗೊಳಿಸಲಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿ ಸುಕನ್ಯಾ ಡಿ.ಎನ್‌. ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಆಳ್ವಾಸ್‌ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಸಬಿತಾ ಮೋನಿಸ್‌ ಅವರ ವಿಶೇಷ ಸಾಧನೆಯನ್ನು ಗುರುತಿಸಿ ಸಮ್ಮಾನಿಸಲಾಗುವುದು.

ಜೂ. 2ರಂದು ಪೂರ್ವಾಹ್ನ ದ.ಕ. ಜಿಲ್ಲಾ 18ನೇ ಕನ್ನಡ ಸಾಹಿತ್ಯ ಸಮ್ಮೇಳನ ದತ್ತಿನಿಧಿ ಕಾರ್ಯಕ್ರಮದಲ್ಲಿ ಸಾವಯವ ತರಕಾರಿ ಸಂತೆಗೆ ಪ್ರೊ| ಎ.ವಿ. ನಾರಾಯಣ ಚಾಲನೆ ನೀಡಲಿದ್ದಾರೆ. ಅಪರಾಹ್ನ ಲಿಮ್ಮಾ ದಾಖಲೆಯ 10 ಲಕ್ಷ ಪುಸ್ತಕಗಳ ವಾಚನಾಲಯ ನಿರ್ವಾಹಕ ಎಂ. ಅಂಕೇಗೌಡ ಅವರಿಂದ ಉಪನ್ಯಾಸ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಸವಣೂರು ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಕೆ. ಸೀತಾರಾಮ ರೈ ಹಾಗೂ ಸುದಾನ ಶಿಕ್ಷಣ ಸಂಸ್ಥೆಗಳ ಸಂಚಾಲಕ ವಂ| ವಿಜಯ ಹಾರ್ವಿನ್‌ ಭಾಗವಹಿಸಲಿದ್ದಾರೆ.

Advertisement

ಸಮಾರೋಪ
ಜೂ. 3ರಂದು ಸಮಾರೋಪ ಸಮಾರಂಭವು ಕ.ಸಾ.ಪ. ಪೂರ್ವಾಧ್ಯಕ್ಷ ಹರಿಕೃಷ್ಣ ಪುನರೂರು ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಪಿಯುಸಿ ಕನ್ನಡ ಪ್ರಥಮ ಭಾಷೆಯಲ್ಲಿ ಶೇ. 100 ಅಂಕ ಪಡೆದ, ತಾಲೂಕಿಗೆ ಪ್ರಥಮ ಮೂರು ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಶೇ. 100 ಫಲಿತಾಂಶ ಪಡೆದ ಕಾಲೇಜುಗಳನ್ನು ಉದ್ಯಮಿಗಳಾದ ಬಲರಾಮ ಆಚಾರ್ಯ ಹಾಗೂ ಮುಳಿಯ ಶ್ಯಾಮ ಭಟ್‌ ಅಭಿನಂದಿಸಲಿದ್ದಾರೆ. ಪುತ್ತೂರು ಮಹಿಳಾ ಪ್ರ.ದ. ಕಾಲೇಜಿನ ಪ್ರಾಧ್ಯಾಪಕ ಡಾ| ನರೇಂದ್ರ ರೈ ದೇರ್ಲ ಸಮಾರೋಪ ಭಾಷಣ ಮಾಡಲಿದ್ದಾರೆ.

ಕ.ಸಾ.ಪ. ಘಟಕದ ಗೌರವ ಕಾರ್ಯದರ್ಶಿ ಸರೋಜಿನಿ ಮೇನಾಲ, ಗೌರವ ಕೋಶಾಧ್ಯಕ್ಷ ಎನ್‌.ಕೆ. ಜಗನ್ನಿವಾಸ್‌ ರಾವ್‌, ಜ್ಞಾನಗಂಗಾ ಪುಸ್ತಕ ಮಳಿಗೆಯ ಪ್ರಕಾಶ್‌ ಕೊಡೆಂಕಿರಿ, ಸಾವಯವ ಮಳಿಗೆಗಳ ಉಸ್ತುವಾರಿ ಸುಹಾಸ್‌ ಮರಿಕೆ ಮತ್ತಿತರರುಉಪಸ್ಥಿತರಿದ್ದರು.

ವಿವಿಧ ಮಳಿಗೆಗಳು
ಪ್ರದರ್ಶನ-ಮಾರಾಟ ಮಳಿಗೆಗಳ ಸಂಚಾಲಕ ಪ್ರಕಾಶ್‌ ಕುಮಾರ್‌ ಕೊಡೆಂಕಿರಿ ಹಾಗೂ ಸುಹಾಸ್‌ ಮರಿಕೆ ನೇತೃತ್ವದಲ್ಲಿ ಹಲವು ಪುಸ್ತಕ ಮಳಿಗೆಗಳು, ಸಾವಯವ ಉತ್ಪನ್ನಗಳ ಮಳಿಗೆಗಳು, ಹೆಗ್ಗೊàಡಿನ ಖಾದಿ ಭಂಡಾರ ಮಳಿಗೆ, ಪಾಂಡವಪುರ ಅಂಕೇಗೌಡರ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳು ಭಾಗವಹಿಸಲಿದ್ದು, ಸಾವಯವ ತರಕಾರಿ ಸಂತೆ ವಿಶೇಷ ಆಕರ್ಷಣೆಯೆನಿಸಲಿದೆ. ಇದೇ ಸಂದರ್ಭದಲ್ಲಿ ವಿವಿಧ ಸಾಂಸ್ಕೃತಿಕ ವೈವಿಧ್ಯಗಳೂ ನಡೆಯಲಿವೆ.

Advertisement

Udayavani is now on Telegram. Click here to join our channel and stay updated with the latest news.

Next