Advertisement

ಜಂಪ್‌ ರೋಪ್‌: ಹುಬ್ಬಳ್ಳಿಯ ಪೇದೆ ಪುತ್ರಿ ನೇತ್ರಾಗೆ ಬಂಗಾರ

04:16 PM Jun 19, 2018 | Team Udayavani |

ಹುಬ್ಬಳ್ಳಿ: ಇಲ್ಲಿನ ಪೂರ್ವ ಸಂಚಾರಿ ಪೊಲೀಸ್‌ ಠಾಣೆಯ ಮುಖ್ಯಪೇದೆ ಚಂದ್ರಶೇಖರ ತಳವಾರ ಅವರ ಪುತ್ರಿ ನೇತ್ರಾ ತಳವಾರ ನೇಪಾಳದಲ್ಲಿ ಇತ್ತೀಚೆಗೆ ನಡೆದ ಜಂಪ್‌ ರೋಪ್‌ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ಚಿನ್ನದ ಪದಕ ಪಡೆದುಕೊಂಡಿದ್ದಾಳೆ.

Advertisement

ಇಲ್ಲಿನ ದೇಶಪಾಂಡೆ ನಗರದ ರೋಟರಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಅಧ್ಯಯನ ಮಾಡುತ್ತಿರುವ ನೇತ್ರಾ, ಮೇ 28ರಿಂದ 31ರ ವರೆಗೆ ನೇಪಾಳದ ಕಠ್ಮಂಡುವಿನಲ್ಲಿ ನಡೆದ ಅಂತಾರಾಷ್ಟ್ರೀಯ ದಕ್ಷಿಣ ಏಷ್ಯಾ ಜಂಪ್‌ರೋಪ್‌ ಸ್ಪರ್ಧೆಯಲ್ಲಿ ಚಿನ್ನದ ಪದಕ ತನ್ನದಾಗಿಸಿಕೊಂಡಿದ್ದಾಳೆ.

ನೇತ್ರಾ ತಳವಾರ ಕೇವಲ ಜಂಪ್‌ ರೋಪ್‌ನಲ್ಲಿ ಅಷ್ಟೇ ಅಲ್ಲದೆ ರನ್ನಿಂಗ್‌, ಸ್ಕಿಪಿಂಗ್‌ ಸೇರಿದಂತೆ ಇನ್ನಿತರ ಕ್ರೀಡೆಗಳಲ್ಲೂ ಸಾಧನೆ ತೋರಿದ್ದಾರೆ. ಚಂದ್ರಶೇಖರ ತಳವಾರ ತಮಗೆ ಬರುತ್ತಿರುವ ವೇತನದಲ್ಲಿಯೇ ಮಗಳ ಕ್ರೀಡಾ ಸಾಧನೆಗೆ ಬೆನ್ನೆಲುಬಾಗಿ ನಿಂತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next