Advertisement

ಜು. 8: ಇಂಗ್ಲಿಷ್‌ ಯಕ್ಷಗಾನ 

10:28 AM Jul 05, 2018 | |

ಮಹಾನಗರ: ಪಣಂಬೂರಿನ ಪಿ.ವಿ. ಐತಾಳ ಇಂಗ್ಲಿಷ್‌ ಯಕ್ಷಗಾನ ಬಳಗ ‘ಯಕ್ಷನಂದನ’ದ 37ನೇ ವರ್ಷಾಚರಣೆ, ಇಂಗ್ಲಿಷ್‌ ಸಂಭಾಷಣೆಯ ‘ರತಿಕಲ್ಯಾಣ’ ಯಕ್ಷಗಾನ ಜು. 8ರಂದು ಸಂಜೆ 4.15 ರಿಂದ ರಾತ್ರಿ 9.15ರ ವರೆಗೆ ಪುರಭವನದಲ್ಲಿ ಪ್ರದರ್ಶನಗೊಳ್ಳಲಿದೆ.

Advertisement

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಯಕ್ಷನಂದನ ಸಂಚಾಲಕ ಪಿ. ಸಂತೋಷ ಐತಾಳ್‌, ಕಟೀಲು ದೇಗುಲದ ಅರ್ಚಕ ವೆಂಕಟರಮಣ ಆಸ್ರಣ್ಣ ಉದ್ಘಾಟಿಸುವರು. ಪಿ.ವಿ. ಐತಾಳ್‌ ಸ್ಮರಣಾರ್ಥ ವೆಂಕಟರತ್ನ ಚಾರಿಟೆಬಲ್‌ ಟ್ರಸ್ಟ್‌ ವತಿಯಿಂದ ನೀಡುವ ‘ವೆಂಕಟರತ್ನ’ ಪ್ರಶಸ್ತಿಯನ್ನು ಅಶಕ್ತ ಯಕ್ಷಗಾನ ಕಲಾವಿದ ಸುರೇಶ್‌ ಕಾಮತ್‌ ಅವರಿಗೆ ನೀಡಲಾಗುವುದು. ಯಕ್ಷನಂದನ ವತಿಯಿಂದ ಕಲಾವಿದರಾದ ಎಸ್‌. ಈಶ್ವರ ಭಟ್‌, ಸೂರ್ಯನಾರಾಯಣ ಸಿ.,ಮಟ್ಟಿ ಲಕ್ಷ್ಮೀನಾರಾಯಣ ರಾವ್‌ ಅವರನ್ನು ಅಭಿನಂದಿಸಲಾಗುವುದು ಎಂದರು.

ಬಳಿಕ ಡಾ| ಪಿ. ಸತ್ಯಮೂರ್ತಿ ಐತಾಳ್‌ ಬರೆದ ರತಿಕಲ್ಯಾಣ ಇಂಗ್ಲಿಷ್‌ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಯಕ್ಷ ನಂದ ನದ ಮೂಲಕ ಈಗಾಗಲೇ ಮೇದಿನಿ ನಿರ್ಮಾಣ, ಮಹಿಷಾ ಮರ್ದಿನಿ, ಶಾಂಭವಿ ವಿಲಾಸ, ಶ್ರೀಕೃಷ್ಣ ಲೀಲೆ-ಕಂಸವಧೆ ಸಹಿತ ಹಲವಾರು ಯಕ್ಷಗಾನ ಪ್ರಸಂಗಗಳನ್ನು ಇಂಗ್ಲಿಷ್‌ ಸಂಭಾಷಣೆಯಲ್ಲಿ ಪ್ರದರ್ಶಿಸಲಾಗಿದೆ ಎಂದರು. ಡಾ| ಜೆ.ಎನ್‌. ಭಟ್‌, ಶಂಕರನಾರಾಯಣ ಮೈರ್ಪಾಡಿ, ರವಿ ಅಲೆವೂರಾಯ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next