Advertisement

ಜುಲೈ 26ಕ್ಕೆ ಪಿಯುಸಿ ಪೂರಕ ಪರೀಕ್ಷೆ ಫ‌ಲಿತಾಂಶ

06:40 AM Jul 24, 2018 | |

ಬೆಂಗಳೂರು : ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಫ‌ಲಿತಾಂಶ ಜುಲೈ 26ರಂದು ಹೊರ ಬೀಳಲಿದೆ.ಜೂನ್‌ 29ರಿಂದ ಜುಲೈ 10ರ ವರೆಗೆ ನಡೆದ ಪೂರಕ ಪರೀಕ್ಷೆಯಲ್ಲಿ  ಸರ್ಕಾರಿ, ಖಾಸಗಿ ಹಾಗೂ ಪುನರಾವರ್ತಿತ ಅಭ್ಯರ್ಥಿಗಳು ಸೇರಿ 2.25 ಲಕ್ಷ  ವಿದ್ಯಾರ್ಥಿಗಳು ಹಾಜರಾಗಿದ್ದರು. ಎಲ್ಲ ವಿದ್ಯಾರ್ಥಿಗಳ ಉತ್ತರ ಪತ್ರಿಕೆ ಮೌಲ್ಯಮಾಪನ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಜುಲೈ 26ರಂದು ಪದವಿ ಪೂರ್ವ ಶಿಕ್ಷಣ ಇಲಾಖೆ ವೆಬ್‌ಸೈಟ್‌ //www.pue.kar.nic.in ನಲ್ಲಿ  ಫ‌ಲಿತಾಂಶ ಪ್ರಕಟಿಸಲಾಗುತ್ತದೆ. 

Advertisement

ಜುಲೈ 27ರಂದು ಎಲ್ಲ ಪಿಯು ಕಾಲೇಜಿನಲ್ಲೂ ಫ‌ಲಿತಾಂಶ ಸಿಗಲಿದೆ ಎಂದು ಪಿಯು ಇಲಾಖೆ ನಿರ್ದೇಶಕಿ ಸಿ.ಶಿಖಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪೂರಕ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಬಿ.ಎ, ಬಿ.ಕಾಂ. ಬಿಬಿಎಂ, ಬಿಬಿಎ, ಬಿಸಿಎ. ಬಿ.ಎಸ್ಸಿ ಸೇರಿದಂತೆ ವಿವಿಧ ಕೋಸ್‌ ಸೇರಿಕೊಳ್ಳಲು ಅವಕಾಶ ಇರುತ್ತದೆ. ಅಲ್ಲದೇ ಎಂಜಿನಿಯರಿಂಗ್‌ ಮತ್ತು ಕೃಷಿ ವಿಜ್ಞಾನ ಮೊದಲಾದ ವೃತ್ತಿಪರ ಕೋರ್ಸ್‌ಗಳಿಗೂ ಸೇರಿಕೊಳ್ಳಬಹುದು. ವೃತ್ತಿಪರ ಕೋರ್ಸ್‌ಗಳ ಸಿಇಟಿ ಕೌನ್ಸೆಲಿಂಗ್‌ ಈಗಾಗಲೇ ಆರಂಭವಾಗಿದೆ. ಎರಡು ಅಥವಾ ಮೂರನೇ ಸುತ್ತಿನಲ್ಲಿ ಸೀಟು ಪಡೆಯಲು ಅವಕಾಶ ಇದೆ.

Advertisement

Udayavani is now on Telegram. Click here to join our channel and stay updated with the latest news.

Next