Advertisement

Haryana Results: ಬಿಜೆಪಿಯ ಕ್ಯಾಪ್ಟನ್‌ ಮುನ್ನಡೆ, ಮತಎಣಿಕೆ ಕೇಂದ್ರದಿಂದ ಹೊರನಡೆದ ಫೋಗಾಟ್!

12:16 PM Oct 08, 2024 | Team Udayavani |

ಚಂಡೀಗಢ್:‌ ಹರ್ಯಾಣ ವಿಧಾನಸಭೆಯ ಜುಲಾನಾ (Julana) ಕ್ಷೇತ್ರದಿಂದ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವಿನೇಶ್‌ ಫೋಗಾಟ್‌ (Vinesh Phogat) ತಮ್ಮ ಪ್ರತಿಸ್ಪರ್ಧಿ ಭಾರತೀಯ ಜನತಾ ಪಕ್ಷದ ಕ್ಯಾಪ್ಟನ್‌ ಯೋಗೇಶ್‌ ಬೈರಾಗಿ ತೀವ್ರ ಪೈಪೋಟಿ ನಡೆದಿದೆ.

Advertisement

ಮಂಗಳವಾರ (ಅ.08) ಬೆಳಗ್ಗೆ 8ಗಂಟೆಗೆ ಹರ್ಯಾಣ ವಿಧಾನಸಭಾ ಚುನಾವಣೆಯ ಮತಎಣಿಕೆ ಆರಂಭಗೊಂಡಿದ್ದು, ಮೊದಲ ಸುತ್ತಿನ ಮತಎಣಿಕೆಯಲ್ಲಿ ಕಾಂಗ್ರೆಸ್‌ ನ ವಿನೇಶ್‌ ಫೋಗಾಟ್‌, ಬಿಜೆಪಿಯ ಯೋಗೇಶ್‌ ಅವರಿಗಿಂತ ಕೇವಲ 200 ಮತಗಳ ಅಂತರದ ಮುನ್ನಡೆ ಸಾಧಿಸಿದ್ದರು.

2ನೇ ಸುತ್ತಿನ ಮತಎಣಿಕೆಯಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಕ್ಯಾಪ್ಟನ್‌ ಬೈರಾಗಿ ಅವರು ಕಾಂಗ್ರೆಸ್‌ ನ ವಿನೇಶ್‌ ಫೋಗಾಟ್‌ ಅವರಿಗಿಂತ ಎರಡು ಸಾವಿರ ಮತಗಳ ಅಂತರದ ಮುನ್ನಡೆ ಸಾಧಿಸಿದ್ದರು.

ನಾಲ್ಕನೇ ಸುತ್ತಿನ ಮತಎಣಿಕೆಯಲ್ಲೂ ಕಾಂಗ್ರೆಸ್‌ ನ ವಿನೇಶ್‌ ಫೋಗಾಟ್‌ 3,000 ಮತಗಳ ಹಿನ್ನಡೆ ಕಂಡಿದ್ದು, ಬಿಜೆಪಿಯ ಕ್ಯಾಪ್ಟನ್‌ ಬೈರಾಗಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಹಿನ್ನಡೆ ಅನುಭವಿಸುತ್ತಿರುವುದನ್ನು ಕಂಡ ಫೋಗಾಟ್‌ ಜಿಂದ್‌ ಮತಎಣಿಕೆ ಕೇಂದ್ರದಿಂದ ಹೊರ ನಡೆದಿರುವುದಾಗಿ ವರದಿ ತಿಳಿಸಿದೆ.

Advertisement

90 ಸದಸ್ಯರ ಬಲದ ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ 48 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು,  ಕಾಂಗ್ರೆಸ್‌ 35 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ತೀವ್ರ ಹಿನ್ನಡೆ ಅನುಭವಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next