Advertisement

ಜ್ಯೂಸ್‌ ಕುಡಿಯುವ ಅಮ್ಮ ವಿಡಿಯೋ ಆಯ್ತು ವೈರಲ್‌

07:05 AM Dec 21, 2017 | Team Udayavani |

ಚೆನ್ನೈ: ಪ್ರತಿಷ್ಠಿತ ಆರ್‌.ಕೆ.ನಗರ ಕ್ಷೇತ್ರದ ಉಪಚುನಾವಣೆ ಡಿ.21ರಂದು ನಡೆಯಲಿರುವಂತೆಯೇ ದಿ.ಜಯಲಲಿತಾ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಲಾಗಿರುವ ಸಂದರ್ಭದ ಹೊಸ ವಿಡಿಯೋ ವೈರಲ್‌ ಆಗಿದೆ. ಎಐಎಡಿಎಂಕೆಯ ಉಚ್ಚಾಟಿತ ನಾಯಕ ಟಿ.ಟಿ.ವಿ.ದಿನಕರನ್‌ ಬಣ ಅದನ್ನು ಬಿಡುಗಡೆ ಮಾಡಿದೆ. ಚುನಾವಣಾ ಆಯೋಗದ ಅಧಿಕಾರಿಗಳು ಅದನ್ನು ಪ್ರಸಾರ ಮಾಡಬಾರದು ಎಂದು ಹೇಳುವಷ್ಟರಲ್ಲಿ ಅದು ಚಾನೆಲ್‌ಗ‌ಳಲ್ಲಿ, ಜಾಲತಾಣಗಳಲ್ಲಿ ವೈರಲ್‌ ಆಗಿತ್ತು. 20 ಸೆಕೆಂಡ್‌ಗಳ ವಿಡಿಯೋ ಕ್ಲಿಪಿಂಗ್‌ನಲ್ಲಿ ಇರುವ ಮಹಿಳೆ ಜೆ. ಜಯಲಲಿತಾ ಎನ್ನಲಾಗುತ್ತಿದ್ದು, ಅವರು ಹಾಸಿಗೆ ಮೇಲೆ ಕುಳಿತಿದ್ದಾರೆ. ಅದರಲ್ಲಿ ಅವರು ಹೆಲ್ತ್‌ ಡ್ರಿಂಕ್‌ ಸೇವನೆ ಮಾಡುತ್ತಿದ್ದಾರೆ.
ಈ ಬೆಳವಣಿಗೆ ಬಗ್ಗೆ ಆರ್‌.ಕೆ.ನಗರ ಕ್ಷೇತ್ರದ ಚುನಾವಣಾಧಿಕಾರಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಎಐಎಡಿಎಂಕೆ ಚುನಾವಣೆ ಮೇಲೆ ಪ್ರಭಾವ ಬೀರುವ ಯತ್ನ ಇದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next