Advertisement

ಅಮೂಲ್ಯಗೆ ನ್ಯಾಯಾಂಗ ಬಂಧನ

10:49 PM Feb 29, 2020 | Lakshmi GovindaRaj |

ಬೆಂಗಳೂರು: ಪಾಕ್‌ ಪರ ಘೋಷಣೆ ಕೂಗಿದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ವಿಶೇಷ ತನಿಖಾ ತಂಡದ ವಶದಲ್ಲಿದ್ದ ಅಮೂಲ್ಯ ಲಿಯೋನಾಳನ್ನು ಶನಿವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ದೇಶದ್ರೋಹ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಅಮೂಲ್ಯಳನ್ನು ಫೆ.25ರಂದು ವಿಶೇಷ ತನಿಖಾ ತಂಡ 5 ದಿನ ವಶಕ್ಕೆ ಪಡೆದುಕೊಂಡಿತ್ತು.

Advertisement

ಪೊಲೀಸ್‌ ಕಸ್ಟಡಿ ಮುಕ್ತಾ ಯಗೊಂಡ ಹಿನ್ನೆಲೆಯಲ್ಲಿ ರಾತ್ರಿ 8 ಗಂಟೆ ಸುಮಾರಿಗೆ 5ನೇ ಎಸಿಎಂಎಂ ಕೋರ್ಟ್‌ನ ನ್ಯಾಯಾಧೀ ಶರ ಮನೆಗೆ ಹಾಜರು ಪಡಿಸಿ ಆರೋಪಿಯನ್ನು ಮಾ.5ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅಗತ್ಯ ಬಿದ್ದಲ್ಲಿ ಮತ್ತೂಮ್ಮೆ ವಶಕ್ಕೆ ಪಡೆಯುವ ಸಾಧ್ಯತೆಯಿದೆ ಎಂದು ಪೊಲೀಸರು ಹೇಳಿದರು.

ಬಸವೇಶ್ವರನಗರ ಠಾಣೆಯಲ್ಲಿ ಅಮೂಲ್ಯಳ ವಿಚಾ ರಣೆ ನಡೆಯಿತು. ಈ ವೇಳೆ ಆಕೆ ವಾಸವಾಗಿದ್ದ ಪಿಜಿ ಹಾಗೂ ಆಕೆಗೆ ಮಾರ್ಗದರ್ಶಕರಾಗಿದ್ದರು ಎನ್ನಲಾದ ಕೆಲ ವ್ಯಕ್ತಿಗಳ ಜತೆ ಸಭೆ ನಡೆಸಿದ್ದ ಸ್ಥಳ ಸೇರಿ ಎಲ್ಲಾ ಸ್ಥಳವನ್ನು ಮಹಜರು ಮಾಡಲಾಗಿದೆ.

ಈ ವೇಳೆ ಫ್ರೀ ಕಾಶ್ಮೀರ ನಾಮಫ‌ಲಕ ಪ್ರದರ್ಶಿಸಿದ ಆರ್ದ್ರಾ ಜತೆ ಕೆಲ ತಿಂಗಳು ಒಂದೇ ಕೊಠಡಿಯಲ್ಲಿ ವಾಸವಾಗಿದ್ದೆ ಎಂಬು ದನ್ನು ಆಕೆಯೇ ಖಚಿತ ಪಡಿಸಿದ್ದಾಳೆ. ಅಲ್ಲದೆ, ಆಕೆಗೆ ಪ್ರಚೋದನಾಕಾರಿ ಭಾಷಣ ಮಾಡುವಂತೆ ಸೂಚಿಸುತ್ತಿದ್ದ ವ್ಯಕ್ತಿಗಳ ಹೆಸರನ್ನು ಬಹಿರಂಗ ಪಡಿಸಿದ್ದಾಳೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ತನಿಖಾ ತಂಡಗಳಿಂದ ವಿಚಾರಣೆ: ಈ ಮಧ್ಯೆ ಅಮೂಲ್ಯಳನ್ನು ರಾಜ್ಯ -ಕೇಂದ್ರ ಗುಪ್ತಚರ ಇಲಾಖೆ (ಐಬಿ), ನಕ್ಸಲ್‌ ನಿಗ್ರಹ ಪಡೆ(ಎಎನ್‌ಎಫ್) ಹಾಗೂ ಇತರೆ ತನಿಖಾ ಸಂಸ್ಥೆಗಳು ಸುಮಾರು 3 ಗಂಟೆಗೂ ಅಧಿಕ ಕಾಲ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡಿವೆ.

Advertisement

ಆರ್ದ್ರಾ ಜಾಮೀನು ಅರ್ಜಿ ಮಾ.2ಕ್ಕೆ: ಫ್ರೀ ಕಾಶ್ಮೀರ ನಾಮಫ‌ಲಕ ಪ್ರದರ್ಶಿಸಿದ ಆರೋಪದಡಿ ಬಂಧನ ಕ್ಕೊಳ ಗಾಗಿರುವ ಆರ್ದ್ರಾ ಜಾಮೀನು ಅರ್ಜಿ ವಿಚಾರಣೆ ಯನ್ನು ಆರನೇ ಎಸಿಎಂಎಂ ನ್ಯಾಯಾಲ ಯಕ್ಕೆ ಮಾ.2ಕ್ಕೆ ಮುಂದೂಡಿದೆ. ಪ್ರಕರಣದಲ್ಲಿ ಜಾಮೀನು ಕೋರಿ ಆರ್ದ್ರಾ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಅದನ್ನು ಆಕ್ಷೇಪಿಸಿ ಪೊಲೀಸರು ಹಾಗೂ ಸರ್ಕಾರಿ ಅಭಿಯೋಜಕರು ಅರ್ಜಿ ಸಲ್ಲಿಸಿದ್ದಾರೆ. ಇದೊಂದು ಸೂಕ್ಷ್ಮ ಪ್ರಕರಣ. ಅಮೂಲ್ಯ ಮತ್ತು ಆರ್ದ್ರಾ ಪ್ರಕರಣಗಳಿಗೆ ಸಂಬಂಧವಿದೆ. ತನಿಖಾ ವರದಿ ಆಧರಿಸಿ ವಾದ ಮಂಡಿಸಬೇಕಿದೆ. ಹೀಗಾಗಿ ಕಾಲಾವಕಾಶ ಬೇಕಿದೆ ಎಂದು ಸರ್ಕಾರಿ ಅಭಿಯೋ ಜಕರು ಕೋರ್ಟ್‌ಗೆ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next