Advertisement
ಸ್ವಂತ ಕಟ್ಟಡ, ಶೌಚಾಲಯ, ವಿದ್ಯುತ್ ಸಂಪರ್ಕ, ಫ್ಯಾನ್ ಸಹಿತ ಅಂಗನ ವಾಡಿ ಕೇಂದ್ರಗಳಿಗೆ ಮೂಲಸೌಕರ್ಯಗಳನ್ನು ಒದ ಗಿಸುವ ವಿಚಾರವು ಹೈಕೋರ್ಟ್ ವಿಚಾ ರಣೆಯಲ್ಲಿದೆ. 14,948 ಅಂಗನವಾಡಿ ಕೇಂದ್ರಗಳಿಗೆ ವಿದ್ಯುತ್ ಸಂಪರ್ಕ, 18,947ಕ್ಕೆ ಫ್ಯಾನ್ ಹಾಗೂ ಸರಕಾರಿ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ 3,524 ಕೇಂದ್ರಗಳಲ್ಲಿ ಶೌಚಾಲಯ ವ್ಯವಸ್ಥೆ ಮಾಡಲು 2021ರ ಡಿಸೆಂಬರ್ 31ರ ಗಡುವನ್ನು ಹೈಕೋರ್ಟ್ ನೀಡಿತ್ತು. ಆದರೆ ನಿರೀಕ್ಷಿತ ಪ್ರಗತಿ ಆಗಿಲ್ಲ. ಈ ಪ್ರಕರಣ ಜ.27ರಂದು ವಿಚಾರಣೆಗೆ ಬರಲಿದೆ.
Related Articles
Advertisement
ಸರಕಾರ ಏನು ಹೇಳಿತ್ತುರಾಜ್ಯದಲ್ಲಿ 65,911 ಅಂಗನವಾಡಿ ಕೇಂದ್ರಗಳಿದ್ದು, ಆ ಪೈಕಿ 14,948ರಲ್ಲಿ ವಿದ್ಯುತ್ ಸಂಪರ್ಕಕ್ಕಾಗಿ, ಅಂದಾಜು 45.33 ಕೋಟಿ ರೂ. ಬೇಕು. 3,524 ಅಂಗನವಾಡಿಗಳಲ್ಲಿ ಶೌಚಾಲಯ ವ್ಯವಸ್ಥೆ ಇಲ್ಲ. ಇಲ್ಲಿ ಶೌಚಾಲಯ ಕಟ್ಟಲು 21.19 ಕೋಟಿ ರೂ. ಬೇಕು. 18,947 ಅಂಗನವಾಡಿಗಳಿಗೆ ಫ್ಯಾನ್ ಒದಗಿಸಲು 11.27 ಕೋಟಿ ರೂ. ಬೇಕು. ಅಂಗನವಾಡಿ ಕೇಂದ್ರಗಳ ನಿರ್ವಹಣೆಗೆ 2021-22ನೇ ಸಾಲಿನ ಬಜೆಟ್‌ನಲ್ಲಿ 125 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಮುಂದಿನ ಒಂದು ವರ್ಷದ ಅವಧಿಯಲ್ಲಿ ಇದರಲ್ಲಿ 6,700 ಕೇಂದ್ರಗಳಿಗೆ ವಿದ್ಯುತ್ ಸಂಪರ್ಕ ಹಾಗೂ 8,300 ಕಟ್ಟಡಗಳಿಗೆ ಫ್ಯಾನ್ ಸೌಲಭ್ಯ ಮತ್ತು 1,700 ಅಂಗನವಾಡಿ ಕೇಂದ್ರಗಳಲ್ಲಿ ಶೌಚಾಲಯ ಕಟ್ಟಲು ಹಾಗೂ 771 ಹೊಸ ಅಂಗನವಾಡಿ ಕೇಂದ್ರಗಳನ್ನು ಕಟ್ಟಲು ಪ್ರಸ್ತಾವಿಸಲಾಗಿದೆ. ವಿತ್ತ ಇಲಾಖೆ ಒಪ್ಪಿಗೆ ಸಿಕ್ಕ ಮೇಲೆ ಕಾಮಗಾರಿ ಕೈಗೆತ್ತಿಕೊಳ್ಳ ಲಾಗುವುದು. 1,488 ಅಂಗನವಾಡಿ ಕಾರ್ಯಕರ್ತೆಯರು ಮತ್ತು 2,811 ಸಹಾಯಕಿಯರ ಹುದ್ದೆ ಖಾಲಿ ಇವೆ ಎಂದು ಸರಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿತ್ತು.