Advertisement

ಜು. 31: ಶ್ರೀ ಶನಿ ಮಹಾಪೂಜೆ, ಯಕಗಾನ ತರಬೇತಿ ಕೇಂದ್ರ ಉದ್ಘಾಟನೆ

03:15 PM Jul 30, 2021 | Team Udayavani |

ಮುಂಬಯಿ, ಜು. 29: ಮೀರಾ ರೋಡ್‌ ನ್ಯೂ ಪ್ಲಸೆಂಟ್‌ ಪಾರ್ಕ್‌ನ, ಸರ್ಕಸ್‌ ಗ್ರೌಂಡ್‌ ಸಮೀಪದ ಮೀರಾಧಾಮ್‌ ಸೊಸೈಟಿಯ ಶ್ರೀ ಶನೀಶ್ವರ ಮಂದಿರದ ವತಿಯಿಂದ ಆಟಿ ತಿಂಗಳಲ್ಲಿ ವಿಶೇಷ ರೀತಿಯಲ್ಲಿ ಆಚರಿಸುವ 18ನೇ ವರ್ಷದ ಆಟಿದ ಶನಿ ಮಹಾಪೂಜೆಯು ಜು. 31ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶ್ರೀ ಶನೀಶ್ವರ ಮಂದಿರದಲ್ಲಿ ನೆರವೇರಲಿದೆ.

Advertisement

ಧಾರ್ಮಿಕ ಕಾರ್ಯಕ್ರಮವಾಗಿ ಮಧ್ಯಾಹ್ನ 12ರಿಂದ ಕಲಶ ಪ್ರತಿಷ್ಠಾಪನೆ ಬಳಿಕ ಶ್ರೀ ಶನೀಶ್ವರ ಗ್ರಂಥ ಪಾರಾಯಣ, ಸಂಜೆ 5ರಿಂದ ಭಜನೆ, ಶ್ರೀ ಶನೀಶ್ವರ ಭಜನ ಸಮಿತಿಯ ಸದಸ್ಯರಿಂದ ಕುಣಿತ ಭಜನೆ, ರಾತ್ರಿ 8ರಿಂದ ಮಹಾಮಂಗಳಾರತಿ, ಪ್ರಸಾದ ರೂಪದಲ್ಲಿ ಅನ್ನಸಂತರ್ಪಣೆ ಜರಗಲಿದೆ. ಇದೇ ಸಂದರ್ಭದಲ್ಲಿ ಶ್ರೀ ಶನೀಶ್ವರ ಸೇವಾ ಚಾರಿಟೆಬಲ್‌ ಟ್ರಸ್ಟ್‌ ಇದರ ಶ್ರೀ ಶನೀಶ್ವರ ಕೃಪಾ ಪೋಷಿತ ಯಕ್ಷಗಾನ ಮಂಡಳಿ (ಮಕ್ಕಳ ಮೇಳ) ಯ ತರಬೇತಿ ಕೇಂದ್ರವನ್ನು ಉದ್ಘಾಟಿಸಲಾಗುವುದು.

2022ನೇ ಸಾಲಿನ ಯಕ್ಷಗಾನ ಪ್ರದರ್ಶನ ಕ್ಕಾಗಿ ಯಕ್ಷಗಾನ ಗುರು ನಾಗೇಶ್‌ ಪೊಳಲಿ ಅವರು ತರಬೇತಿ ನೀಡಲಿದ್ದಾರೆ. ಕೊರೊನಾ ಮಾರ್ಗಸೂಚಿಗಳಿಗೆ ಅನುಣವಾಗಿ ನಡೆಯಲಿರುವ ಈ ಆಷಾಢ ಮಾಸದ ಸಾಮೂಹಿಕ ಶ್ರೀ ಶನಿ ಪೂಜೆಯಲ್ಲಿ ಸೇವೆ ನೀಡಲಿಚ್ಛಿಸುವವರು 251 ರೂ. ಗಳನ್ನು ನೀಡಿ ರಶೀದಿ ಪಡೆದುಕೊಳ್ಳಬೇಕಾಗಿ ಅಥವಾ ಮಂದಿರದ ಸದಸ್ಯರಿಗೆ ತಿಳಿಸಬೇಕು. ಈ ಎಲ್ಲ ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತರು ಪಾಲ್ಗೊಂಡು ಸಹಕರಿಸುವಂತೆ ಶ್ರೀ ಶನೀಶ್ವರ ಸೇವಾ ಚಾರಿಟೆಬಲ್‌ ಟ್ರಸ್ಟ್‌ ಮೀರಾ ರೋಡ್‌ ಇದರ ಪದಾಧಿಕಾರಿಗಳು, ಕಾರ್ಯಕಾರಿ ಸದಸ್ಯರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next