Advertisement

ಜು. 22: ಮಂಗಳೂರಿನಲ್ಲಿ ಶಾಂತಿಯಾತ್ರೆ ದೇವೇಗೌಡ ನೇತೃತ್ವ

10:37 AM Jul 15, 2017 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಿನಿಂದ ನಡೆಯುತ್ತಿರುವ ಕೋಮು ಸಂಘರ್ಷದ ಹಿನ್ನೆಲೆಯಲ್ಲಿ ಶಾಂತಿ ಸಾಮರಸ್ಯದ ಆಶಯ ದೊಂದಿಗೆ ಜು. 22ರಂದು ಧಾರ್ಮಿಕ ಗುರುಗಳು, ಮಠಾಧೀಶರು, ವಿದ್ಯಾರ್ಥಿಗಳು, ವಿವಿಧ ಸಂಘ-ಸಂಸ್ಥೆಗಳ ಭಾಗವಹಿಸುವಿಕೆಯೊಂದಿಗೆ ಮಂಗಳೂರಿನಲ್ಲಿ ಶಾಂತಿಯಾತ್ರೆ ನಡೆಯಲಿದೆ ಎಂದು ದ.ಕ. ಜಿಲ್ಲಾ ಜೆಡಿಎಸ್‌ ಅಧ್ಯಕ್ಷ ಮಹಮ್ಮದ್‌ ಕುಂಞಿ ತಿಳಿಸಿದರು.

Advertisement

ಜಿಲ್ಲಾ ಜೆಡಿಎಸ್‌ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಾಜಿ ಪ್ರಧಾನಿ ದೇವೇಗೌಡ ಅವರ ಆಶಯದಂತೆ ಅವರ ಭಾಗವಹಿಸುವಿಕೆಯೊಂದಿಗೆ ನಡೆಯುವ ಶಾಂತಿಯಾತ್ರೆಯಲ್ಲಿ ಕಾಂಗ್ರೆಸ್‌, ಬಿಜೆಪಿ, ಎಸ್‌ಡಿಪಿಐ ಹೊರತು ಪಡಿಸಿ ಇತರ ಎಲ್ಲ ರಾಜಕೀಯ ಪಕ್ಷಗಳು, ಮುಖಂಡರು ಭಾಗವಹಿಸುವರು. ಯಾವುದೇ ಪಕ್ಷದ, ಸಂಘಟನೆಯ ಧ್ವಜ ಬಳಕೆಗೆ ಅವಕಾಶವಿಲ್ಲ. ಶಾಂತಿಯ ಸಂಕೇತವಾದ ಬಿಳಿ ಧ್ವಜ ಮಾತ್ರ ಇರುತ್ತದೆ. ಶಾಂತಿಯಾತ್ರೆ ಬಾವುಟಗುಡ್ಡೆಯಿಂದ ಪ್ರಾರಂಭವಾಗಲಿದೆ. ಗಾಂಧಿ ಪ್ರತಿಮೆಗೆ ಹಾರಾರ್ಪಣೆಗೈದ ಬಳಿಕ ನಗರದ ಪುರ ಭವನದವರೆಗೆ ಸಾಗಿ ಸಭೆ ನಡೆಯಲಿರುವುದು ಎಂದರು.

ಜೆಡಿಎಸ್‌ ಜಿಲ್ಲಾ ಕಾರ್ಯಾಧ್ಯಕ್ಷ ರಾಂಗಣೇಶ್‌, ನಗರಾಧ್ಯಕ್ಷ ವಸಂತ ಪೂಜಾರಿ, ಯುವ ಜೆಡಿಎಸ್‌ ಜಿಲ್ಲಾಧ್ಯಕ್ಷ ಅಕ್ಷಿತ್‌ ಸುವರ್ಣ, ಕಾರ್ಪೊರೇಟರ್‌ ರಮೀಜಾ, ರಾಮಕೃಷ್ಣ ಶೆಟ್ಟಿ, ಗೋಪಾಲಕೃಷ್ಣ, ಶ್ರೀನಾಥ್‌ ಅವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next