Advertisement

ಜಿಎಸ್‌ಬಿ ಪಾರ್ಕ್‌ ಅಭಿವೃದ್ಧಿಗೆ ಚಾಲನೆ

08:32 PM Dec 07, 2020 | Suhan S |

ತುಮಕೂರು: ಸ್ಮಾರ್ಟ್‌ಸಿಟಿ ವತಿಯಿಂದ ತುಮಕೂರು ಮಹಾನಗರ ಪಾಲಿಕೆಯ ವಾರ್ಡ್‌ ನಂ.11ರ ಕಲ್ಪತರು ಬಡಾವಣೆ ಜಿ.ಎಸ್‌.ಬಿ ಉದ್ಯಾನವನದಅಭಿವೃದ್ಧಿಕಾಮಗಾರಿಗೆ ತುಮಕೂರು ಲೋಕಸಭಾ ಸದಸ್ಯ ಜಿ.ಎಸ್‌.ಬಸವರಾಜ್‌ ಭೂಮಿ ಪೂಜೆ ನೆರವೇರಿಸಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಾರ್ಡ್‌11ರಮೆಳೇಕೋಟೆ ಗಂಗಸಂದ್ರದಭಾಗದಲ್ಲಿಉತ್ತಮವಾದಂತಹ ವಾತಾವರಣ ನಿರ್ಮಾಣಮಾಡಲು ಮತ್ತು ಸದರಿ ಪಾರ್ಕ್‌ 2 ಎಕರೆ ವಿಸ್ತೀರ್ಣದಲ್ಲಿದ್ದು, ತುಮಕೂರು ಸ್ಮಾರ್ಟ್‌ಸಿಟಿ ವತಿಯಿಂದಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗುತ್ತಿದೆ. ಈಭಾಗದಲ್ಲಿ ಅತ್ಯುತ್ತಮವಾದಂತಹ ವಾತಾವರಣವನ್ನುಸೃಷ್ಟಿಸಲು ಶ್ರಮಿಸಲಿ ಎಂದರು.

90 ಲಕ್ಷ ವೆಚ್ಚದಲ್ಲಿ ಪಾರ್ಕ್‌ ಅಭಿವೃದ್ಧಿ: ಶಾಸಕ ಜಿ.ಬಿ.ಜ್ಯೋತಿಗಣೇಶ್‌ ಮಾತನಾಡಿ, ನಗರದ ಈ ಭಾಗದಲ್ಲಿರುವ ಪಾರ್ಕ್‌ 2 ಎಕರೆ ವಿಸ್ತೀರ್ಣದಲ್ಲಿದ್ದು, ನಗರದಲ್ಲಿ ಎರಡು ಎಕರೆ ವಿಸ್ತೀರ್ಣದಲ್ಲಿರುವಪಾರ್ಕ್‌ಗಳು ಕೆಲವು ಮಾತ್ರ ಅದರಲ್ಲಿ ಇದು ಸಹ ಒಂದಾಗಿದೆ. ಈ ಪಾರ್ಕ್‌ನ್ನು ಸುಮಾರು 90 ಲಕ್ಷ ರೂ.ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದ್ದು, ಈ ಭಾಗದ ನಾಗರಿಕರಿಗೆ ಅನುಕೂಲವಾಗುವಂತೆ, ದಿನನಿತ್ಯವಾಕಿಂಗ್‌ ಪಾಥ್‌, ಜಿಮ್‌, ಮಕ್ಕಳ ಆಟದ ಏರಿಯಾ, ಖುರ್ಚಿಗಳು ಹಾಗೂ ಇಲ್ಲಿನ ನಾಗರಿಕರ ಅವಶ್ಯಕತೆಗೆ ತಕ್ಕಂತೆ ಅಭಿವೃದ್ಧಿಪಡಿಸಲಾಗುತ್ತದೆ ಹಾಗೂ ಈ ಭಾಗದ ನಾಗರಿಕರಿಗೆ ಉತ್ತಮವಾದಂತಹ ವಾತಾವರಣ ನಿರ್ಮಾಣವಾಗಲಿದೆ ಎಂದು ತಿಳಿಸಿದರು.

ಗಂಗಸಂದ್ರ ಕೆರೆ ಶೀಘ್ರ ಪ್ರವಾಸಿ ತಾಣ: ಗಂಗಸಂದ್ರ ಕೆರೆಯಲ್ಲಿ ಇನ್ನು ಒಂದು ವರ್ಷದಲ್ಲಿ ಸುಮಾರು 20ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಯಲಿದೆ.ಅಲ್ಪಸಂಖ್ಯಾತರ ಇಲಾಖೆಯಿಂದ ಸುಮಾರು 13 ಕೋಟಿ ರೂ. ಮೊತ್ತವನ್ನು ನೀಡಿದ್ದು, ಪೂರ್ಣವಾಗಿಬಟಾನಿಕಲ್‌ ಗಾರ್ಡನ್‌, ಪಾಥ್‌ ವೇ ಹಾಗೂಮುಂತಾದ ಉತ್ತಮ ಯೋಜನೆಗಳನ್ನೊಳಗೊಂಡಂತೆ ಯೋಜನೆ ರೂಪಿಸಲಾಗಿದೆ. ಇದರಿಂದಾಗಿ ಗಂಗಸಂದ್ರ ಹಾಗೂ ಮೆಳೇಕೋಟೆ ಭಾಗದ ಜನರಿಗೆ ಇದೊಂದು ಪ್ರವಾಸಿ ತಾಣವಾಗಲಿದೆ ಎಂದು ಶಾಸಕರು ತಿಳಿಸಿದರು.

ಪಾರ್ಕ್‌ ಸದುಪಯೋಗಿಸಿಕೊಳ್ಳಿ: ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಬಾವಿಕಟ್ಟೆ ನಾಗಣ್ಣ ಮಾತನಾಡಿ, ತುಮಕೂರು ನಗರದಲ್ಲಿ ಇಷ್ಟು ದೊಡ್ಡ ವಿಸ್ತೀರ್ಣದಲ್ಲಿ ಪಾರ್ಕ್‌ ಸಿಗುವುದು ಕಡಿಮೆ, ಈ ಭಾಗದಲ್ಲಿ ಸದರಿ ಪಾರ್ಕ್‌ ಅಭಿವೃದ್ಧಿ ಪಡಿಸುತ್ತಿರುವುದು ಉತ್ತಮವಾದುದು ಹಾಗೂಗಂಗಸಂದ್ರ ಕೆರೆಯ ಅಭಿವೃದ್ಧಿಯಿಂದ ಈ ಭಾಗದಲ್ಲಿ ಉತ್ತಮವಾದ ತಾಣವಾಗಲಿದೆ ಜನ ಇದರಸದುಪಯೋಗ ಪಡೆದುಕೊಳ್ಳಬೇಕು ಎಂದರು.

Advertisement

ಸ್ಮಾರ್ಟ್‌ಸಿಟಿ ವತಿಯಿಂದ ಪಾರ್ಕ್‌ ಅಭಿವೃದ್ಧಿ: ಪಾಲಿಕೆ ಮಹಾಪೌರ ಫ‌ರೀದಾ ಬೇಗಂ ಮಾತನಾಡಿ, ತುಮಕೂರು ನಗರದಲ್ಲಿ ಹೆಚ್ಚಿನ ಅಭಿವೃದ್ಧಿಗಾಗಿಶ್ರಮಿಸುತ್ತಿದ್ದು, ಈ ಭಾಗದಲ್ಲಿ ಸ್ಮಾರ್ಟ್‌ಸಿಟಿ ವತಿಯಿಂದ ಪಾರ್ಕ್‌ ಅಭಿವೃದ್ಧಿ ಪಡಿಸಲಾಗುತ್ತಿದ್ದು, ಸ್ಮಾರ್ಟ್‌ಸಿಟಿ ರವರು ಆದಷ್ಟು ಬೇಗ ಅಭಿವೃದ್ಧಿಪಡಿಸಿ ಈ ಭಾಗದ ನಾಗರಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ತುಮಕೂರು ಮಹಾನಗರಪಾಲಿಕೆ ಉಪ ಮೇಯರ್‌ ಶಶಿಕಲಾ ಗಂಗಹನುಮಯ್ಯ, ಆಯುಕ್ತರಾದ ರೇಣುಕಾ, ನಗರಾಭಿವೃದ್ಧಿ ಆಯುಕ್ತ ರಾದ ಯೋಗಾನಂದ್‌, ಪಾಲಿಕೆ ಸದಸ್ಯರಾದ ಮನು, ನಾಮಿನಿ ಸದಸ್ಯರಾದ ತ್ಯಾಗರಾಜು, ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಎಂ.ಪಿ.ರಮೇಶ್‌, ಹನುಮಂತರಾಯಪ್ಪ, ಮುಖಂಡರಾದ ಶರತ್‌, ಶಾಂತಣ್ಣ, ವಿಜಯ್‌, ಗಿರೀಶ್‌, ಪಟ್ಟಣ ಶೆಟ್ಟಿ, ಕಲ್ಪತರು ನಾಗರಿಕರ ಹಿತರಕ್ಷಣಾ ವೇದಿಕೆ ಸದಸ್ಯರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next