Advertisement

ಹೊಸ ಸಿನೆಮಾದ ಬಗ್ಗೆ ಪದೇ ಪದೇ ವಿಚಾರಿಸಬೇಡಿ:ಫ್ಯಾನ್ಸ್‌ ಬಳಿ ಜ್ಯೂ.ಎನ್‌ಟಿಆರ್‌ ಮನವಿ

03:08 PM Feb 06, 2023 | Team Udayavani |

 

Advertisement

ಹೈದರಾಬಾದ್‌: ಎಸ್‌.ಎಸ್‌. ರಾಜಮೌಳಿ ನಿ‌ರ್ದೇಶನದ ಜ್ಯೂ.ಎನ್‌ಟಿಆರ್‌  ಮತ್ತು ರಾಮ್‌ ಚರಣ್‌ತೇಜ ಅಭಿನಯದ  RRR ಸಿನೆಮಾ ಜಗತ್ತಿನಾದ್ಯಂತ ಬಾಕ್ಸ್‌ ಆಫೀಸ್‌ ಕೊಳ್ಳೆ ಹೊಡೆದ ಬಳಿಕ ಇದೀಗ ಜ್ಯೂ.ಎನ್‌ಟಿಆರ್‌ ʻಭಾರತ್‌ ಅನೆ ನೇನುʼ, ʻಶ್ರೀಮಂತುಡುʼ ಸಿನೆಮಾ ಖ್ಯಾತಿಯ ನಿರ್ದೇಶಕ ಕೊರತಲ ಶಿವ ಅವರ ಸಿನೆಮಾದಲ್ಲಿ ಸೆಟ್ಟೇರಲು ರೆಡಿಯಾಗಿದ್ದಾರೆ. ಸಿನೆಮಾದ ಹೆಸರು ಇನ್ನು ನಿರ್ಧರಿಸಲಾಗಿಲ್ಲ ಎಂದು ಹೇಳಲಾಗಿದೆ. ಈ ಮಧ್ಯೆ ಹೊಸ ಸಿನೆಮಾದ ಬಗ್ಗೆ ಪದೇ ಪದೇ ವಿಚಾರಿಸಬೇಡಿ ಎಂದು ಫ್ಯಾನ್ಸ್‌ ಬಳಿ ಜ್ಯೂ.ಎನ್‌ಟಿಆರ್‌ ಮನವಿ ಮಾಡಿದ್ದಾರೆ.

RRR ಚಿತ್ರ ಭರ್ಜರಿ ಕಲೆಕ್ಷನ್‌ ಮಾಡಿದ ಬಳಿಕ ಅಭಿಮಾನಿಗಳು ನನ್ನ ಮುಂದಿನ ಚಿತ್ರದ ಬಗ್ಗೆ ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ತೀವ್ರವಾಗಿ ವಿಚಾರಿಸುತ್ತಿದ್ಧಾರೆ. ಇದು ತನಗೆ ಕಿರಿಕಿರಿ ಉಂಟುಮಾಡುತ್ತಿದೆ ಎಂದು ಜ್ಯೂ.ಎನ್‌ಟಿಆರ್‌ ಹೇಳಿಕೊಂಡಿದ್ದಾರೆ.

ಭಾನುವಾರ ತಮ್ಮ ಸೋದರ ಕಲ್ಯಾಣ್‌ ರಾಮ್‌ ಅವರ ಅಮಿಗೋಸ್‌ ಚಿತ್ರದ ಪ್ರಿ-ರಿಲೀಸ್‌ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಜ್ಯೂ.ಎನ್‌ಟಿಆರ್‌ ತಮ್ಮ ಫ್ಯಾನ್ಸ್‌ಗಳಲ್ಲಿ ಈ ರೀತಿ ಮನವಿ ಮಾಡಿಕೊಂಡಿದ್ದಾರೆ. ʻ ಎಷ್ಟೋ ಬಾರಿ ನಾವು ಒಂದು ಚಿತ್ರತಂಡದೊಂದಿಗೆ ಕೆಲಸ ಮಾಡುತ್ತಿದ್ಧಾಗ ತುಂಬಾ ಹೇಳಿಕೊಳ್ಳಬೇಕಾದ ವಿಷಯಗಳೇನೂ ಇರುವುದಿಲ್ಲ. ಎಲ್ಲವನ್ನೂ ಪ್ರತಿ ಗಂಟೆಗೊಮ್ಮೆ,ಪ್ರತಿ ದಿನವೂ ಹೇಳಲಾಗುವುದಿಲ್ಲ. ನಿಮ್ಮೆಲ್ಲರ ಆಸೆಗಳು, ಕಾತುರತೆ ನಮಗೆ, ಸಿನೆಮಾ ತಂಡಕ್ಕೆ ತುಂಬಾ ಕಿರಿಕಿರಿ ಉಂಟುಮಾಡುತ್ತದೆ. ಕೆಲವೊಮ್ಮ ಫ್ಯಾನ್ಸ್‌ಗಳಿಗೋಸ್ಕರ ಕೆಲವು ಮಹತ್ವವಲ್ಲದ ಸುದ್ದಿಗಳನ್ನೂ ಹೇಳಬೇಕಾಗುತ್ತದೆ. ಆದ್ರೆ ಅದು ನಿಮಗೆ ನಿರಾಸೆಯನ್ನುಂಟು ಮಾಡುತ್ತದೆʼ ಎಂದು ಹೇಳೀದ್ದಾರೆ.

 

Advertisement

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next