Advertisement

ಜೂ. 3ರಂದು ಮೈಸೂರು ವಿಭಾಗಮಟ್ಟದ ಸಮಾವೇಶ

12:45 PM May 24, 2017 | Team Udayavani |

ಮೈಸೂರು: ಮೈಸೂರು ವಿಭಾಗ ಮಟ್ಟದ ಸವಲತ್ತು ವಿತರಣೆ ಸಮಾವೇಶ ಜೂನ್‌ 3ರಂದು ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯಲಿದೆ.
ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಮಾವೇಶದ ಪೂರ್ವಸಿದ್ಧತೆ ಸಭೆ ನಡೆಸಿದ ಜಿಲ್ಲಾಧಿಕಾರಿ ಡಿ.ರಂದೀಪ್‌, ಸಮಾವೇಶದ ಯಶಸ್ಸಿನ ದೃಷ್ಟಿಯಿಂದ ವಿವಿಧ ಇಲಾಖೆ ಅಧಿಕಾರಿಗಳು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ತಿಳಿಸಿದರು.

Advertisement

ಮೈಸೂರು, ಚಾಮರಾಜ ನಗರ, ಮಂಡ್ಯ, ಹಾಸನ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಗಳನ್ನೊಳಗೊಂಡ ಮೈಸೂರು ಕಂದಾಯ ವಿಭಾಗದ ಎಂಟು ಜಿಲ್ಲೆಗಳ ವಿವಿಧ ಇಲಾಖೆಗಳಲ್ಲಿ ಪ್ರಮುಖ ಫ‌ಲಾನುಭವಿ ಯೋಜನೆಗಳ ವಿವರವನ್ನು ನೀಡುವಂತೆ ಎಲ್ಲಾ ಅಧಿಕಾರಿಗಳಿಗೆ ಸೂಚಿಸಿದರು.

ಅಂಗವಿಕಲರಿಗೆ ತ್ರಿಚಕ್ರ ವಾಹನ, ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌, ಸ್ವಯಂ ಉದ್ಯೋಗಿಗಳಿಗೆ ಆರ್ಥಿಕ ನೆರವಿನ ಚೆಕ್‌, ಪ್ರವಾಸೋದ್ಯಮ ಮತ್ತು ವಿವಿಧ ನಿಗಮಗಳಿಂದ ಯುವಕರಿಗೆ ನೀಡುವ ಟ್ಯಾಕ್ಸಿ, ವಿದ್ಯಾಸಿರಿ ಯೋಜನೆ ಚೆಕ್‌, ನಗದು ಬಹುಮಾನದ ಚೆಕ್‌, ಭವನಗಳ ಹಸ್ತಾಂತರ, ಶಾದಿ ಭಾಗ್ಯ ಯೋಜನೆ ಫ‌ಲಾನುಭವಿಗಳಿಗೆ ಚೆಕ್‌,

-ಬೀದಿ ಬದಿ ವ್ಯಾಪಾರಿ ಮಹಿಳೆಯರಿಗೆ ಆರ್ಥಿಕ ನೆರವು ನೀಡುವ ಸಮೃದ್ಧಿ ಯೋಜನೆ ಚೆಕ್‌, ಆದಿವಾಸಿಗಳಿಗೆ ಪೌಷ್ಟಿಕ ಆಹಾರ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಶಿಕ್ಷಣ, ಆರೋಗ್ಯ, ವಿದ್ಯಾರ್ಥಿ ನಿಲಯ ಉದ್ದೇಶಕ್ಕೆ ಸಿ.ಎ. ನಿವೇಶನದ ಮಂಜೂರಾತಿ ಪತ್ರ, ಮುಂತಾದ ಯೋಜನೆಗಳ ಫ‌ಲಾನುಭವಿಗಳ ಪಟ್ಟಿ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು.

ಸಮಾವೇಶದ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಇದೇ ವೇದಿಕೆಯಲ್ಲಿ ಮೂರು ದಿನಗಳ ಮಾಹಿತಿ ಉತ್ಸವ ಸಹ ಹಾಗೂ ಪ್ರತಿ ದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಇರುತ್ತವೆ ಎಂದು ಹೇಳಿದರು.

Advertisement

ವಿವಿಧ ಇಲಾಖೆಗಳಲ್ಲಿನ ಯೋಜನೆಗಳ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡಲು ವಸ್ತು ಪ್ರದರ್ಶನ ಮಳಿಗೆ ತೆರೆಯಲಾಗುತ್ತದೆ. ಅಲ್ಲಿ ವಿವಿಧ ಇಲಾಖೆಗಳು ಸಾರ್ವಜನಿಕರಿಗೆ ಮಾಹಿತಿ ಒದಗಿಸುವ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್‌, ಮುಡಾ ಆಯುಕ್ತ ಡಾ. ಮಹೇಶ್‌, ಮಹಾ ನಗರಪಾಲಿಕೆ ಆಯುಕ್ತ ಜಿ.ಜಗದೀಶ್‌, ಹೆಚ್ಚುವರಿ ಆಯುಕ್ತ ಎನ್‌.ರಾಜು, ಜಿಪಂ ಮುಖ್ಯ ಯೋಜನಾಧಿಕಾರಿ ಪ್ರಭುಸ್ವಾಮಿ, ಡಿಡಿಪಿಐ ಎಚ್‌.ಆರ್‌. ಬಸಪ್ಪ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next