ಮಂಗಳೂರು: ಜುವೆಲರಿ ಅಸೋಸಿಯೇಶನ್ ಬೆಂಗಳೂರು ವತಿಯಿಂದ ಅ. 15ರಿಂದ ನ. 30 ವರೆಗೆ ನಡೆದ ಜುವೆಲರಿ ಫೆಸ್ಟಿವಲ್’ನ 2ನೇ ಆವೃತ್ತಿಯಲ್ಲಿ ಒಂದು ಕೆಜಿ ಚಿನ್ನದ ಬಂಪರ್ ಬಹುಮಾನವು ಜೋಯಾಲುಕ್ಕಾಸ್ ಗ್ರಾಹಕ ಹರಿಹರಸುಧನ್ ಅವರ ಕೈಸೇರಿತು.
ಎಂ.ಜಿ. ರಸ್ತೆಯಲ್ಲಿನ ಜೋಯಾಲುಕ್ಕಾಸ್ ಮಳಿಗೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬೆಂಗಳೂರು ಜುವೆಲರಿ ಅಸೋಸಿಯೇಶನ್ ಅಧ್ಯಕ್ಷ ಡಾ| ಚೇತನ್ ಕುಮಾರ್ ಮೆಹ್ತಾ ಮಾತನಾಡಿ, ಇಡೀ ಭಾರತದಲ್ಲಿ ನಕಾಶ್ ಜುವೆಲರಿ, ಟೆಂಪಲ್, ಆ್ಯಂಟಿಕ್ ಜುವೆಲರಿ ಉತ್ಪಾದನೆ ಆಗುತ್ತಿರುವುದು ನಮ್ಮ ರಾಜ್ಯದಲ್ಲಿ. ಜೀವನದಲ್ಲಿ ಏನೇ ಕಷ್ಟ ಬಂದರೂ ನಮ್ಮ ಕೈ ಹಿಡಿಯುವುದು ಚಿನ್ನ. ಇತರ ಯಾವುದೇ ವಸ್ತುವಿನ ಮೇಲೆ ಹೂಡಿಕೆ ಮಾಡಿದರೆ ಮುಂದಿನ ದಿನಗಳಲ್ಲಿ ಅದರ ಬೆಲೆ ಕಡಿಮೆಯಾಗುತ್ತದೆ. ಆದರೆ ಚಿನ್ನದ ಮೇಲೆ ಹೂಡಿಕೆ ಮಾಡಿದರೆ ಒಂದು ವರ್ಷಕ್ಕೆ ಅದರ ಬೆಲೆ ಶೇ. 20ರಿಂದ 25ರಷ್ಟು ಹೆಚ್ಚಾಗಿರುತ್ತದೆ ಎಂದು ಹೇಳಿದರು.
ಜುವೆಲರಿ ಫೆಸ್ಟಿವಲ್‌ನ ವಿಜೇತರಲ್ಲಿ 72 ಮಂದಿ ಜೋಯಾಲುಕ್ಕಾಸ್‌ನ ಗ್ರಾಹ ಕರು ಆಗಿದ್ದಾರೆ. ಮುಂಬರುವ ವರ್ಷ ದಲ್ಲಿ ಬಂಪರ್ ಬಹುಮಾನವನ್ನು ಒಂದು ಕೆ.ಜಿ.ಯಿಂದ 2 ಕೆಜಿ ಚಿನ್ನಕ್ಕೆ ಹೆಚ್ಚಿಸುವ ಸಾಧ್ಯತೆ ಇದೆ. ಆದ್ದರಿಂದ ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಈ ಹಬ್ಬದಲ್ಲಿ ಭಾಗವಹಿಸಿ ಚಿನ್ನವನ್ನು ಪಡೆಯಿರಿ ಎಂದರು.
ಬೆಂಗಳೂರು ಗೋಲ್ಡ್ ಫೆಸ್ಟಿವಲ್ ಅಧ್ಯಕ್ಷ ಡಿ.ವಿ. ರಮೇಶ್ ಮಾತನಾಡಿ, ಗೋಲ್ಡ್ ಫೆಸ್ಟಿವಲ್ ಕೇವಲ ಬಹುಮಾನ ವಿತರಣೆ ಮಾಡುವುದು ಮಾತ್ರವಲ್ಲದೇ, ಬಂಗಾರದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವು ಆಗಿರುತ್ತದೆ. ಮುಖ್ಯ ವಾಗಿ ಯುವಜನತೆ, ಎಲೆಕ್ಟ್ರಾನಿಕ್ ವಸ್ತು ಗಳ ಮೇಲೆ ಹಣ ಹೂಡಿಕೆ ಮಾಡುವ ಬದಲು ಬಂಗಾರದ ಮೇಲೆ ಹೂಡಿಕೆ ಮಾಡುವುದನ್ನು ರೂಢಿಸಿಕೊಳ್ಳಬೇಕು ಎಂದರು.
ಜುವೆಲರಿ ಅಸೋಸಿಯೇಶನ ಉಪಾಧ್ಯಕ್ಷ ಸುರೇಶ್ ಕುಮಾರ್ ಗನ್ನಾ, ಗೌರವ ಕಾರ್ಯದರ್ಶಿ ಅಶೋಕ್ ರಾಥೋಡ್, ಆರ್ಟ್ ಆಫ್ ಜುವೆಲರಿ ವ್ಯವಸ್ಥಾಪಕ ನಿರ್ದೇಶಕ ಸುರೇಶ್ ವಡೇರಾ, ಜೋಯಾಲುಕ್ಕಾಸ್‌ನ ರೀಟೇಲ್ ಮ್ಯಾನೇಜರ್ ರಾಜೇಶ್ ಕೃಷ್ಣನ್, ಕರ್ನಾಟಕ ಸ್ಥಳೀಯ ನಿರ್ದೇಶಕ ವಿ.ಎಸ್. ಜಿನೇಶ್ ಉಪಸ್ಥಿತರಿದ್ದರು.
ಬಹುಮಾನ ವಿಜೇತರು
ಬಂಪರ್ ಬಹುಮಾನ ವಿಜೇತರು ಹರಿಹರಸುಧನ್ (1 ಕೆಜಿ ಚಿನ್ನ), ಸತೀಶ್ ಕುಮಾರ್ ರೆಡ್ಡಿ (50 ಗ್ರಾಂ ಬೆಳ್ಳಿ), ಅರುಲ್‌ವುಣಿ (2 ಗ್ರಾಂ ಚಿನ್ನ), ಪ್ರಿಯಾಂಕ, ಅಲ್ಲಪಲ್ಲಿ ಗುಲ್‌ಫಾಂ ಅರ, ದೀಪಕ್ ಡಿ. ಅವರು ತಲಾ 1 ಗ್ರಾಂ ಚಿನ್ನವನ್ನು ಪಡೆದಿದ್ದಾರೆ.