Advertisement

Journey: ನೆನಪಿನ ಜೋಳಿಗೆಯಲ್ಲೊಂದು ಬೆಂಗಳೂರು ಪಯಣ

01:25 PM Mar 06, 2024 | Team Udayavani |

ಒಂದಲ್ಲ ಒಂದು ರೀತಿಯಲ್ಲಿ ಎಲ್ಲರಿಗೂ ಬೆಂಗಳೂರು ನೋಡಬೇಕು ಅನ್ನುವ ಆಸೆ ಇದ್ದೇ ಇರುತ್ತದೆ. ಹಾಗೇ ನಾನು ಕೂಡ… ಹಾಗಂತ ನಾನು ಇದೇ ಮೊದಲ ಬಾರಿಗೆ ಬೆಂಗಳೂರು ಪಯಣಿಸುತ್ತಿರುವುದಲ್ಲ, ಈ ಮೊದಲು ಕೂಡ ಕೆಲಸದ ನಿಮಿತ್ತ ಹೋಗಿ ಬಂದಿದ್ದೇನೆ. ಆದರೆ ಈ ಬಾರಿ ಪ್ರಯಾಣ ಒಂದು ರೀತಿಯಲ್ಲಿ ವಿಭಿನ್ನವಾಗಿತ್ತು.

Advertisement

ಎಲ್ಲವೂ ಸಿದ್ಧವಾಗಿತ್ತು, ಬೆಂಗಳೂರಿಗೆ ಅದೇ ದಿನ ನನ್ನ ಸ್ನೇಹಿತ ಕೂಡ ಪಯಣಿಸುತ್ತಿದ್ದರಿಂದ ಜತೆಗೊಬ್ಬರು ಇರುವಂತಾಯಿತು. ಮಂಗಳೂರಿಗೆ ಬೈಕ್‌ ಸವಾರಿ ಮಾಡಿ ತಲುಪಿ, ಅಲ್ಲಿಂದ ನಾನು ಮತ್ತು ಗೆಳೆಯ ರೈಲ್ವೇ ಸ್ಟೇಶನ್‌ ಕಡೆ ಹೊರಟೆವು. ಟ್ರೆನ್‌ ಹೊರಡಲು ಇನ್ನೂ ಸಮಯ ಇದ್ದುದರಿಂದ ನಾವಿಬ್ಬರು ಜತೆಗೆ ನಮಗಿಷ್ಟವಾದ ಬಿರಿಯಾನಿ ತಿಂದು ಹೊಟ್ಟೆ ಗಟ್ಟಿ ಮಾಡಿಕೊಂಡು ರೈಲು ಹತ್ತಿ ಕುಳಿತೆವು.

ರೈಲು ನಿಲ್ದಾಣವನ್ನು ಬಿಟ್ಟು ಹೊರಡುತ್ತಿದ್ದಂತೆ ನಾನು, ನನ್ನ ಸ್ನೇಹಿತನ ಹರಾಟೆ ಆರಂಭವಾಯಿತು. ರೈಲಿನ ವೇಗ ಹೆಚ್ಚಿದಂತೆ ತಣ್ಣನೆ ಗಾಳಿ ಏನೋ ಮಾತನಾಡುತ್ತಾ ಇದ್ದ ಹಾಗೇ ನಿದ್ದೆ ನಮ್ಮಿಬ್ಬರನ್ನು ಆವರಿಸಿ ಆಗಿತ್ತು. ಎಚ್ಚರವಾದಾಗ ಬೆಂಗಳೂರು ತಲುಪಿದ್ದೆವು.

ರೈಲಿನಿಂದ ಇಳಿದು ಜತೆಗಿದ್ದ ಗೆಳೆಯ ಆತನಿದ್ದ ರೂಮ್‌ ಕಡೆ ಹೊರಟು ನಿಂತರೆ, ನಾನು ಇನ್ನೊಂದೆಡೆ ಹೋಗಬೇಕಿತ್ತು. ಹಾಗಾಗಿ ನನ್ನ ಇನ್ನೊಬ್ಬ ಗೆಳೆಯನಿಗೆ ಕರೆ ಮಾಡಿ ಬರುವಂತೆ ಹೇಳಿದೆ, ಆತ ಇನ್ನು ಎದ್ದಿರಲಿಲ್ಲ ಹಾಗೂ ಮೈಸೂರಿನಿಂದ ಬರಬೇಕಿತ್ತು. ಹಾಗಾಗಿ ಆತ ಬರುವುದು ಸ್ವಲ್ಪ ತಡವಾಗುವುದೆಂದು ಅನಿಸಿ ಅಲ್ಲಿಯೇ ಟೀ ಸವಿಯುತ್ತಾ ಕುಳಿತೆ.

ಅಷ್ಟರಲ್ಲಿ ಅಲ್ಲಿಗೆ ಬೈಕ್‌ನಲ್ಲಿ ಬಂದ ಸ್ನೇಹಿತನೊಂದಿಗೆ ಆತನ ರೂಮ್‌ಗೆ ತೆರಳಿ, ಅಲ್ಲಿಯೇ ಫ್ರೆಶ್‌ಅಪ್‌ ಆಗಿ ಇನ್ನೇನು ತಿಂಡಿ ತಿಂದು ಸಂದರ್ಶನಕ್ಕೆಂದು ಅವನ ಜತೆಗೆ ಹೊರಟೆ, ಅವನೂ ಕೂಡ ಅಲ್ಲಿಯೇ ಕೆಲಸ ಮಾಡುತ್ತಿದ್ದರಿಂದ ಇನ್ನಷ್ಟು ಆರಾಮ ಅನಿಸಿತು. ಆಫೀಸ್‌ ತಲುಪಿ ಒಂದು ಸುತ್ತಿನ ಕೆಲಸ ಮುಗಿಸಿ ಬಂದು ಕುಳಿತಿದ್ದೆ ಅಷ್ಟೇ, ಏಕೋ ಗೊತ್ತಿಲ್ಲ ತುಂಬಾನೆ ಬೇಜಾರು ನಿದ್ದೆಯೇ ಬಂದಂತೆ.

Advertisement

ಸಂಜೆ ತನಕ ಅದೇ ಮೂಡ್‌ನ‌ಲ್ಲಿ ಇದ್ದ ನನಗೆ ಕೊನೆಯದಾಗಿ ಮೀಟಿಂಗ್‌ ಮುಗಿಯುವಷ್ಟರಲ್ಲಿ ಕತ್ತಲಾಗುತ್ತ ಬಂದಿತ್ತು. ಹೇಗೋ ಮುಗಿಸಿ ಮತ್ತೇ ಗೆಳೆಯನೊಂದಿಗೆ ಆತನ ರೂಮಿಗೆ ಬಂದಿದ್ದೆ. ಸ್ಪೆಷಲ್‌ ಡಿನ್ನರ್‌ ಕೂಡ ಇತ್ತು. ರಾತ್ರಿ 10.30ಗೆ ಮಂಗಳೂರಿಗೆ ಬಸ್‌ ಇದ್ದುದರಿಂದ ಬಸ್‌ ಸ್ಟಾಪ್‌ ವರೆಗೂ ಗೆಳೆಯನೇ ಡ್ರಾಪ್‌ ಮಾಡಿ ಕಳುಹಿಸಿಕೊಟ್ಟ ಅಷ್ಟೇ…

ಬಸ್‌ ಹತ್ತಿದ್ದು ನೆನಪಿದೆ ಆಮೇಲೆ ಏನಾಯ್ತು ಗೊತ್ತಿಲ್ಲ, ಬಸ್‌ ಬಣ್ಣ ಗೊತ್ತಿಲ್ಲ, ಪಕ್ಕದಲ್ಲಿ ಯಾರಿದ್ದರೆಂದೂ ತಿಳಿದಿಲ್ಲ, ಒಂದು ಮೊಬೈಲ್‌ ಸ್ವಿಚ್‌ ಆಫ್ ಆಗಿತ್ತು. ಇನ್ನೊಂದು ನಿದ್ದೆ ನನ್ನ ಆವರಿತ್ತು, ನಿನ್ನೆ ರಾತ್ರಿ ಪಯಣಸಿದ್ದಕ್ಕೋ, ಇಡೀ ದಿನ ಓಡಾಡಿದಕ್ಕೋ ಗೊತ್ತಿಲ್ಲ. ಕಣ್ಣು ಬಿಡಲಾಗದಷ್ಟು ನಿದ್ದೆ, ಬಸ್‌ ಕಿಟಕಿ ತೆರೆದೇ ಇದ್ದರಿಂದ ಮಧ್ಯ ತಣ್ಣನೆ ಗಾಳಿ ಬೀಸುತ್ತಿತ್ತು. ತಟ್ಟನೆ ಎಚ್ಚರಗೊಂಡು 1ಗಂಟೆ ಅಥವಾ 2 ಗಂಟೆ ಆಗಿರಬಹುದೆಂದು ಮನಸ್ಸಿನಲ್ಲಿಯೇ ಅಂದುಕೊಂಡೆ, ಅಷ್ಟರಲ್ಲಿ ಬಸ್‌ ಸಹಾಯಕ ಮಂಗಳೂರು ಯಾರಾದರು ಇಳಿಯುವವರಿದ್ದೀರ ಎಂದಾಗ ಅಚ್ಚರಿಯೇ ಆಗಿತ್ತು. ಅರೇ ಇಷ್ಟು ಬೇಗ ಅಂದು ಕೂಡಲೇ ಸಮಯ ನೋಡಿದೆ 5.30ಗೆ ತಲುಪೋ ಬಸ್‌ ಒಂದು ಗಂಟೆ ಮೊದಲೇ ತಲುಪಿತ್ತು. ಎಚ್ಚರಗೊಂಡ ಒಂದು ನಿಮಿಷದಲ್ಲಿ ಬಸ್ಸಿನಿಂದ ಇಳಿದಿದ್ದೆ, ಏನಾಯ್ತು ಯೋಚಿಸುವುದೋ ಅಲ್ಲ ನನ್ನ ಈ ರೀತಿಯ ನಿದ್ದೆ ಮಂಪರಿಗೆ ನಗುವುದೋ ತಿಳಿಯಲಿಲ್ಲ.

ಹೀಗೆ ನನ್ನ ಬೆಂಗಳೂರು ಪಯಣ ಕೊನೆಗೊಂಡಿತಾದರು, ಈ ಪಯಣದ ನೆನಪು ಮತ್ತೆ ಮತ್ತೆ ಕಾಡುತ್ತಿದೆ. ಈ ನೆನಪುಗಳೇ ಹಾಗೇ ಮರೆತು ಬಿಡುವ ಎಂದರೂ ಮರೆಯಲಾಗುವುದಿಲ್ಲ.

ಸೂರಜ್‌ ಪಡು

ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next