Advertisement

ಮಡಪ್ಪಾಡಿಯಲ್ಲಿ ಪತ್ರಕರ್ತರ ಗ್ರಾಮ ವಾಸ್ತವ್ಯ

10:11 AM Jan 07, 2020 | mahesh |

ಸುಳ್ಯ: ದ. ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ದ.ಕ. ಜಿಲ್ಲಾಡಳಿತ, ಪೊಲೀಸ್‌ ಇಲಾಖೆ, ಮತ್ತು ಮಡಪ್ಪಾಡಿ ಗ್ರಾ. ಪಂ. ಸಹಭಾಗಿತ್ವದಲ್ಲಿ ಪತ್ರಕರ್ತರ ಗ್ರಾಮ ವಾಸ್ತವ್ಯ ರವಿವಾರ ಮಡಪ್ಪಾಡಿಯಲ್ಲಿ ನಡೆಯಿತು.

Advertisement

ಎ.ಜೆ. ವೈದ್ಯಕೀಯ ಮಹಾವಿದ್ಯಾ ಲಯ ಮತ್ತು ಸಂಶೋಧನ ಕೇಂದ್ರ ವತಿಯಿಂದ ಉಚಿತ ವೈದ್ಯಕೀಯ ಮತ್ತು ದಂತ ಚಿಕಿತ್ಸಾ ಶಿಬಿರ ಮತ್ತು ಇಂಡಿಯನ್‌ ರೆಡ್‌ ಕ್ರಾಸ್‌ನ ಜಿಲ್ಲಾಘಟಕದ ಆಶ್ರಯದಲ್ಲಿ ರಕ್ತದಾನ ಶಿಬಿರ ನಡೆಯಿತು. ವೈದ್ಯಕೀಯ ಶಿಬಿರದಲ್ಲಿ 138 ಮತ್ತು ರಕ್ತದಾನ ಶಿಬಿರದಲ್ಲಿ 35ಕ್ಕೂ ಅಧಿಕ ಮಂದಿ ಪಾಲ್ಗೊಂಡರು. ಈ ವೇಳೆ ನಡೆದ ಆಧಾರ್‌ ತಿದ್ದುಪಡಿಯಲ್ಲಿ 75ಕ್ಕೂ ಅಧಿಕ ಮಂದಿ ಪ್ರಯೋಜನ ಪಡೆದರು. ಮತದಾರರ ಪಟ್ಟಿ ತಿದ್ದುಪಡಿ, ಸೇರ್ಪಡೆಯ ಮಿಂಚಿನ ನೋಂದಣಿ ಪ್ರಕ್ರಿಯೆ ನಡೆಯಿತು. ವಿವಿಧ ಇಲಾಖೆಗಳ ಸೌಲಭ್ಯಗಳ ಮಾಹಿತಿಯನ್ನು ಸ್ಟಾಲ್‌ಗ‌ಳಲ್ಲಿ ಪ್ರದರ್ಶಿಸಲಾಯಿತು.

ಗ್ರಾಮಸ್ಥರ ಜತೆಗಿನ ಸಂವಾದದಲ್ಲಿ ದೂರವಾಣಿ ನೆಟ್‌ವರ್ಕ್‌, ಅಡಿಕೆ ಎಲೆ ಹಳದಿ ರೋಗ, ಅರಣ್ಯ ಭೂಮಿ ಕಾರಣ ರಸ್ತೆ, ಹಕ್ಕುಪತ್ರ ದೊರೆಯದಿರುವುದು, ಸರಕಾರಿ ಶಾಲೆಗೆ ಸಂಪರ್ಕಕ್ಕೆ ವಾಹನ ಸಮಸ್ಯೆ, ಹದಗೆಟ್ಟ ಸಂಪರ್ಕ ರಸ್ತೆ ಸಹಿತ 23ಕ್ಕೂ ಅಧಿಕ ಮಂದಿ ಬೇಡಿಕೆ ಪಟ್ಟಿ ಮುಂದಿರಿಸಿದರು. ಇದಕ್ಕೆ ಅಧಿಕಾರಿಗಳು ಉತ್ತರಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಸಂಜೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ಗ್ರಾಮಸ್ಥರು ಮತ್ತು ಜನಪ್ರತಿನಿಧಿಗಳೊಂದಿಗೆ ಸಂವಾದ ನಡೆಯಿತು. ಗ್ರಾಮಸ್ಥರ ಬೇಡಿಕೆಯಂತೆ ಮಡಪ್ಪಾಡಿ ಗ್ರಾಮಕ್ಕೆ ಸರಕಾರದಿಂದ ವಿಶೇಷ ಪ್ಯಾಕೇಜ್‌ ಒದಗಿಸುವ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚೆ ಮತ್ತು ಜ.15ರೊಳಗೆ ಜಿಲ್ಲಾ ಮಟ್ಟದಲ್ಲಿ ಸಭೆ ಆಯೋಜಿಸುವ ಭರವಸೆ ನೀಡಿದರು.

ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಸಿಂಧೂ ರೂಪೇಶ್‌ ಉದ್ಘಾಟಿಸಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅಧ್ಯಕ್ಷತೆ ವಹಿಸಿದ್ದರು.

Advertisement

40 ವರ್ಷ ಬಳಿಕ ಗ್ರಾಮಕ್ಕೆ ಡಿಸಿ !
ಮಡಪ್ಪಾಡಿ ಗ್ರಾಮಕ್ಕೆ 40 ವರ್ಷದ ಬಳಿಕ ಡಿಸಿ ಬಂದಿದ್ದಾರೆ. ಇಷ್ಟೊಂದು ಅಧಿಕಾರಿಗಳನ್ನು ಈ ಗ್ರಾಮದಲ್ಲಿ ಕಂಡದ್ದೆ ಇದು ಮೊದಲ ಬಾರಿ ಎಂದು ಗ್ರಾಮಸ್ಥರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next