ಲಾಗಿದೆ. ಈ ಮೂವರೂ ದಿಲ್ಲಿಯ ಮಹಿ ಪಾಲ್‌ಪುರದಲ್ಲಿ ಕಂಪೆನಿ ಮುನ್ನಡೆಸುತ್ತಿದ್ದರು. ಚೀನಕ್ಕೆ ಔಷಧಗಳನ್ನು ರವಾನಿಸುವ ಸೋಗಿ ನಲ್ಲಿ ಭಾರತೀಯ ಸೇನೆಯ ರಹಸ್ಯಗಳನ್ನು ಒದಗಿಸಿ ಪ್ರತಿಯಾಗಿ ಬೀಜಿಂಗ್‌ನ ಗುಪ್ತಚರ ಸಂಸ್ಥೆಗಳಿಂದ ಅಪಾರ ಹಣ ಪಡೆಯುತ್ತಿದ್ದರು. ಭಾರತೀಯ ಸೇನಾಪಡೆ, ಗಡಿಯಲ್ಲಿ ಸೇನೆ ನಿಯೋಜನೆ ಕುರಿತ ಹಲವು ರಹಸ್ಯಗಳನ್ನು ಸೋರಿಕೆ ಮಾಡಿದ್ದರು ಎಂದು ದಿಲ್ಲಿ ಪೊಲೀಸ್ ವಿಶೇಷ ಘಟಕದ ಡಿಸಿಪಿ ಸಂಜೀವ್ ಕುಮಾರ್ ಯಾದವ್ ತಿಳಿಸಿದ್ದಾರೆ.
Advertisement
ಒಂದು ಮಾಹಿತಿಗೆ 74 ಸಾವಿರ ರೂ.!ಶರ್ಮಾನ ಕಂಪೆನಿಯಲ್ಲಿ ಭಾರತೀಯ ಸೇನೆ ಕುರಿತಾದ ಹಲವು ದಾಖಲೆಗಳು ಪತ್ತೆಯಾಗಿವೆ. ಅಪಾರ ಪ್ರಮಾಣದ ಮೊಬೈಲ್‌ಗಳು, ಲ್ಯಾಪ್‌ಟಾಪ್ ಅಲ್ಲದೆ ಮುಖ್ಯವಾಗಿ ಸೇನೆ ನಿಯೋಜನೆ, ಭದ್ರತೆ ವಿಚಾರಗಳ ಕುರಿತಾದ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ರಾಜೀವ್ ಶರ್ಮಾ ಚೀನದ ಗೂಢಚಾರಿಯಾಗಿ ಕಳೆದೊಂದು ವರ್ಷದಲ್ಲಿ 40-45 ಲಕ್ಷ ರೂ. ಪಡೆದಿದ್ದಾನೆ. ಪ್ರತೀ ಮಾಹಿತಿಗೂ ಈತ 74 ಸಾವಿರ ರೂ. ಪಡೆಯುತ್ತಿದ್ದ ಎಂದು ಡಿಸಿಪಿ ವಿವರಿಸಿದ್ದಾರೆ. ಗುಪ್ತಚರ ಸಂಸ್ಥೆಯ ನಿಖರ ಮಾಹಿತಿ ಆಧರಿಸಿ ಶರ್ಮಾನನ್ನು ಸೆ. 14ರಂದು ಪೊಲೀಸರು ಬಂಧಿಸಿದ್ದು, ಶುಕ್ರವಾರ ಈ ಮಾಹಿತಿ ಹೊರಬಿದ್ದಿದೆ.
ಹವ್ಯಾಸಿ ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದ ಶರ್ಮಾ, ರಕ್ಷಣ ಕ್ಷೇತ್ರದ ವಿಚಾರಗಳ ಕುರಿತು ಭಾರತೀಯ ಸುದ್ದಿ ಸಂಸ್ಥೆಗಳಿಗೆ ಹೆಚ್ಚು ಬರೆಯುತ್ತಿದ್ದ. ಚೀನದ ಸರಕಾರಿ ಸ್ವಾಮ್ಯದ ಗ್ಲೋಬಲ್ ಟೈಮ್ಸ್ ಜತೆಗೆ ದೇಶದ ಹಲವು ರಹಸ್ಯಗಳನ್ನು ಹಂಚಿಕೊಳ್ಳುತ್ತಿದ್ದ ವಿಚಾರ ತನಿಖೆ ವೇಳೆ ಬಹಿರಂಗವಾಗಿದೆ.