Advertisement

ಪತ್ರಕರ್ತ ಕ್ರಾಂತಿಯನ್ನು ಉಂಟುಮಾಡುವ ವ್ಯಕ್ತಿ: ಗೋವಿಂದ 

01:14 PM Aug 03, 2018 | |

ಸುಬ್ರಹ್ಮಣ್ಯ : ಗನ್‌, ಖಡ್ಗ,ಸ್ಫೋಟಕ ವಸ್ತುಗಳು ವಿನಾಶದ ಪ್ರವೃತ್ತಿ ಹೊಂದಿ ರಕ್ತಕ್ರಾಂತಿ ನಡೆಸಿದರೆ, ಲೇಖನಿ ಮನಸ್ಸು ಬದಲಾವಣೆಯ ಮೂಲಕ ಸಮಾಜ ಪರಿವರ್ತಿಸುವ ಕೆಲಸ ಮಾಡುತ್ತದೆ. ಇದರಲ್ಲಿ ಬಹುಮುಖ್ಯ ಪಾತ್ರ ವಹಿಸುವ ಪತ್ರಕರ್ತ ಕ್ರಾಂತಿಯನ್ನು ಉಂಟುಮಾಡುವ ವ್ಯಕ್ತಿ. ಇದು ಶ್ರೇಷ್ಠ ಕಾರ್ಯ ಎಂದು ಕೆಎಸ್‌ಎಸ್‌ ಕಾಲೇಜು ಉಪನ್ಯಾಸಕ ಡಾ| ಗೋವಿಂದ ಎನ್‌ಎಸ್‌ ಹೇಳಿದರು.

Advertisement

ಇಲ್ಲಿನ ವಲಯ ಪತ್ರಕರ್ತ ಸಂಘ, ರೋಟರಿ ಕ್ಲಬ್‌, ಪ.ಪೂ. ಕಾಲೇಜು ಸುಬ್ರಹ್ಮಣ್ಯ ಇವುಗಳ ಆಶ್ರಯದಲ್ಲಿ ಎಸ್‌ಎಸ್‌ಪಿಯು ಕಾಲೇಜಿನಲ್ಲಿ ನಡೆದ ಪತ್ರಿಕಾ ದಿನಾಚರಣೆ ಪ್ರಯುಕ್ತದ ಕಾರ್ಯಕ್ರಮದಲ್ಲಿ ಅವರು ಬುಧವಾರ ಉಪನ್ಯಾಸ ನೀಡಿದರು. 

ಅಭಿವ್ಯಕ್ತಿ ಸ್ವಾತಂಂತ್ರ್ಯ ಎಂದರೆ ಹೇಳಬೇಕಾಗಿರುವುದನ್ನು ಬರಹರೂಪದಲ್ಲಿ ಹೇಳುವುದು. ಪತ್ರಿಕಾ ರಂಗ ಪ್ರಭಾವಿ ಕ್ಷೇತ್ರವಾಗಿ ಇಂದು ಗುರುತಿಸಿಕೊಂಡಿದೆ. ದುರಾದೃಷ್ಟ ಎಂದರೆ ಜಾಹೀರಾತು ಪಡೆದು ಸುದ್ದಿ ಬರೆಯುವ ಸಂಸ್ಕೃತಿ ಇತ್ತೀಚೆಗೆ ಹೆಚ್ಚುತ್ತಿದ್ದು, ಅದರಲ್ಲೂ ಸುಳ್ಯ ತಾಲೂಕಿನಲ್ಲಿ ಇದರ ಪ್ರಮಾಣ ತೀರಾ ಹೆಚ್ಚಿದೆ. ಪತ್ರಿಕೆ ನಡೆಸಲು ಹಣ ಬೇಕು ನಿಜ ಆದರೆ ಅದನ್ನೇ ಚಾಳಿಯಾಗಿ ಬೆಳೆಸಿಕೊಳ್ಳಬಾರದು. ಉಳ್ಳವರಿಗೆ ಧ್ವನಿಯಾಗಿ ಹಣವಂತರಿಗೆ ಮಣೆ ಹಾಕುವ ಪ್ರವೃತ್ತಿ ದೂರವಾಗಬೇಕು. ಇದರಿಂದ ಪತ್ರಿಕೆ ಮೇಲಿನ ವಿಶ್ವಾಸ ಕಳೆದು ಹೋಗುತ್ತದೆ ಎಂದರು.

ಪ.ಪೂ. ಕಾಲೇಜು ಪ್ರಾಂಶುಪಾಲೆ ಸಾವಿತ್ರಿ ಉದ್ಘಾಟಿಸಿದರು. ಪತ್ರಕರ್ತರ ಸಂಘದ ಅಧ್ಯಲ್ಷ ಪ್ರಕಾಶ ವಿಶ್ವಕರ್ಮ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತರ ಸಂಘದ ಗೌರವಾಧ್ಯಕ್ಷ ಎನ್‌ ಮಂಜುನಾಥ ರಾವ್‌, ರೋಟರಿ ಅಧ್ಯಕ್ಷ ವಿಶ್ವನಾಥ ನಡುತೋಟ ಶುಭಹಾರೈಸಿದರು. ಈ ವೇಳೆ ಪತ್ರಕರ್ತ ಹಾಗೂ ಛಾಯಾಚಿತ್ರಗ್ರಾಹಕ ಲೊಕೇಶ್‌ ಬಿ.ಎನ್‌. ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು. ಪತ್ರಕರ್ತ ರತ್ನಾಕರ ಎಸ್‌. ಸಮ್ಮಾನಿತರ ಪರಿಚಯ ವಾಚಿಸಿದರು. ಲೊಕೇಶ್‌ ಬಿ.ಎನ್‌. ಸ್ವಾಗತಿಸಿ, ಕಾರ್ಯದರ್ಶಿ ದಿನೇಶ್‌ ಹಾಲೆಮಜಲು ವಂದಿಸಿದರು. ಪತ್ರಕರ್ತ ಭರತ್‌ ನೆಕ್ರಾಜೆ ನಿರೂಪಿಸಿದರು.

ಗ್ರಾಮೀಣ ವರದಿಗಾರಿಕೆ
ಉದಯವಾಣಿಯಲ್ಲಿ ಪ್ರಕಟವಾದ ಮಾನವಾಸಕ್ತಿಯ ವರದಿಯೊಂದನ್ನು ಪ್ರಸ್ತಾವಿಸಿದ ಎಸ್‌.ಎನ್‌. ಗೋವಿಂದ ಅವರು ಒಳ್ಳೊಳ್ಳೆಯ ಸುದ್ದಿಗಳನ್ನು ಮೂಲೆಮೂಲೆಗಳಿಂದ ಹೆಕ್ಕಿ ತರುವ ಕೆಲಸ ಗ್ರಾಮೀಣ ಪತ್ರಕರ್ತರಿಂದ ಆಗಬೇಕು. ಈಗ ಕಚೇರಿಯಲ್ಲಿ ಕುಳಿತು ಸುದ್ದಿ ಮಾಡುವ ಪತ್ರಕರ್ತರು ಹೆಚ್ಚುತ್ತಿದ್ದು, ಅವರ ದಾರಿಯಲ್ಲಿ ಇಲ್ಲಿನ ಪತ್ರಕರ್ತರು ಸಾಗಬಾರದು ಎಂದು ಸಲಹೆ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next