ಜೋಶಿಮಠ: 2022 ಡಿ.27ರಿಂದ ಜ.8ರ ನಡುವಿನ 12 ದಿನಗಳಲ್ಲಿ ಜೋಶಿಮಠ 5.4 ಸೆಂಟಿಮೀಟರ್ ಕುಸಿತಗೊಂಡಿದೆ. ಇದೇ ರೀತಿ ಕುಸಿತ ಮುಂದುವರಿದರೆ ಇಡೀ ಪ್ರದೇಶ ಮುಳುಗಿ ಹೋಗಬಹುದು ಎಂದು ಇಸ್ರೋ ಹಾಗೂ ಹೈದರಾಬಾದ್‌ನ ನ್ಯಾಶನಲ್ ರಿಮೋಟ್ ಸೆನ್ಸಿಂಗ್ ಸೆಂಟರ್(ಎನ್‌ಆರ್‌ಎಸ್‌ಸಿ) ಎಚ್ಚರಿಸಿದೆ.
ಉತ್ತರಖಂಡದ ಜೋಶಿಮಠದ ಉಪ ಗ್ರಹ ಚಿತ್ರಗಳನ್ನು ಎನ್‌ಆರ್‌ಎಸ್‌ಸಿ ಶುಕ್ರ ವಾರ ಬಿಡುಗಡೆಗೊಳಿಸಿದ್ದು, ಪಟ್ಟಣದಲ್ಲಿ ತೀವ್ರ ಭೂಕುಸಿತವಾಗಿರುವುದನ್ನು ಅದರಲ್ಲಿ ತೋರಿಸಲಾಗಿದೆ. ಕಾರ್ಟೊಸ್ಯಾಟ್-2ಎಸ್ ಉಪಗ್ರಹವು ಈ ಚಿತ್ರಗಳನ್ನು ಸೆರೆಹಿಡಿದಿದೆ.
ಜೋಶಿಮಠದಲ್ಲಿರುವ ಭಾರತೀಯ ಸೇನೆಯ ಹೆಲಿಪ್ಯಾಡ್ ಮತ್ತು ಒಂದು ದೇಗುಲವಿರುವ ಪ್ರದೇಶವನ್ನು ಸೂಕ್ಷ್ಮ ವಲಯ ಎಂದು ಗುರುತಿಸಲಾಗಿದೆ.
ಇಸ್ರೋದ ಪ್ರಾಥಮಿಕ ವರದಿಯ ಪ್ರಕಾರ, ಜೋಶಿಮಠದಲ್ಲಿ 2022ರ ಎಪ್ರಿಲ್‌ನಿಂದ ನವೆಂಬರ್‌ವರೆಗೆ ಭೂಕುಸಿತ ಅಲ್ಪ ಪ್ರಮಾಣ ದಲ್ಲಿತ್ತು. ಈ ಅವಧಿಯಲ್ಲಿ 8.9 ಸೆಂ.ಮೀ. ಕುಸಿತವಾಗಿದೆ. ಆದರೆ ಡಿ.27ರಿಂದ 2023ರ ಜ.8ರ ನಡುವೆ ಭೂಕುಸಿತ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದ್ದು, ಈ ಅವ ಧಿಯ 5.4 ಸೆಂ.ಮೀ. ಕುಸಿತಗೊಂಡಿದೆ.
Related Articles
ಇನ್ನೊಂದೆಡೆ ಜೋಶಿಮಠ-ಔಲಿ ರಸ್ತೆಯ ಅಪಾಯದ ಪ್ರಮಾಣ ಹೆಚ್ಚಿದ್ದು, ಭೂಕುಸಿತದಿಂದ ರಸ್ತೆ ಕುಸಿಯುವ ಸಾಧ್ಯತೆ ಇದೆ ಎಂದು ಇಸ್ರೋ ತಿಳಿಸಿದೆ.
ಯೋಜನೆಗೆ ಅನುಮೋದನೆ: ಉತ್ತರಾ ಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ನೇತೃತ್ವದಲ್ಲಿ ಸಂಪುಟ ಸಭೆಯಲ್ಲಿ 45 ಕೋಟಿ ರೂ. ಮೌಲ್ಯದ ಪುನರ್‌ವಸತಿ ಯೋಜನೆಗೆ ಅನುಮೋದನೆ ನೀಡಲಾಗಿದೆ ಈ ಕುರಿತು ಪ್ರತಿಕ್ರಿಯಿಸಿದ ಸಿಎಂ ಧಾಮಿ, “ಇದುವರೆಗೂ ಜೋಶಿಮಠದ 99 ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. 6 ತಿಂಗಳ ಮಟ್ಟಿಗೆ ಈ ಕುಟುಂಬಗಳ ವಿದ್ಯುತ್ ಮತ್ತು ನೀರಿನ ಬಿಲ್ ಮನ್ನಾ ಮಾಡಲಾಗಿದೆ’ ಎಂದು ತಿಳಿಸಿದರು. “ಇದುವರೆಗೂ ನಾವು ಯಾವುದೇ ಮನೆಗಳನ್ನು ಕೆಡವಿ ಹಾಕಿಲ್ಲ. ಸೂಕ್ಷ್ಮ ಪ್ರದೇಶವನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ’ ಎಂದು ವಿವರಿಸಿದರು.