Advertisement

ಜೋಶಿಮಠ: ಅಸುರಕ್ಷಿತವೆಂದರೂ ಮನೆಗಳನ್ನು ಬಿಡಲು ಹಿಂಜರಿಯುತ್ತಿರುವ ನಿವಾಸಿಗಳು

08:32 PM Jan 09, 2023 | Team Udayavani |

ಡೆಹ್ರಾಡೂನ್: ಜೋಶಿಮಠದಲ್ಲಿ ಭೂಮಿ ಕುಸಿತದಿಂದ ಅಸುರಕ್ಷಿತವೆಂದು ಘೋಷಿಸಲಾದ ತಮ್ಮ ಮನೆಗಳನ್ನು ಬಿಡಲು ಅನೇಕ ನಿವಾಸಿಗಳು ಹಿಂಜರಿಯುತ್ತಿದ್ದಾರೆ. ಉತ್ತರಾಖಂಡದ ಮುಖ್ಯ ಕಾರ್ಯದರ್ಶಿ ಎಸ್‌ಎಸ್ ಸಂಧು ಸೋಮವಾರ ಪ್ರತಿ ನಿಮಿಷವೂ ಮುಖ್ಯವಾಗಿದೆ ಎಂದು ಒತ್ತಿ ಹೇಳಿದ್ದು ಪೀಡಿತ ವಲಯದಿಂದ ಜನರನ್ನು ತಕ್ಷಣ ಸ್ಥಳಾಂತರಿಸುವಂತೆ ನಿರ್ದೇಶಿಸಿದ್ದಾರೆ.

Advertisement

ಮುಳುಗಡೆಯಾಗುತ್ತಿರುವ ನಗರದಲ್ಲಿ ವಾಸಿಸಲು ಅಸುರಕ್ಷಿತವಾಗಿರುವ 200ಕ್ಕೂ ಹೆಚ್ಚು ಮನೆಗಳಿಗೆ ಜಿಲ್ಲಾಡಳಿತ ರೆಡ್ ಕ್ರಾಸ್ ಗುರುತು ಹಾಕಿತ್ತು. ತಮ್ಮ ನಿವಾಸಿಗಳನ್ನು ತಾತ್ಕಾಲಿಕ ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲು ಅಥವಾ ಬಾಡಿಗೆ ವಸತಿಗಾಗಿ ಪ್ರತಿ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ ಮುಂದಿನ ಆರು ತಿಂಗಳವರೆಗೆ (ತಿಂಗಳಿಗೆ 4000 ರೂ.) ನೆರವು ನೀಡಲಾಗುತ್ತಿದೆ.

ಪಟ್ಟಣದಲ್ಲಿ ಇದುವರೆಗೆ 82 ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆಗಳ ಸಿಬಂದಿಯನ್ನು ಪರಿಹಾರ ಮತ್ತು ರಕ್ಷಣಾ ಕಾರ್ಯಗಳಿಗಾಗಿ ನಿಯೋಜಿಸಲಾಗಿದೆ.

ಪೀಡಿತ ಪ್ರದೇಶದ ಅನೇಕ ಕುಟುಂಬಗಳು ತಮ್ಮ ಮನೆಗಳೊಂದಿಗಿನ ಭಾವನಾತ್ಮಕ ಸಂಬಂಧಗಳನ್ನು ಕಡಿದುಕೊಂಡು ಹೊರಗೆ ಹೋಗುವುದು ಕಷ್ಟಕರವಾಗಿದೆ.ತಾತ್ಕಾಲಿಕ ಆಶ್ರಯಕ್ಕೆ ತೆರಳಿದವರೂ ಸಹ ಮನೆಯ ಸೆಳೆತವನ್ನು ಮೀರಲು ಸಾಧ್ಯವಾಗದೆ ಅಪಾಯದ ವಲಯದಲ್ಲಿರುವ ತಮ್ಮ ತೊರೆದುಹೋದ ಮನೆಗಳಿಗೆ ಮರಳುತ್ತಿದ್ದಾರೆ.

ಏತನ್ಮಧ್ಯೆ, ಜೋಶಿಮಠದಲ್ಲಿನ ಬಿಕ್ಕಟ್ಟನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ನ್ಯಾಯಾಲಯದ ಮಧ್ಯಪ್ರವೇಶವನ್ನು ಕೋರಿದ ಅರ್ಜಿದಾರರಿಗೆ ತುರ್ತು ಪಟ್ಟಿಗಾಗಿ ಸಲ್ಲಿಸಿದ ಮನವಿಯನ್ನು ಮಂಗಳವಾರ ಉಲ್ಲೇಖಿಸುವಂತೆ ಸುಪ್ರೀಂ ಕೋರ್ಟ್ ಕೇಳಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next