ಡೆಹ್ರಾಡೂನ್: ವಸತಿ ಕಟ್ಟಡಗಳಲ್ಲಿ ಬಿರುಕು ಮೂಡಿದ್ದ ಜೋಶಿಮಠದಲ್ಲಿ ಈಗ ಆಹಾರಧಾನ್ಯ ಗೋದಾಮಿನಲ್ಲೂ ಬಿರುಕು ಕಾಣಿಸಿಕೊಂಡಿದೆ.
Advertisement
ಈ ಹಿನ್ನೆಲೆ ಗೋದಾಮಿನಲ್ಲಿರುವ ಸಂಗ್ರಹವನ್ನು ಖಾಲಿ ಮಾಡಲು ಹಾಗೂ ಮುಂಚಿತವಾಗಿಯೇ ಗ್ರಾಹಕರಿಗೆ ವಿತರಿಸಲು ಆಡಳಿತಾಧಿಕಾರಿಗಳು ಸೂಚನೆ ನೀಡಿದ್ದಾರೆ.
ಜನವರಿ 2-3ರ ಸಂದರ್ಭದಲ್ಲೇ ಗೋದಾಮಿನಲ್ಲಿ ಸಣ್ಣ ಬಿರುಕು ಮೂಡಿತ್ತು. ಆದರೆ ಈಗ ಗೋದಾಮಿನ ಕೆಲ ಕೊಠಡಿಗಳು ಕುಸಿಯುವ ಹಂತಕ್ಕೆ ತಲುಪಿರುವ ಹಿನ್ನೆಲೆ ಈ ನಿರ್ಣಯ ಕೈಗೊಳ್ಳಲಾಗಿದೆ.
ಆಹಾರ ಧಾನ್ಯ ಸಂಗ್ರಹಕ್ಕೆ ಗುಲಾಬ್‌ಕೋಟಿಯಲ್ಲಿರುವ ಗೋದಾಮನ್ನು ಪರ್ಯಾಯವಾಗಿ ಬಳಸಲು ಸೂಚಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.