Advertisement

ಜೋಶಿ ಕೇಂದ್ರ ಸಚಿವರೊಬ್ಬರ ರಿಮೋಟ್‌: ಹೊರಟ್ಟಿ

03:45 AM Jan 02, 2017 | Team Udayavani |

ಹುಬ್ಬಳ್ಳಿ: ಮಹದಾಯಿ ವಿಷಯವಾಗಿ ಸಂಸದ ಪ್ರಹ್ಲಾದ ಜೋಶಿ ಹಾಗೂ ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ನಡುವಿನ ಪತ್ರ ಸಮರ ಮುಂದುವರಿದಿದ್ದು, ಮತ್ತೂಂದು ಪತ್ರ ಬರೆದಿರುವ ಹೊರಟ್ಟಿ “ಜೋಶಿಯವರೇ ನೀವು ಕೇಂದ್ರ ಸಚಿವರೊಬ್ಬರ ರಿಮೋಟ್‌ ಕಂಟ್ರೋಲ್‌ನಲ್ಲಿ ಇದ್ದೀರಿ ಎಂಬುದು ನಾಡಿಗೆ ತಿಳಿದ ವಿಚಾರವಾಗಿದೆ’ ಎಂದು ವ್ಯಂಗವಾಡಿದ್ದಾರೆ.

Advertisement

ಜೋಶಿಯವರ ಎರಡನೇ ಪತ್ರಕ್ಕೆ ಉತ್ತರ ನೀಡಿರುವ ಹೊರಟ್ಟಿ, “ಮಹದಾಯಿ ವಿಷಯವಾಗಿ ಕನಿಷ್ಠ ಕಾಳಜಿ ತೋರದ, ಸಂಸತ್‌ನಲ್ಲಿ ಧ್ವನಿ ಎತ್ತದ ಸಂಸದ ಪ್ರಹ್ಲಾದ ಜೋಶಿಯವರೇ, ಇನ್ನೊಬ್ಬರಿಗೆ ರಿಮೋಟ್‌ ಕಂಟ್ರೋಲ್‌ ಎಂಬ ಪಟ್ಟ ಕಟ್ಟುತ್ತಿದ್ದೀರಿ. ಆದರೆ, ನೀವು ಕೇಂದ್ರ ಸಚಿವರೊಬ್ಬರ ರಿಮೋಟ್‌ ಕಂಟ್ರೋಲ್‌ನಲ್ಲಿ ಇದ್ದೀರಿ ಎಂಬುದು ನಾಡಿಗೆ ತಿಳಿದ ವಿಚಾರವಾಗಿದೆ ಎಂಬುದನ್ನು ಮರೆಯಬೇಡಿ’ ಎಂದು ಕುಟುಕಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next