Advertisement

ಬೌಲಿಂಗ್‌ ಕೋಚ್‌ ಹುದ್ದೆಗೆ ಜೋಶಿ ಅರ್ಜಿ

03:26 AM Aug 07, 2019 | Team Udayavani |

ಮುಂಬಯಿ: ಮಾಜಿ ಸ್ಪಿನ್ನರ್‌ ಸುನೀಲ್‌ ಜೋಶಿ ಅವರು ಟೀಮ್‌ ಇಂಡಿಯಾದ ಬೌಲಿಂಗ್‌ ಕೋಚ್‌ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ.

Advertisement

ಕೊಹ್ಲಿ ನೇತೃತ್ವದ ತಂಡಕ್ಕೆ ನುರಿತ ಸ್ಪಿನ್ನರೊಬ್ಬರ ಅಗತ್ಯವಿದೆ ಎಂಬ ನಂಬಕೆಯಿಂದ ಅರ್ಜಿ ಹಾಕಿದ್ದೇನೆ ಎಂದು ಅವರು ಹೇಳಿ ಕೊಂಡಿ ದ್ದಾರೆ. ಅನಿಲ್‌ ಕುಂಬ್ಳೆ ಅವರು ಮುಖ್ಯ ಕೋಚ್‌ ಆದ ಬಳಿಕ ಭಾರತೀಯ ತಂಡದಲ್ಲಿ ತಜ್ಞ ಸ್ಪಿನ್‌ ಸಲಹೆಗಾರರು ಇರಲಿಲ್ಲ. 2017ರ ಚಾಂಪಿಯನ್ಸ್‌ ಟ್ರೋಫಿ ಫೈನಲ್‌ನಲ್ಲಿ ಸೋತ ಬಳಿಕ ಕೊಹ್ಲಿ ಜತೆಗಿನ ವೈಮನಸ್ಸಿನಿಂದಾಗಿ ಕುಂಬ್ಳೆ ಕೋಚ್‌ ಹುದ್ದೆಯನ್ನು ತ್ಯಜಿಸಿದ್ದರು.

ಹೌದು, ನಾನು ಬೌಲಿಂಗ್‌ ಕೋಚ್‌ ಹುದ್ದೆಗೆ ಅರ್ಜಿ ಸಲ್ಲಿಸಿದ್ದೇನೆ. ಬಾಂಗ್ಲಾದೇಶ ತಂಡದ ಪರ ಎರಡೂವರೆ ವರ್ಷ ಕೋಚ್‌ ಹುದ್ದೆಯನ್ನು ಯಶಸ್ವಿಯಾಗಿ ನಿಭಾಯಿಸಿದ್ದೇನೆ. ಇದೀಗ ಹೊಸ ಸವಾಲಿಗೆ ಸಿದ್ಧನಾಗಿದ್ದೇನೆ. ಸದ್ಯ ಭಾರತ ತಂಡದಲ್ಲಿ ತಜ್ಞ ಸ್ಪಿನ್‌ ಕೋಚ್‌ ಇಲ್ಲ. ಹಾಗಾಗಿ ನನ್ನ ಸಾಧನೆಯನ್ನು ಪರಿಗಣಿಸಬಹುದು ಎಂದು ಜೋಶಿ ಹೇಳಿದ್ದಾರೆ.

ಅಂತಾರಾಷ್ಟ್ರೀಯ ಮತ್ತು ರಣಜಿ ತಂಡಕ್ಕೆ ಕೋಚಿಂಗ್‌ ನೀಡುವ ಮೊದಲು ಜೋಶಿ 1996ರಿಂದ 2001ರ ವರೆಗೆ ಭಾರತೀಯ ತಂಡದ ಪರ ಆಡಿದ್ದರು. 15 ಟೆಸ್ಟ್‌ ಆಡಿರುವ ಅವರು 41 ವಿಕೆಟ್‌ ಕೆಡಹಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 69 ವಿಕೆಟ್‌ ಕಿತ್ತಿದ್ದಾರೆ. ಕರ್ನಾಟಕದ ತಾರೆ ಜೋಶಿ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 615 ವಿಕೆಟ್‌ ಪಡೆದ ಸಾಧನೆ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next