ಜೀವನ ಸರಳೀತ ನಡ್ಯಾತೈತಿ ಅಂದ್ರೂ, ಆಗೊಮ್ಮೆ ಈಗೊಮ್ಮೆ ಅಲ್ಲೋಲ ಕಲ್ಲೋಲ ಎದ್ದ ಬಿಡ್ತೆ„ತಿ. ಮಾರ್ಚ್ ಕೊನೆ ವಾರದಾಗ ಏನ ಇದ ಕೋವಿಡ್ ರೋಗ ಪ್ರಾರಂಭ ಆತು, ಯಪ್ಪಾ, ಜೀವನಾನ ಬ್ಯಾಡ ಅನಸ್ತು. ಬ್ಯಾಸ್ರ ಅಂದ್ರ ಬ್ಯಾಸ್ರ. ಎಲ್ಲೂ ಹೋಗುವಂಗಿಲ್ಲ, ಮಾತಾಡುಹಂಗಿಲ್ಲ. ಬರೇ ಮನಿ ಮನಿ ಅಂದ, ಇದ್ದ 6 ತಿಂಗಳ ಮನ್ಯಾಗ ಕುಂಡ್ರುದಾತ.
ಸ್ವಲ್ಪನೂ ಬದ್ಲಾವಣೆ ಇಲ್ದಂಗಾತ. ಏನೋ ದೇವ್ರ ದಯಾ, ಕೋವಿಡ್ ಈಗ ಹತೋಟಿಗೆ ಬಂದೈತಿ. ಜೀವನಾ ನಾರ್ಮಲ್ ಸ್ಥಿತಿಗೆ
ಬರಾತೈತಿ. ಜನ ಹೊರಗಡೆ ಹೋಗಿ ಸಮಾಧಾನದಿಂದ ಉಸಿರಾಡುವಂಗ ಆಗೆತಿ. ಈಗ ಏನಂದ್ರ ಸಂಕ್ರಾಂತಿ ಹಬ್ಬ ಹತ್ರಕ್ ಬಂದದ. ರಾಶಿ ಮಾಡೋ ಕಾಲ. ರೈತರ ಕಷ್ಟದ ಫಲ ಉಣ್ಣೋ ಭಾಗ್ಯ. ಸಜ್ಜಿ ರೊಟ್ಟಿ, ಬದ್ನಿಕಾಯಿ ಭರ್ತ, ಅವರೆಕಾಯಿ ಪಲ್ಯ, ಶೇಂಗಾ ಗುರೆಳ್ಳ ಚಟ್ನಿ, ಪಚಡಿ, ಮಾದೇಲಿ ಮತ್ತ ಗಟ್ಟಿ ಮೊಸರ ಈ ಹಬ್ಬಕ್ಕ ಸ್ಪೆಷಲ್ ನೋಡ್.
ನಿನಗೇನ ಹೇಳೂದ, ಎಲ್ಲಾ ಗೊತ್ತ ಐತಿ. ಎಲ್ಲಾ ನಾನ ತಯಾರ್ ಮಾಡಾಕತ್ತೆನಿ. ಸಜ್ಜಿ ರೊಟ್ಟಿ ಬಾಯಾಗಿಟ್ಟರ್ ಕರಗಬೇಕ. ಹಂಗ ಮಾಡ್ತೇನಿ. ಪಲ್ಲೆಗಳ ಬಗ್ಗೆ ನಿಂದ ಭಾಳ್ ತಕರಾರೈತಿ. ಅದು ಬ್ಯಾಡ ಇದು ಬ್ಯಾಡ ಅಂತಿ. ಈ ಹಬ್ಬಕ್ಕ ಇಷ್ಟ ತರದ ಪಲ್ಯೆ ಬರತದಲಾ, ತಿನ್ನದಾಂವ ಪಾಪಿ ನೋಡ್. ಸಣ್ಣ ಹುಡುಗೊರ ಮಾಡತಾವಲ್ಲಾ, ಹಂಗ ಮಾಡತಿ.ಎಲ್ಲಾ ಜೀವಸತ್ವಗಳ ದೇಹದಾಗ
ಶಕ್ತಿ ಕೊಡಬೇಕಂದ್ರ ಪಲ್ಲೆಗಳನ್ನ ತಿನ್ನಬೇಕ. ಅದಕ್ಕ ಮೊದಲು ಹೇಳಾಕತ್ತೇನಿ ಬದನೆಕಾಯಿ ಭರ್ತ, ಅವರೆಕಾಯಿ ಪಲ್ಯ, ಚಟ್ನಿ ಎಲ್ಲಾ ಇರತಾವ. ಎಲ್ಲಾ ತಿನ್ನೋದ.
ಇದನ್ನೂ ಓದಿ:ಗಾಜನೂರ್ ಹೆಸರಿನಲ್ಲಿ ಹೊಸಬರ ಚಿತ್ರ : ಜ. 16ಕ್ಕೆ ಚಿತ್ರದ ಮುಹೂರ್ತಕ್ಕೆ ಸಿದ್ಧತೆ
ಮೊದಲ ಹೇಳೀನಲಾ, ಈ ಕರೋನಾ ಕಾಟದಾಗ ಎಲ್ಲೂ ತಿರುಗಾಡಾಕ ಆಗಿಲ್ಲ. ನೀ ಏನ ನಮ್ಮನಿಗೆ ಹೊಸಬಲ್ಲ. ಹಬ್ಬದ ದಿನ ಸೀದಾ ಮನಿಗೆ ಬಂದಬಿಡ್. ಮಧ್ಯಾಹ್ನ ಊಟ ಆದ ನಂತರ, ಸಂಜಿಕ ಎಳ್ಳು ಬೆಲ್ಲ ಹಂಚಿ, ದೇವರ ಗುಡಿಗೆ ಹೋಗಿ ಬರೋಣ. ಈ ದಿನಗಳು ಇಡೀ ಜಗತ್ತನ್ನ ಜೈಲದಾಗ ಇಟ್ಟಂಗಾಗಿತ್ತ. ಹೊರಗ ಹೋಗಾಕ ಎಂಥ ಭಯ ಅಂತಿ! ಬರೀ ಫೋನ್ ದಾಗ ನಾನ ನೀನ ಮಾತಾಡಿದ್ವಿ. ಅದೊಂದ ಸಮಾಧಾನ ಅಷ್ಟ. ಮೊದ್ಲಿನಂಗ ನಿನ್ನ ಯಾವಾಗ ನೋಡತೇನೋ, ನಿನ್ ಜೊತಿ ಯಾವಾಗ ಅಡ್ಡಾಡತೇನೋ ಅನಸ್ತ. ಅದಕ್ಕ ತಪ್ಪಸಲ್ಲದನ ಹಬ್ಬಕ್ಕ ಬಂದ್ಬಿಡ. ಇಷ್ಟು ದಿನ ಏನ ನಿನ್ನ ಮಿಸ್ ಮಾಡ್ಕೊಂಡೆನಲಾ ಅದನ್ನೆಲ್ಲ ಕಂಪೆನ್ಸೇಟ್ ಮಾಡ್ಬೇಕ ನೋಡ ಮತ್ತ. ಜೀವನ್ದಾಗ ಹಿಂಗ ನಿನ್ನ ನೋಡಲ್ಲದ, ಭೇಟಿಯಾಗಲ್ದ ಇಷ್ಟ ದಿನಾ ಕಳೀತಿನಿ ಅಂತ ಅಂದುಕೊಂಡಿರಲಿಲ್ಲ. ಎಂಥ ಬ್ಯಾಸರಪ್ಪ… ಹೇಳ್ಳೋದ ಬ್ಯಾಡ ಬಿಡ್. ನನಗ ನಿರಾಶೆ ಮಾಡಲ್ಲದನ ಬಂದುಬಿಡಬೇಕ. ನಿನ್ನ ಆಫೀಸದಾಗ ಮೊದಲ ರಜಾ ಬೇಕಂತ ಹೇಳಿಡ. ರಜಾ ಇಲ್ಲ ಅಂದ್ರ ನೋಡ. ಎಳ್ಳು ಬೆಲ್ಲ ನಮ್ಮಿಬ್ಬರ ಜೀವನ ಅಷ್ಟ ಅಲ್ದ
ಎಲ್ಲರ ಜೀವನದಾಗೂ ಸಿಹಿ ಹಂಚಿಲಿ ಅನ್ನೋದ ನನ್ನ ಆಶಾ ಅದ. ಸಿಹಿಯನ್ನ ಎಲ್ಲಾಗೂì ಹಂಚೋನಲೇ. ತಪಸ್ಸಲ್ಲದ ಮನಿಗೆ ಬಾ..
– ಪೂವು