Advertisement
ಅಯ್ಯೋ, ನಮ್ಮ ಸ್ಪಾಫ್ಗೆ ಟೈಂ ಸೆನ್ಸ್ ಅನ್ನುವುದೇ ಇಲ್ಲಾರೀ. ಹೇಳಿದ ಟೈಂಗೆ ಸರಿಯಾಗಿ ಕೆಲಸ ಮುಗಿಸೋದಿಲ್ಲ. ಸಂಜೆ 6 ಗಂಟೆಗೆ ಕೆಲಸ ಮುಗಿಸಿಬಿಸಿ ಬಿಡಿ ಅಂದರೆ, ರಾತ್ರಿ ಒಂಭತ್ತೂವರೆಗೆ ಮುಗಿಸ್ತಾರೆ. ಅದಕ್ಕೆ ಏನೇನೋ ಕಾರಣ ಹೇಳ್ತಾರೆ. ಈ ಥರ ಲೇಟ್ ವರ್ಕ್‌ನಿಂದಾಗಿ, ಅಂದುಕೊಂಡ ಸಮಯಕ್ಕೆ ಟಾರ್ಗೆಟ್ ರೀಚ್ ಆಗಲು ಆಗ್ತಾ ಇಲ್ಲ. ಸೋ, ವಿಪರೀತ ಲಾಸ್ ಆಗ್ತಾ ಇದೆ…’ ಒಂದು ಸಂಸ್ಥೆ ಅಥವಾ ಫ್ಯಾಕ್ಟರಿಯ ಮಾಲೀಕ, ತನ್ನ ಜೊತೆಗಿದ್ದವರೊಂದಿಗೆ ಅಸಮಾಧಾನದಿಂದಲೇ ಹೀಗೆ ಹೇಳುತ್ತಾನೆ…
Related Articles
Advertisement
ಜಗಳಗಳೂ ಒಗಿ ಬಿಡುತ್ತವೆ. ಒಪ್ಪಿಕೊಂಡ ಕೆಲಸವನ್ನು ಸಮಯಕ್ಕೆ ಸರಿಯಾಗಿ ಮಾಡಲು ಆಗಲಿಲ್ಲ ಎಂಬ ಕಾರಣಕ್ಕೆ ಎಷ್ಟೋ ಜನ ಡಿಪ್ರಶನ್‌ಗೆ ಜಾರುವುದೂ ಉಂಟು. ತಡವಾಗಿ ಕೆಲಸ ಮುಗಿಸುತ್ತಾರೆ ಎಂಬ ಕಾರಣಕ್ಕೆ ಅದೆಷ್ಟೋ ಪ್ರಾಜೆಕ್ಟ್ಗಳು ಹಲವರ ಕೈತಪ್ಪಿದ್ದೂ ಉಂಟು. ನಿಗದಿತ ಸಮಯಕ್ಕೆ ಸರಿಯಾಗಿ ಇಂಟರ್‌ವ್ಯೂಗೆ ಹೋಗದೆ ಕೆಲಸ ಕಳೆದುಕೊಂಡವರು ಎಷ್ಟು ಜನ ಬೇಕು? ಹಾಗೆಯೇ, 10 ಗಂಟೆಗೇ ಪರೀಕ್ಷೆ ಎಂದು ಗೊತ್ತಿದ್ದರೂ, + ಹತ್ತೂವರೆಯ ವೇಳೆಗೆ ಎಕ್ಸಾಂ ಹಾಲ್‌ನ ಬಾಗಿಲಲ್ಲಿ ನಿಂತು, ಏದುಸಿರು ಬಿಡುತ್ತಾ… ಸರ್, ಸರ್ ಸರ್ ಲೇಟಾಗಿಬಿಡು¤. ಇದೊಂದ್ಸಲ ಎಂಟ್ರಿ ಕೊಡಿ ಪ್ಲೀಸ್ ಅನ್ನುವವರ ಉದಾಹರಣೆಗಳು ಎಷ್ಟಿಲ್ಲ ಹೇಳಿ…
ಉದ್ದೇಶಪೂರ್ವಕ ಅಲ್ಲಒಪ್ಪಿಕೊಂಡ ಕೆಲಸವನ್ನು ತಡವಾಗಿ ಮುಗಿಸುವ ಗುಣ ಕೆಲವರಿಗೆ ಇರಬಹುದು. ಆದರೆ, ಎಲ್ಲರೂ ಹಾಗಿರೋದಿಲ್ಲ. ಒಬ್ಬ ವ್ಯಕ್ತಿಗೆ ಒಂದು ಕೆಲಸ ವಹಿಸಿದಾಗ ಆ ವ್ಯಕ್ತಿಯ ಪರಿಶ್ರಮ, ಆಸಕ್ತಿ ಮತ್ತು ನೈಪುಣ್ಯ- ಇದಿಷ್ಟೂ ಗೊತ್ತಾಗಿಬಿಡುತ್ತದೆ. ಹಾಗಾಗಿ, ಕೆಲಸ ಕೊಟ್ಟವರ ಮುಂದೆ ಖೀsಛಿ lಛಿss ಅನ್ನಿಸಿಕೊಳ್ಳಲು ಯಾರೂ ಇಷ್ಟಪಡುವುದಿಲ್ಲ. ಬೇಗ ಕೆಲಸ ಮುಗಿಸಿ, ಮೇಲಧಿಕಾರಿಯ ಮೆಚ್ಚುಗೆ ಪಡೆಯಬೇಕು ಎಂಬುದೇ ಎಲ್ಲರ ಆಸೆಯಾಗಿರುತ್ತದೆ. ಆದರೆ, ಅನಿರೀಕ್ಷಿತವಾಗಿ ಏನೋ ಎಡವಟ್ಟು ಜೊತೆಯಾಗಿ, ಎಲ್ಲಾ ಅಂದಾಜುಗಳೂ ಉಲ್ಟಾ ಆಗಿಬಿಡುತ್ತವೆ ! ಹಾಗೆಯೇ, ಸಂದರ್ಶನಕ್ಕೆ ತಡವಾಗಿ ಹೋಗುವ, ಪರೀಕ್ಷೆ ಶುರುವಾಗಿ ಅರ್ಧಗಂಟೆ ಕಳೆದು ಮೇಲೆ ಎಕ್ಸಾಂ ಹಾಲ್ ತಲುಪುವ; ಅತಿಥಿಗಳನ್ನು, ಬಂಧುಗಳನ್ನು ಕಾಯಿಸುವ ಉದ್ದೇಶ ಯಾರಿಗೂ ಇರುವುದಿಲ್ಲ. ಒಪ್ಪಿಕೊಂಡ ಕೆಲಸ ಮುಗಿಸಲು ಒಂದೆರಡು ದಿನ ಸಾಕೆಂದು; ಸಂದರ್ಶನ/ಪರೀಕ್ಷೆಯ ಹಾಲ್ ಬಂಧುಗಳಿರುವ ಹೋಟೆಲ್, ಪಾರ್ಕ್ ತಲುಪಲು ಒಂದೆರಡು ಗಂಟೆಯಷ್ಟೇ ಸಾಕೆಂದು ಲೆಕ್ಕ ಹಾಕಿರುತ್ತಾರೆ. ಆದರೆ, ಅಲ್ಲಿಯೂ ಏನೋ ಅವಘಡವಾಗಿ, ಅಂದಾಜು ಮಾಡುವುದಕ್ಕಿಂತ ಐದಾರು ಗಂಟೆಗಳ ಹೆಚ್ಚುವರಿ ಸಮಯ ಬೇಕಾಗುತ್ತದೆ. ಪರಿಣಾಮ -” ಟೈಂ ಸೆನ್ಸೇ ಇಲ್ಲ ಕಣ್ರೀ ನಿಮಗೆ’ ಎಂಬ ಟೀಕೆಗೆ ಗುರಿಯಾಗಬೇಕಾಗುತ್ತದೆ. ಬ್ಯಾಲೆನ್ಸ್ ಮಾಡುವುದು ಹೇಗೆ?
ಹಾಗಾದರೆ, ಹೇಳಿದ ಸಮಯಕ್ಕೆ ಸರಿಯಾಗಿ ಕೆಲಸ ಮುಗಿಸಲು ಸಾಧ್ಯವಿಲ್ಲವಾ? ಅಂದುಕೊಂಡ ಸಮಯಕ್ಕೆ ಸರಿಯಾಗಿ, ಸ್ಥಳ ತಲುಪಲು ಸಾಧ್ಯವಿಲ್ಲವಾ?- ಖಂಡಿತ ಸಾಧ್ಯವಿದೆ. ಅದಕ್ಕೆ ಏನು ಮಾಡಬೇಕು ಗೊತ್ತೆ? ಒಂದು ಕೆಲಸ ಮುಗಿಸಲು ಎರಡು ದಿನ ಬೇಕಾಗುತ್ತೆ ಅಂದುಕೊಳ್ಳಿ. ಆಗ, ಮೂರು ದಿನದೊಳಗೆ ಮುಗಿಸಿಕೊಡ್ತೇನೆ ಎಂದೇ ಹೇಳಬೇಕು. ಹೀಗಾದಾಗ, ದಿಢೀರನೆ ತಲೆನೋವು ಬಂದರೆ, ಕರೆಂಟ್ ಕೈಕೊಟ್ಟರೆ, ಅತಿ ಮುಖ್ಯ ಅತಿಥಿಗಳು ಮನೆಗೆ ಬಂದರೆ… ಹೆಚ್ಚುವರಿಯಾಗಿ ಪಡೆದ ಸಮಯದಲ್ಲಿ ಎಲ್ಲವನ್ನೂ ಬ್ಯಾಲೆನ್ಸ್ ಮಾಡಿ, ಒಪ್ಪಿದ ಸಮಯಕ್ಕೆ ಸರಿಯಾಗಿ ಕೆಲಸ ಮುಗಿಸಬಹುದು. ಸಂದರ್ಶನದ/ಪರೀಕ್ಷೆ ನಡೆವ/ರೈಲು-ಬಸ್ ನಿಲ್ದಾಣ ತಲುಪಲೂ ಇದೇ ಸೂತ್ರ ಅನುಸರಿಸಬೇಕು. ಯಾವುದೇ ಸ್ಥಳ ತಲುಪಲು ಎರಡು ಗಂಟೆ ಬೇಕಾಗುತ್ತದೆ ಅಂದರೆ, ಒಂದೂವರೆ ಗಂಟೆ ಮೊದಲೇ ಪ್ರಯಾಣ ಆರಂಭಿಸಬೇಕು. ಆಗ ಬೈಕ್ ಪಂಚರ್/ಟ್ರಾಫಿಕ್/ಬಸ್ ಸಿಗದೇ ಇರುವುದು -ಮುಂತಾದ ಸಮಸ್ಯೆಗಳಿಗೆ ಸಿಕ್ಕಿಕೊಂಡರೂ, ಅದರಿಂದ ಪಾರಾಗಿ ನಿಗದಿತ ವೇಳೆಗೆ ಸ್ಥಳ ತಲುಪಬಹುದು. ಇನ್ನು, ಕೆಲಸ ಕೊಡುವವರ ವಿಷಯಕ್ಕೆ ಬಂದರೆ ಒಂದು ದಿನ ಮೊದಲೇ ಕೆಲಸ ಮುಗಿಸಲು ಹೇಳಬೇಕು. ( ಅಂದರೆ, ಮೂರು ದಿನದಲ್ಲಿ ಕೆಲಸ ಮುಗಿಸಬೇಕೆಂಬ ಉದ್ದೇಶ ನಿಮಗಿದ್ದರೆ, ಎರಡೇ ದಿನದಲ್ಲಿ ಈ ಕೆಲಸ ಮುಗಿಸಿ ಎಂದೇ ಹೇಳಬೇಕು) ಆಗ ಯಾವುದಾದರೂ ಅನಿರೀಕ್ಷಿತ ತೊಂದರೆ ಎದುರಾದರೂ, ಒಂದು ದಿನ ತಡವಾಗಿಯಾದಾರೂ ( ಅಂದರೆ, ನೀವು ಪ್ಲಾನ್ ಮಾಡಿದ್ದ ಸಮಯಕ್ಕೆ ಸರಿಯಾಗಿ) ಕೆಲಸ ಮುಗಿಯುತ್ತದೆ. ಹೀಗೆ ಲೆಕ್ಕಾಚಾರದೊಂದಿಗೆ ಕೆಲಸ ಮಾಡಿಬಿಟ್ಟರೆ, Time is money ಎಂಬ ಮಾತು ಸಾರ್ವಕಾಲಿಕ ಸತ್ಯವಾಗುತ್ತದೆ. – ಎ.ಆರ್. ಮಣಿಕಾಂತ್