Advertisement
ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ 5 ವಿಕೆಟಿಗೆ 187 ರನ್ನುಗಳ ದೊಡ್ಡ ಮೊತ್ತವನ್ನೇ ಪೇರಿಸಿತ್ತು. ರಾಜಸ್ಥಾನ್ 19.3 ಓವರ್‌ಗಳಲ್ಲಿ 6 ವಿಕೆಟಿಗೆ 188 ರನ್ ಬಾರಿಸಿ ವಿಜಯೋತ್ಸವ ಆಚರಿಸಿತು. ಇದು ರಹಾನೆ ಪಡೆಗೆ 7 ಪಂದ್ಯಗಳಲ್ಲಿ ಒಲಿದ 2ನೇ ಗೆಲುವು. ಮುಂಬೈ 7 ಪಂದ್ಯಗಳಲ್ಲಿ ಅನುಭವಿಸಿದ 3ನೇ ಸೋಲು.
ರಾಜಸ್ಥಾನ್ ಗೆಲುವಿನ ರೂವಾರಿಯಾಗಿ ಮೂಡಿಬಂದವರು ಇಂಗ್ಲೆಂಡಿನ ಬಿಗ್ ಹಿಟ್ಟರ್ ಜಾಸ್ ಬಟ್ಲರ್. ಆರಂಭದಿಂದಲೇ ಮುಂಬೈ ಬೌಲಿಂಗ್ ಮೇಲೆರಗಿ ಹೋದ ಬಟ್ಲರ್ ಅತ್ಯಂತ ಆಕ್ರಮಣಕಾರಿಯಾಗಿ ಗೋಚರಿಸಿದರು. ಅವರಿಗೆ ನಾಯಕ ಅಜಿಂಕ್ಯ ರಹಾನೆ ಅತ್ಯುತ್ತಮ ಬೆಂಬಲವಿತ್ತರು. ಪವರ್ ಪ್ಲೇ ವೇಳೆ ರನ್ನಿನ ಸುರಿಮಳೆಯೇ ಆಯಿತು. ಮೊದಲ ವಿಕೆಟಿಗೆ 6.2 ಓವರ್‌ಗಳಿಂದ 60 ರನ್ ಹರಿದು ಬಂತು. ಆಗ 37 ರನ್ ಮಾಡಿದ ರಹಾನೆ ವಿಕೆಟ್ ಬಿತ್ತು. ಬಟ್ಲರ್ ಬಡಬಡನೆ ಬಡಿಯುತ್ತ ಹೋದರು. ಮೊದಲ ಪಂದ್ಯದಲ್ಲೇ ಐಪಿಎಲ್ ದಾಖಲೆ ಸ್ಥಾಪಿಸಿದ ಅಲ್ಜಾರಿ ಜೋಸೆಫ್ ಅವರಂತೂ ಬಟ್ಲರ್ ಹೊಡೆತಗಳಿಗೆ ತತ್ತರಿಸಿ ಮಂಕಾಗಿ ಹೋದರು. ಅವರ ಒಂದೇ ಓವರಿನಲ್ಲಿ ಬಟ್ಲರ್ 2 ಸಿಕ್ಸರ್, 4 ಬೌಂಡರಿ ಸೇರಿದಂತೆ 28 ರನ್ ದೋಚಿದರು. 14ನೇ ಓವರ್ ತನಕ ಕ್ರೀಸ್ ಆಕ್ರಮಿಸಿಕೊಂಡ ಬಟ್ಲರ್ ಗಳಿಕೆ 43 ಎಸೆತಗಳಿಂದ 89 ರನ್. ಸಿಡಿಸಿದ್ದು 7 ಸಿಕ್ಸರ್, 8 ಬೌಂಡರಿ. ರಹಾನೆ ಬಳಿಕ ಅವರಿಗೆ ಸಂಜು ಸ್ಯಾಮ್ಸನ್ ಉತ್ತಮ ಬೆಂಬಲ ನೀಡಿದರು. ಸ್ಯಾಮ್ಸನ್ ಗಳಿಕೆ 26 ಎಸೆತಗಳಿಂದ 31 ರನ್ (2 ಬೌಂಡರಿ, 1 ಸಿಕ್ಸರ್).
Related Articles
Advertisement
ಡಿ ಕಾಕ್ ಬ್ಯಾಟಿಂಗ್ ಅಬ್ಬರಮುಂಬೈ ಇಂಡಿಯನ್ಸ್‌ನ ಸವಾಲಿನ ಮೊತ್ತಕ್ಕೆ ಕಾರಣವಾದದ್ದು ಕ್ವಿಂಟನ್ ಡಿ ಕಾಕ್ ಅವರ ಅಬ್ಬರದ ಬ್ಯಾಟಿಂಗ್. ನಾಯಕ ರೋಹಿತ್ ಶರ್ಮ ಜತೆಗೂಡಿದ ಅವರು ಮೊದಲ ವಿಕೆಟಿಗೆ 10.5 ಓವರ್‌ಗಳಿಂದ 96 ರನ್ ರಾಶಿ ಹಾಕಿದರು. ರೋಹಿತ್ 32 ಎಸೆತಗಳಿಂದ 47 ರನ್ ಹೊಡೆದರು (6 ಬೌಂಡರಿ, 1 ಸಿಕ್ಸರ್). 19ನೇ ಓವರ್ ತನಕ ಬ್ಯಾಟಿಂಗ್ ವಿಸ್ತರಿಸಿದ ಡಿ ಕಾಕ್ ಗಳಿಕೆ 81 ರನ್ (6 ಬೌಂಡರಿ, 4 ಸಿಕ್ಸರ್). ಮುಂಬೈ: 200 ಟಿ20 ದಾಖಲೆ
ಇತ್ತೀಚೆಗಷ್ಟೇ ಐಪಿಎಲ್‌ನಲ್ಲಿ 100 ಗೆಲುವು ದಾಖಲಿಸಿ ಸುದ್ದಿಯಾದ ಮುಂಬೈ ಇಂಡಿಯನ್ಸ್ ಮತ್ತೂಂದು ಮೈಲುಗಲ್ಲು ನೆಟ್ಟಿದೆ. ಅದು 200 ಟಿ20 ಪಂದ್ಯವಾಡಿದ ವಿಶ್ವದ ಮೊದಲ ತಂಡವಾಗಿ ಮೂಡಿಬಂದಿದೆ. ಶನಿವಾರ ರಾಜಸ್ಥಾನ್ ಎದುರಿನ ಪಂದ್ಯದ ವೇಳೆ ಮುಂಬೈ ಈ ದಾಖಲೆ ನಿರ್ಮಿಸಿತು. ಈ 200 ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ 178 ಪಂದ್ಯಗಳನ್ನು ಐಪಿಎಲ್‌ನಲ್ಲಿ ಆಡಿದೆ. ಉಳಿದ 22 ಪಂದ್ಯಗಳನ್ನು ಚಾಂಪಿಯನ್ಸ್ ಲೀಗ್‌ನಲ್ಲಿ ಆಡಿದೆ. 113 ಪಂದ್ಯಗಳನ್ನು ಜಯಿಸಿದ್ದು, 85ರಲ್ಲಿ ಸೋಲನುಭವಿಸಿದೆ. 2 ಪಂದ್ಯಗಳು ಫಲಿತಾಂಶ ಕಂಡಿಲ್ಲ. 199 ಟಿ20 ಪಂದ್ಯಗಳನ್ನಾಡಿರುವ ಸಾಮರ್‌ಸೆಟ್ ಕೌಂಟಿ ತಂಡ ಮುಂಬೈ ಹಿಂದೆಯೇ ಇದೆ. ಹ್ಯಾಂಪಶೈರ್ ಕೌಂಟಿಗೆ 3ನೇ ಸ್ಥಾನ (194). ಐಪಿಎಲ್‌ನಲ್ಲಿ ದ್ವಿತೀಯ ಸ್ಥಾನದಲ್ಲಿರುವ ತಂಡವೆಂದರೆ ಆರ್‌ಸಿಬಿ (189). ಕೆಕೆಆರ್‌ಗೆ 3ನೇ ಸ್ಥಾನ (187). ಸ್ಕೋರ್‌ಪಟ್ಟಿ
ಮುಂಬೈ ಇಂಡಿಯನ್ಸ್
ರೋಹಿತ್ ಶರ್ಮ ಸಿ ಬಟ್ಲರ್ ಬಿ ಆರ್ಚರ್ 47
ಕ್ವಿಂಟನ್ ಡಿ ಕಾಕ್ ಸಿ ಬಟ್ಲರ್ ಬಿ ಆರ್ಚರ್ 81
ಸೂರ್ಯಕುಮಾರ್ ಯಾದವ್ ಬಿ ಕುಲಕರ್ಣಿ 16
ಕೈರನ್ ಪೊಲಾರ್ಡ್ ಸಿ ಗೋಪಾಲ್ ಬಿ ಆರ್ಚರ್ 6
ಹಾರ್ದಿಕ್ ಪಾಂಡ್ಯ ಔಟಾಗದೆ 28
ಇಶಾನ್ ಕಿಶನ್ ಸಿ ಬಟ್ಲರ್ ಬಿ ಉನಾದ್ಕತ್ 5
ಕೃಣಾಲ್ ಪಾಂಡ್ಯ ಔಟಾಗದೆ 0
ಇತರ 4
ಒಟ್ಟು (5 ವಿಕೆಟಿಗೆ) 187
ವಿಕೆಟ್ ಪತನ: 1-96, 2-117, 3-136, 4-163, 5-175.
ಬೌಲಿಂಗ್: ಕೃಷ್ಣಪ್ಪ ಗೌತಮ್ 3-0-39-0
ಧವಳ್ ಕುಲಕರ್ಣಿ 4-0-38-1
ಜೋಫ ಆರ್ಚರ್ 4-0-39-3
ಜೈದೇವ್ ಉನಾದ್ಕತ್ 4-0-36-1
ಶ್ರೇಯಸ್ ಗೋಪಾಲ್ 4-0-21-0
ಲಿಯಮ್ ಲಿವಿಂಗ್‌ಸ್ಟೋನ್ 1-0-13-0 ರಾಜಸ್ಥಾನ್ ರಾಯಲ್ಸ್
ಅಜಿಂಕ್ಯ ರಹಾನೆ ಸಿ ಯಾದವ್ ಬಿ ಕೃಣಾಲ್ 37
ಜಾಸ್ ಬಟ್ಲರ್ ಸಿ ಯಾದವ್ ಬಿ ಚಹರ್ 89
ಸಂಜು ಸ್ಯಾಮ್ಸನ್ ಎಲ್‌ಬಿಡಬ್ಲ್ಯು ಬುಮ್ರಾ 31
ಸ್ಟೀವನ್ ಸ್ಮಿತ್ ಸಿ ಕಿಶನ್ ಬಿ ಬುಮ್ರಾ 12
ರಾಹುಲ್ ತ್ರಿಪಾಠಿ ಸಿ ಹಾರ್ದಿಕ್ ಬಿ ಬಿ ಕೃಣಾಲ್ 1
ಲಿಯಮ್ ಲಿವಿಂಗ್‌ಸ್ಟೋನ್ ಬಿ ಕೃಣಾಲ್ 1
ಶ್ರೇಯಸ್ ಗೋಪಾಲ್ ಔಟಾಗದೆ 13
ಕೆ. ಗೌತಮ್ ಔಟಾಗದೆ 0
ಇತರ 4
ಒಟ್ಟು (19.3 ಓವರ್‌ಗಳಲ್ಲಿ 6 ವಿಕೆಟಿಗೆ) 188
ವಿಕೆಟ್ ಪತನ: 1-60, 2-147, 3-170, 4-171, 5-174, 6-174.
ಬೌಲಿಂಗ್:
ಜಾಸನ್ ಬೆಹೆಡಾಫ್ì 3-0-31-0
ಅಲ್ಜಾರಿ ಜೋಸೆಫ್ 3-0-53-0
ರಾಹುಲ್ ಚಹರ್ 4-0-34-1
ಜಸ್‌ಪ್ರೀತ್ ಬುಮ್ರಾ 4-0-23-2
ಕೃಣಾಲ್ ಪಾಂಡ್ಯ 4-0-34-3
ಹಾರ್ದಿಕ್ ಪಾಂಡ್ಯ 1.3-0-11-0