Advertisement

ಬೆಂಗಳೂರಿನಲ್ಲಿ ‘ಜಾಲಿವುಡ್‌ ಸ್ಟುಡಿಯೋ’

03:10 PM Aug 26, 2023 | Team Udayavani |

ಬೆಂಗಳೂರಿನಲ್ಲಿ ಜಾಲಿವುಡ್‌ ಆರಂಭವಾಗಿದೆ. ಇತ್ತೀಚೆಗೆ ಈ ಸ್ಟುಡಿಯೋ ಉದ್ಘಾಟನೆಯನ್ನು ನಟ ಶಿವರಾಜ್‌ಕುಮಾರ್‌ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಮಾಡಿದರು.

Advertisement

ವೇಲ್ಸ್ ಗ್ರೂಪ್‌ನ ಸಂಸ್ಥಾಪಕರಾದ ಐಶರಿ ಕೆ ಗಣೇಶ್‌ ಅವರ ಸಾರಥ್ಯದಲ್ಲಿ “ಜಾಲಿವುಡ್‌’ ಆರಂಭವಾಗಿದ್ದು, ಈ ಹಿಂದಿನ ಇನ್ನೋವೇಟಿವ್‌ ಫಿಲಂ ಸಿಟಿಗೆ ಹೊಸ ರೂಪ ಸಿಕ್ಕಿದೆ. ಆ.27ರಿಂದ ಈ ಜಾಲಿವುಡ್‌ ಅಧಿಕೃತವಾಗಿ ಪ್ರಾರಂಭವಾಗಲಿದೆ.

ಉದ್ಘಾಟನೆ ಬಳಿಕ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್‌, “ಜಾಲಿವುಡ್‌ ಚೆನ್ನಾಗಿದೆ. ಒಳ್ಳೆಯ ದಾಗಲಿ. ಇಡೀ ಬೆಂಗ ಳೂರಿನವರು ಹಾಗೂ ಬೇರೆ ಊರಿನವರು ಬಂದು ಇದನ್ನು ವೀಕ್ಷಿಸಲಿ’ ಎಂದರು.

ನಟ ಶಿವರಾಜ್‌ಕುಮಾರ್‌ ಮಾತನಾಡಿ, “ಸ್ಯಾಂಡಲ್‌ ವುಡ್‌, ಕಾಲಿವುಡ್‌, ಬಾಲಿವುಡ್‌ ಹೀಗೆ ಎಲ್ಲಾ ಒಂದು ಕಡೆ ಸೇರುವ ಸ್ಥಳ ಜಾಲಿವುಡ್‌ ಆಗಲಿ. ಈ ಹಿಂದೆ ಇಲ್ಲಿ ಸಾಕಷ್ಟು ಚಿತ್ರಗಳ ಚಿತ್ರೀಕರಣದಲ್ಲಿ ಭಾಗಿಯಾಗಿದ್ದೇನೆ. ಇಲ್ಲಿಗೆ ಬಂದಾಗ ಹಳೆಯ ದಿನಗಳು ನೆನಪಾದವು’ ಎನ್ನುತ್ತಾ ಶುಭಕೋರಿದರು.

Advertisement

Udayavani is now on Telegram. Click here to join our channel and stay updated with the latest news.

Next