Advertisement

ಜಾಲಿ ರೈಡ್‌: ಬೈಕ್‌ಗೆ ಢಿಕ್ಕಿ; ಗಾಯ

12:11 PM Jan 22, 2018 | Team Udayavani |

ಪಡುಬಿದ್ರಿ: ರಜಾದಿನದ ಮಜಾಕ್ಕಾಗಿ ಪ್ರತಿ ರವಿವಾರ ಬೆಳಗ್ಗೆ  ಸುಮಾರು 10ರಿಂದ 15 ಮಂದಿ ಯುವಕರು ದುಬಾರಿ ಬೈಕ್‌ನಲ್ಲಿ
(35 ಲಕ್ಷ ರೂ.  ಬೆಲೆಯ ಬಿಎಂಡಬ್ಲ್ಯೂ ಬೈಕ್‌ ಸಹಿತ) ತಾಸಿಗೆ ಸುಮಾರು 200 ಕಿ.ಮೀ. ವೇಗದಲ್ಲಿ ಸವಾರಿ ನಡೆಸುತ್ತಿದ್ದಾಗ ಮತ್ತೂಂದು ಬೈಕ್‌ಗೆ ಢಿಕ್ಕಿ ಹೊಡೆದ ಘಟನೆ  ಜ. 21ರಂದು ಉಚ್ಚಿಲದಲ್ಲಿ  ನಡೆದಿದೆ. 

Advertisement

ಉಚ್ಚಿಲ ಮಹಾಲಕ್ಷ್ಮೀ ಸಭಾ ಭವನದ ಎದುರು ಬೈಕಿನಲ್ಲಿ ಸಾಗುತ್ತಿದ್ದ ಅದಮಾರಿನ ನಾಗರಾಜ  ಅವರ ಬೈಕಿಗೆ ಹಿಂದಿನಿಂದ ಬಂದ ಬಿಎಂಡಬ್ಲ್ಯು ಬೈಕ್‌ ಸವಾರ ರಿಜ್ವಾನ್‌ ಢಿಕ್ಕಿ ಹೊಡೆದ ಪರಿಣಾಮ  ನಾಗರಾಜ್‌  ಡಿವೈಡರ್‌ಗೆ ಎಸೆಯಲ್ಪಟ್ಟು ಗಾಯಗೊಂಡರು. ಅವರಿಗೆ ಕಾಪುವಿನ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಉಡುಪಿ ಖಾಸಗಿ ಆಸ್ಪತ್ರೆಗೆ ಒಯ್ಯಲಾಗಿದೆ. ಸ್ಥಳಕ್ಕೆ ಪಡುಬಿದ್ರಿ ಪೊಲೀಸರು ಭೇಟಿ ನೀಡಿದ್ದು, ಪ್ರಕರಣವನ್ನು ರಾಜಿಯಲ್ಲಿ ಇತ್ಯರ್ಥಗೊಳಿಸಲಾಗಿದೆ.

 ಬೈಕ್‌ ಸಾಗಿಸಲು ಯತ್ನ
ಅಪಘಾತ ಸಂಭವಿಸಿದ ಕೂಡಲೇ, ಪೊಲೀಸರಿಗೂ ಮಾಹಿತಿ ನೀಡದೆ ಟೆಸ್ಟ್‌ ರೈಡ್‌ಗೆಂದು ನೀಡಲಾಗಿದ್ದ ಬಿಎಂಡಬ್ಲ್ಯೂ ಬೈಕನ್ನು ಸಾಗಿಸಲು ಕಂಪೆನಿಯವರು ಪ್ರಯತ್ನಿಸಿದ್ದು, ಅದಕ್ಕೆ ಪೊಲೀಸರು ತಡೆಯೊಡ್ಡಿದರು. 

Advertisement

Udayavani is now on Telegram. Click here to join our channel and stay updated with the latest news.

Next