Advertisement

ಜೊಕೋಗೆ 5ನೇ ದುಬಾೖ ಓಪನ್‌ ಪ್ರಶಸ್ತಿ

10:07 AM Mar 02, 2020 | sudhir |

ದುಬಾೖ: ಸರ್ಬಿಯಾದ ನೊವಾಕ್‌ ಜೊಕೋವಿಕ್‌ 5ನೇ “ದುಬಾೖ ಓಪನ್‌ ಟೆನಿಸ್‌’ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಶನಿವಾರ ರಾತ್ರಿ ನಡೆದ ಪ್ರಶಸ್ತಿ ಕಾಳಗದಲ್ಲಿ ಅವರು ಗ್ರೀಕ್‌ನ ಅಪಾಯಕಾರಿ ಆಟಗಾರ ಸ್ಟೆಫ‌ನಸ್‌ ಸಿಸಿಪಸ್‌ ವಿರುದ್ಧ 6-3, 6-4 ಅಂತರದ ಗೆಲುವು ಸಾಧಿಸಿದರು.

Advertisement

ಆಸ್ಟ್ರೇಲಿಯನ್‌ ಓಪನ್‌ ಚಾಂಪಿಯನ್‌ ಆಗಿರುವ ಜೊಕೋವಿಕ್‌ ಪ್ರಸಕ್ತ ಋತುವಿನಲ್ಲಿ ಆಡಿದ ಎಲ್ಲ 21 ಪಂದ್ಯಗಳನ್ನು ಗೆದ್ದಂತಾಯಿತು. ಅವರು ಸತತ 20 ಪ್ಲಸ್‌ ಪಂದ್ಯ ಗೆದ್ದ 7ನೇ ನಿದರ್ಶನ ಇದಾಗಿದೆ. ಹಾಗೆಯೇ ಸಿಸಿಪಸ್‌ ವಿರುದ್ಧ ಸತತ 8ನೇ ಗೆಲುವು ಸಾಧಿಸಿದರು. ಈ ಪರಾಕ್ರಮದೊಂದಿಗೆ ಜೊಕೋವಿಕ್‌ ತಮ್ಮ ನಂಬರ್‌ ವನ್‌ ಪಟ್ಟವನ್ನು ಇನ್ನಷ್ಟು ಗಟ್ಟಿಗೊಳಿಸಿದರು.

ಇನ್ನೊಂದೆಡೆ ಸಿಸಿಪಸ್‌ಗೆ ದುಬಾೖ ಓಪನ್‌ ಫೈನಲ್‌ನಲ್ಲಿ ಎದುರಾದ ಸತತ 2ನೇ ಸೋಲು ಇದಾಗಿದೆ. ಕಳೆದ ವರ್ಷ ಅವರು ರೋಜರ್‌ ಫೆಡರರ್‌ಗೆ ಶರಣಾಗಿದ್ದರು.

ಈ ಗೆಲುವಿನ ಸಾಧನೆಗಾಗಿ ನೊವಾಕ್‌ ಜೊಕೋವಿಕ್‌ ಅವರಿಗೆ ದುಬಾೖ ಸರಕಾರ “ಗೋಲ್ಡನ್‌ ವೀಸಾ’ ನೀಡಿದೆ. ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಮುಂದಿನ ವರ್ಷ ಇಲ್ಲಿಗೆ ಆಗಮಿಸುವುದಾಗಿ ಜೊಕೋ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next