80-90ರದ ದಶಕದಲ್ಲಿ ಬೆಂಗಳೂರಿನ ಭೂಗತಲೋಕದಲ್ಲಿ ಸದ್ದು ಮಾಡಿದ್ದ ಜಯರಾಜ್ ಕುರಿತಾಗಿ ಈಗಾಗಲೇ ಸಿನಿಮಾ ಬರುತ್ತಿದೆ.
ಧನಂಜಯ್ ನಾಯಕರಾಗಿರುವ “ಹೆಡ್ ಬುಷ್’ ಸಿನಿಮಾ ಅನೌನ್ಸ್ ಕೂಡಾ ಆಗಿದೆ.
ಈಗ ಜಯರಾಜ್ ಕುರಿತಾಗಿ ಮತ್ತೂಂದು ಸಿನಿಮಾ ಬರುತ್ತಿದೆ. ಅದು “ಜಾಂಟಿ ಸನ್ ಆಪ್ ಜಯರಾಜ್’. ಇತ್ತೀಚೆಗೆ ಈ ಚಿತ್ರಕ್ಕೆ ಮುಹೂರ್ತ ನಡೆದಿದೆ. ವಸತಿ ಸಚಿವ ಸೋಮಣ್ಣ ಕ್ಯಾಮರ ಆನ್ ಮಾಡಿದರೆ,ಕೃಷಿಸಚಿವರಾದ ಬಿ.ಸಿ.ಪಾಟೀಲ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ಶುಭ ಹಾರೈಸಿದರು.
ಈ ಚಿತ್ರದಲ್ಲಿ ಜಯರಾಜ್ ಪುತ್ರ ಅಜಿತ್ ಜಯರಾಜ್ ನಾಯಕರಾಗಿ ಅಭಿನಯಿಸುತ್ತಿದ್ದಾರೆ. ಹಾಗಂತ ಅವರಿಲ್ಲಿ ಜಯರಾಜ್ ಪಾತ್ರ ಮಾಡುತ್ತಿಲ್ಲ. ಈ ಹಿಂದೆ ಟೈಟಲ್ ಬೇಕಾ,ಹಫ್ತಾ ಸಿನಿಮಾ ನಿರ್ದೇಶನ ಮಾಡಿರುವ ಆನಂದ್‌ರಾಜ್ “ಜಾಂಟಿ’ಯ ನಿರ್ದೇಶಕರು. ಈ ಚಿತ್ರದಲ್ಲಿ ಯರಾಜ್ ಸಾಯುವ ಮುನ್ನ ನಡೆದಘಟನೆಗಳು ಹಾಗೂ ಸತ್ತ ಮೇಲೆ ನಡೆದ ಘಟನೆಗಳನ್ನು ಇಟ್ಟುಕೊಂಡುಸಿನಿಮಾ ಮಾಡುತ್ತಿದ್ದಾರೆ.
ಈ ಚಿತ್ರ ಎರಡು ಭಾಗಗಳಲ್ಲಿ ಈ ಚಿತ್ರವನ್ನು ತರುವ ಯೋಚನೆ ಚಿತ್ರತಂಡಕ್ಕಿದೆ. ಚಿತ್ರದಲ್ಲಿ ಅಜಿತ್‌ಸಾಮಾನ್ಯ ಹುಡುಗನಾಗಿ ಕಷ್ಟಪಟ್ಟು ಒಂದು ಹಂತಕ್ಕೆ ಹೇಗೆ ಬರುತ್ತಾನೆ ಎನ್ನುವ ಪಾತ್ರದಲ್ಲಿ ನಟಿಸುತ್ತಿದ್ದಾರೆ.