Advertisement
ಸಭೆಯಲ್ಲಿ ಮಾತನಾಡಿರುವ ಮಾಜಿ ಸಂಸದ ಉಗ್ರಪ್ಪ, ಕೆಪಿಸಿಸಿ ಆದೇಶದಂತೆ ಇಂದು ಸುದ್ದಿಗೋಷ್ಠಿ ನಡೆಸ್ತಾಯಿದ್ದೇವೆ, ಬಿಜೆಪಿಯವರು ಭ್ರಷ್ಟಾಚಾರ ಹೆಚ್ಚಾಗಿದೆ, ಲೋಕಪಾಲ ಕಾಯ್ದೆ ಜಾರಿಗೆ ಬರಬೇಕು ಅಂತ ಹೋರಾಟ ಮಾಡಿದ್ದವರು ಇದೇ ಬಿಜೆಪಿವರು. ಆದ್ರೆ ಇಂದು ಆ ಬಗ್ಗೆ ಬಿಜೆಪಿಯ ಯಾವ ನಾಯಕರು ಮಾತಡ್ತಾಯಿಲ್ಲ. ಕಪ್ಪು ಹಣ ದೇಶಕ್ಕೆ ವಾಪಸ್ ಬರುತ್ತೆ ಅಂತ ಹೇಳಿದ್ರೂ ಆ ಕೆಲಸ ಕೂಡ ಇವರಗೆ ಆಗಿಲ್ಲ ಎಂದು ಬಿಜೆಪಿಗೆ ಚಾಟಿ ಬೀಸಿದರು.
Related Articles
Advertisement
ಇದೇ ವೇಳೆ ಮಾಜಿ ಸಚಿವ ಕೃಷ್ಣ ಭೈರೇಗೌಡ ಹೇಳಿಕೆ ನೀಡಿದ್ದು, ಹಿಂದೆ ಯಡಿಯೂರಪ್ಪ ಸಿಎಂ ಆಗಿದ್ದಾಗ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ರು. ತಮ್ಮ ವೈಯಕ್ತಿಕ ಲಾಭಕ್ಕಾಗಿ ಡಿನೋಟಿಫಿಕೇಷನ್ ಮಾಡಿದ್ದಾರೆ. ಸ್ಪೆಷಲ್ ಕೋರ್ಟ್ ತಪ್ಪು ಮಾಡಿದೆ ಅಂತ ಹೈ ಕೋರ್ಟ್ ನ್ಯಾಯಮೂರ್ತಿ ಹೇಳಿದ್ದಾರೆ ಯಡಿಯೂರಪ್ಪ ವಿರುದ್ಧ ಈ ಹಿಂದೆಯೇ ಚಾರ್ಜ್ ಶೀಟ್ ಸಲ್ಲಿಕೆಯಾಗಿರುವುದರಿಂದ ತನಿಖೆಗೆ ಒಳಪಡಬೇಕು.
ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಅಧಿಕಾರ ದುರುಪಯೋಗ ಪಡಿಸಿ ಕೊಳ್ಳ ಬಾರದು. ಹೀಗಾಗಿ ವಿಚಾರಣೆ ನಡೆಯುವಾಗ ಯಡಿಯೂರಪ್ಪ ಅಧಿಕಾರ ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಯಡಿಯೂರಪ್ಪ ತಮ್ಮ ಸ್ಥಾನದಲ್ಲಿ ಇರದೇ ರಾಜೀನಾಮೆ ಕೊಡಬೇಕು ಎಂದರು.
ಯಾವ ಮುಖ ಇಟ್ಟುಕೊಂಡು ಬಿಜೆಪಿಯವರು ಯಡಿಯೂರಪ್ಪ ಅವ್ರನ್ನು ಸಿಎಂ ಆಗಿ ಮುಂದುವರೆಸುತ್ತಾರೆ? ಚಾರ್ಜ್ ಶೀಟ್ ಹಾಕಿದ ಹಿನ್ನೆಲೆ ಯಡಿಯೂರಪ್ಪ ಟ್ರಯಲ್ ಫೇಸ್ ಮಾಡಲಿ ಕಾಂಗ್ರೆಸ್ ಯಡಿಯೂರಪ್ಪ ಅವ್ರ ರಾಜೀನಾಮೆಗೆ ಆಗ್ರಹಿಸುತ್ತದೆ ಎಂದು ಉಗ್ರಪ್ಪ ಆಕ್ರೋಶ ವ್ಯಕ್ತಪಡಿಸಿದ್ರು.