Advertisement
ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿ, ನನಗೆ ಕೇಂದ್ರದಿಂದ ಯಾವುದೇ ನೋಟಿಸ್ ಬಂದಿಲ್ಲ. ನಿನ್ನೇ ವರಿಷ್ಠರೇ ನನ್ನೊಂದಿಗೆ ಮತನಾಡಿದ್ದಾರೆ. ಹೀಗಾಗಿ ವದಂತಿಗಳಿಗೆ ನಾನು ಹೆದರುವ ವ್ಯಕ್ತಿಯಲ್ಲ. ಸುಮ್ಮನೆ ಊಹಾ ಪೂಹ ಹರಡಿಸಿದ್ದಾರೆ ನಾನು ನೋಟಿಸ್ ಕೊಡುವಂತಹ ಯಾವುದೆ ಪಕ್ಷದ ವಿರೋಧಿ ಹೇಳಿಕೆ ನೀಡಿಲ್ಲ. ಭ್ರಷ್ಟರು, ವಂಶಪಾರಂಪರ್ಯ ರಾಜಕೀಯ ಮಾಡುವವರ ಬಗ್ಗೆ ಮಾತನಾಡಿದ್ದೇನೆ. ಇಂಥ ಮಾತುಗಳು ಪಕ್ಷ ವಿರೋಧಿ ಚಟುವಟಿಕೆ ಆಗಲು ಹೇಗೆ ಸಾಧ್ಯವಿದೆ ಎಂದು ಪ್ರಶ್ನಿಸಿದರು.
Related Articles
Advertisement
ವಿಜಯಪುರಕ್ಕೆ ಬಂದಿದ್ದ ವೇಳೆ ಅರುಣಸಿಂಗ್ ನನ್ನ ಜೊತೆಗೆ ಮಾತನಾಡಿದ್ದಾರೆ. ನಾನು ಮಂತ್ರಿ-ಮುಖ್ಯಮಂತ್ರಿ ಸ್ಥಾನ ಕೇಳಿಲ್ಲ. ರಾಜ್ಯದಲ್ಲಿ ನಾನು ಮಂತ್ರಿಗಿಂತ ಪವರ್ ಪುಲ್ ಆಗಿದ್ದೀನಿ. ಸಂಪುಟದ ಎಲ್ಲ ಮಂತ್ರಿಗಳು ನನ್ನ ಸ್ನೇಹಿತರೇ. ಹೀಗಾಗಿ ಎಲ್ಲರೂ ನನ್ನ ಬೇಡಿಕೆಗೆ ಸ್ಪಂದಿಸುತ್ತಾರೆ. ಹೀಗಾಗಿ ನಾನು ಯಾವುದನ್ನು ನಿರೀಕ್ಷೆ ಮಾಡುವುದಿಲ್ಲ ಎಂದರು.
ಮೋದಿ ಆಶೀರ್ವಾದವೇ ಇರಬೇಕು ಎನ್ನುತ್ತಿದ್ದಾರೆ. ಸತ್ಯ, ಒಳ್ಳೆಯತನಕ್ಕೆ ಆಶೀರ್ವಾದ ಇರುತ್ತದೆ. ವಾಜಪೇಯಿ ಕಾಲದಲ್ಲೂ ನನಗೆ ನೋಟಿಸ್ ನೀಡಿದ ಬೆನ್ನಲ್ಲೇ ಮಂತ್ರಿ ಮಾಡಿದ ಮಾದರಿಯಲ್ಲಿ ಈಗಲೂ ನೋಟಿಸ್ ನೀಡಿದ್ದರೆ ಊಹಾಪೋಹದ ಷಡ್ಯಂತ್ರ ಮಾಡಿದವರು ಹೈರಾಣಾಗುವಂತೆ ಸಂಕ್ರಮಣದ ಉತ್ತರಾಯಣ ಕಾಲದಲ್ಲಿ ನನಗೆ ಒಳ್ಳೆಯದಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.