ಬಿದರಾಣಿ ಮಸ್ಕಿ: ತುರ್ತು ಸ್ಪಂದನ ಸಹಾಯ ವ್ಯವಸ್ಥೆ ಅಪರಾಧ ಕಡಿಮೆ ಮಾಡಲು ಸಹಾಯವಾಗಲಿದೆ. ಇದಕ್ಕೆ ಸಾರ್ವಜನಿಕರು ಕೂಡ ಪೊಲೀಸರೊಂದಿಗೆ ಕೈಜೋಡಿಸಿದರೆ ಸಮಾಜದಲ್ಲಿ ಅಪರಾಧಗಳ ಸಂಖ್ಯೆ ಕಡಿಮೆಯಾಗಲಿದೆ ಎಂದು ಪಿಎಸ್‌ಐ ಸಿದ್ಧರಾಮ ಬಿದರಾಣಿ ಹೇಳಿದರು.
ಪಟ್ಟಣದಲ್ಲಿ ವಿವಿಧ ಸಾರ್ವಜನಿಕರ ಸ್ಥಳಗಳಲ್ಲಿ ಶುಕ್ರವಾರ 112 ತುರ್ತು ಸ್ಪಂದನ ಸಹಾಯವಾಣಿ ಭಿತ್ತಿಪತ್ರ ಅಂಟಿಸಿ ಜಾಗೃತಿ ಮೂಡಿಸಿ ಅವರು ಮಾತನಾಡಿದರು.
ಸಾರ್ವಜನಿಕರ ದೂರಿಗೆ ತಕ್ಷಣ ಸ್ಪಂದಿಸುವ ಉದ್ದೇಶದಿಂದ ಈ ಸೇವೆ ಆರಂಭಿಸಲಾಗಿದ್ದು, ತೊಂದರೆಯಲ್ಲಿರುವವರು 112 ಸಂಖ್ಯೆಗೆ ಕರೆ ಮಾಡಬೇಕು. ದೇಶಾದ್ಯಂತ ಒಂದೇ ತುರ್ತು ಕರೆ ಸಂಖ್ಯೆಯಾಗಿದೆ. ರಾಜ್ಯ ತುರ್ತು ಪ್ರತಿಕ್ರಿಯೆ ಕೇಂದ್ರದಿಂದ ಸೇವಾ ಸಮನ್ವಯ, ನಾಗರಿಕರಿಗೆ 24/7 ಕಾಲ ತುರ್ತು ಪ್ರತಿಕ್ರಿಯೆ ಬೆಂಬಲ ಸೇವೆಗಳು, ಸೇವಾ ವಿನಂತಿದಾರರ ಸ್ವಯಂಚಾಲಿತ ಸ್ಥಳ ಗುರುತಿಸುವಿಕೆ, ಡಿಜಿಟಲ್ ನಕ್ಷೆಯಲ್ಲಿ ಸೇವಾ ವಿನಂತಿಗಳು ಮತ್ತು ತುರ್ತು ಸ್ಪಂದನ ವಾಹನಗಳ ನೇರ ಪತ್ತೆ ತುರ್ತು ಸ್ಪಂದನ ಸಹಾಯ ವ್ಯವಸ್ಥೆಯ ಅನುಕೂಲತೆಗಳಾಗಿವೆ ಎಂದು ವಿವರಿಸಿದರು. ಮೊಬೈಲ್ ಆ್ಯಪ್ ವಿಧಾನಗಳ ಮೂಲಕ ತುರ್ತು ಸಂದರ್ಭದಲ್ಲಿ ಸಾರ್ವಜನಿಕರು ತುರ್ತು ಸೇವೆ ಪಡೆಯಬಹುದು ಎಂದರು.
ಈ ವೇಳೆ ತಹಶೀಲ್ದಾರ್ ಕಚೇರಿ ಶಿರಸ್ತೇದಾರ್ ಸಯ್ಯದ್ ಅಕ್ತರ್ ಅಲಿ, ಸಿಬ್ಬಂದಿಗಳಾದ ಉಮಾದೇವಿ, ಸುಜಾತ, ಪೊಲೀಸ್ ಸಿಬ್ಬಂದಿ ಈಶಪ್ಪ, ಆರೋಗ್ಯ ಇಲಾಖೆ ಸಿಬ್ಬಂದಿ ಸೇರಿದಂತೆ ಇತರರಿದ್ದರು.